Advertisement

Malabar group ಬಗ್ಗೆ ಅಪಪ್ರಚಾರ:  ಮುಂಬಯಿ ಹೈಕೋರ್ಟ್‌ ಕಠಿನ ತೀರ್ಪು

12:14 AM May 22, 2024 | Team Udayavani |

ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದ ಆಭರಣ ಸಂಸ್ಥೆಯಾದ ಮಲಬಾರ್‌ ಗ್ರೂಪ್‌ನ ವಿದ್ಯಾರ್ಥಿ ವೇತನದ ಬಗ್ಗೆ ಅಪಪ್ರಚಾರ ಮಾಡುವವರ ವಿರುದ್ಧ ಮುಂಬಯಿ ಹೈಕೋರ್ಟ್‌ ಕಠಿನ ತೀರ್ಪು ನೀಡಿದೆ.

Advertisement

ಮಲಬಾರ್‌ ಗ್ರೂಪ್‌ ಹಿಂದುಳಿದ ಕುಟುಂಬಗಳಿಗೆ ಸೇರಿದ 77,000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದೆ. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಾಮಾಜಿಕ ಮಾಧ್ಯಮದಲ್ಲಿ ಮಲಬಾರ್‌ ಗ್ರೂಪ್‌ ಸಮಾಜ ಸೇವೆಯ ಬಗ್ಗೆ ಅಪಪ್ರಚಾರ ಮಾಡಿ, ಸಂಸ್ಥೆಯ ಗೌರವಕ್ಕೆ ಚ್ಯುತಿ ತರುವ ಪ್ರಯತ್ನ ಮಾಡಿದೆ.

ಈ ಬಗ್ಗೆ ವಿಚಾರಣೆ ನಡೆಸಿದ ಮುಂಬಯಿ ಹೈಕೋರ್ಟ್‌ ಮಲಬಾರ್‌ ಗೋಲ್ಡ್‌ ಲಿಮಿಟೆಡ್‌ ಸಂಸ್ಥೆಯ ಪರವಾಗಿ ಮಧ್ಯಂತರ ಆದೇಶ ನೀಡಿದ್ದು, ಕೂಡಲೇ ಮಲಬಾರ್‌ ಗ್ರೂಪ್‌ಗೆ ಅಪಪ್ರಚಾರ ಮಾಡುವಂತಹ ಮಾಹಿತಿಯನ್ನು “ಎಕ್ಸ್‌’ ಖಾತೆಯಿಂದ ತೆಗೆದು ಹಾಕಬೇಕು ಹಾಗೂ ಮುಂದೆ ಮಾನಹಾನಿ ಹೇಳಿಕೆಗಳನ್ನು ಪ್ರಕಟಿಸಬಾರದು ಎಂದು ಪ್ರತಿವಾದಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇದರೊಂದಿಗೆ ಮಾನಹಾನಿಕರ ಪೋಸ್ಟ್‌ ಗಳು ಹಾಗೂ ಕಮೆಂಟ್‌ಗಳನ್ನು ಪ್ರಕಟಿಸುವವರ ಮೇಲೆ ನಿಗಾ ವಹಿಸಬೇಕೆಂದು ಎಕ್ಸ್‌, ಇಸ್ಟಾಗ್ರಾಂ, ಮೇಟಾ ಸಂಸ್ಥೆಗಳಿಗೆ ನಿರ್ದೇಶನ ನೀಡಲಿದೆ. ಅದೇ ರೀತಿ ಇನ್ನು ಮುಂದೆ ನಿರ್ದಿಷ್ಟ ಯೂಆರ್‌ಎಲ್‌ಗ‌ಳಲ್ಲಿ ಇಂತಹ ಕಂಟೆಂಟ್‌ಗಳನ್ನು ಅಪ್‌ಲೋಡ್‌ ಮಾಡುವುದನ್ನು ನಿಷೇಧಿಸಬೇಕು ಎಂದು ಸಂಸ್ಥೆಗಳಿಗೆ ಸೂಚಿಸಿದೆ.

ಮಲಬಾರ್‌ ಗ್ರೂಪ್‌ ಅಧ್ಯಕ್ಷ ಎಂ.ಪಿ.ಅಹ್ಮದ್‌ ಮಾತನಾಡಿ, ಸಮಾಜಕ್ಕೆ ಬಹುದೊಡ್ಡ ಪ್ರಯೋಜನ ಮಾಡುವ ಚಟುವಟಿಕೆಗಳನ್ನು ಅವಹೇಳನ ಮಾಡುವ ಮತ್ತು ದ್ವೇಷದ ಪ್ರಚಾರಕ್ಕಾಗಿ ದುರುಪಯೋಗ ಪಡಿಸಿಕೊಳ್ಳುವವರ ವಿರುದ್ಧ ಮುಂಬೈ ಹೈಕೋರ್ಟ್‌ ಬಲವಾದ ಆದೇಶ ನೀಡಿದೆ. ಇಂತಹ ಅಪಪ್ರಚಾರ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಮಲಬಾರ್‌ ಗ್ರೂಪ್‌ ಕಠಿಣ ಕ್ರಮ ಕೈಗೊಳ್ಳಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next