ಚಾಮರಾಜನಗರ: ಹನಿ ನೀರಾವರಿ, ಡೀಲರ್‌ಗಳಿಗೆ ಸಿಗಬೇಕಾದ ಸಬ್ಸಿಡಿ ಹಣದಲ್ಲಿ ಶೇ.8.5ರಷ್ಟು ಕಡಿತ ಮಾಡಿ ಕಂಪನಿಗಳೂ ಡೀಲರ್‌ಗಳಿಗೆ ನೀಡುತ್ತಿದ್ದು,ನೇರವಾಗಿ ತೋಟಗಾರಿಕೆ ಇಲಾಖೆ ಸಚಿವ ಮುನಿರತ್ನಅವರಿಗೆ ನೀಡಬೇಕೆಂದು ಹೇಳುತ್ತಿದ್ದಾರೆ ಎಂದು ಹನಿನೀರಾವರಿ ವಿತರಕರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಡಾ.ಗುರುಪ್ರಸಾದ್ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಹನಿ ನೀರಾವರಿಅಳವಡಿಸಿಕೊಳ್ಳಲು ಶೇ.90 ರವರಗೆ ಸಬ್ಸಿಡಿಯನ್ನುನೀಡಲಾಗುದು ಈ ಹಿಂದೆ ರೈತರು ಅರ್ಜಿ ಸಲ್ಲಿಸಿದ ಬಳಿಕ ಅವರು ಯಾವುದೇ ಕಂಪನಿಯ ಉಪಕರಣಗಳನ್ನುಅಳವಡಿಸಿಕೊಂಡರು ಅವರು ನೇರವಾಗಿ ಹಣ ಪಾವತಿಮಾಡಿದ್ದರೆ, ಆ ರೈತರ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿದೆ. ರೈತರು ತಾವು ಪೂರ್ಣ ಪಾವತಿ ಮಾಡಲುಸಾಧ್ಯವಿಲ್ಲ ಎಂದರೆ ಡೀಲರ್‌ಗಳು ಈ ಸಬ್ಸಿಡಿ ಹಣವನ್ನುಪಡೆದು ರೈತರಿಂದ ಉಳಿಕೆ ಹಣವನ್ನು ಪಡೆದುಕೊಂಡುಹನಿ ನೀರಾವರಿ ಪದ್ದತಿಯನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದರು.
ತೋಟಗಾರಿಕೆ ಸಚಿವ ಮುನಿರತ್ನ ಅವರು ಬಂದನಂತರ ಡೀಲರ್ ಹಾಗೂ ರೈತರಿಗೆ ತೊಂದರೆನೀಡುತ್ತಿದ್ದಾರೆ. ಕಂಪನಿಗಳ ಮುಖಾಂತರ ನೇರವಾಗಿಸಬ್ಸಿಡಿ ಪಡೆದುಕೊಳ್ಳಲು 8.5 ಕಮಿಷನ್ ನೀಡುವಂತೆ ಮೌಖಿಕ ಆದೇಶ ನೀಡಿದ್ದು, ಅದನ್ನು ಕಂಪನಿಗಳು ನಮ್ಮಂಥ ಡೀಲರ್‌ಗಳ ಮೇಲೆ ಹೇರುತ್ತಿದ್ದಾರೆ. ಈ ಬಗ್ಗೆಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕೆ ತಂದರುಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಅನ್ಯಮಾರ್ಗವಿಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರಿಗೆಸಂಘದಿಂದ ಪತ್ರ ರವಾನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ 5 ಸಾವಿರ ಹನಿ ನೀರಾವರಿ ಡೀಲರ್‌ಗಳಿದ್ದಾರೆ. ಹಿಂದೆ ರೈತರಿಗೆ ಹನಿ ನೀರಾವರಿ ಪರಿಕರಗಳನ್ನು ವಿತರಿಸಿ ಸಬ್ಸಿಡಿ ಹಣವನ್ನು ಪಡೆಯಲಾಗುತ್ತಿತ್ತು. ಆದರೆ, ಮುನಿರತ್ನ ಅವರು ತೋಟಗಾರಿಕೆ ಸಚಿವರಾದ ಬಳಿಕಡೀಲರ್ ಬಿಲ್ ರದ್ದು ಮಾಡಿ ಕಂಪನಿಗಳ ಬಿಲ್ ಕೊಡಲಾಗುತ್ತಿದೆ. ರೈತರಿಗೆ ವಿತರಿಸಿದ ಪರಿಕರಗಳ ಸಂಬಂಧ ಸಬ್ಸಿಡಿ ಹಣ ಬಂದಾಗ ಕಂಪನಿಯವರು ಶೇ.8.5 ರಷ್ಟು ಹಣ ಕಡಿತ ಮಾಡಿಕೊಂಡು ಸ್ಟೇಟ್ ಮೆಂಟ್ ಕಳಿಸಿದ್ದಾರೆ. ಈ ಸಂಬಂಧ ಪ್ರಶ್ನಿಸಿದ್ದಕ್ಕೆ ಸಚಿವರಿಗೆ ಪಸೆಂಟೇಜ್ ಕೊಡಬೇಕು ಎಂದು ಉತ್ತರ ನೀಡುತ್ತಾರೆ.
ಈ ಸಂಬಂಧ ಸಚಿವ ಮುನಿರತ್ನ ಅವರನ್ನು ಭೇಟಿ ಮಾಡಿಖುದ್ದು ಮನವಿ ಸಲ್ಲಿಸಲು ಸಂಘದ ಪದಾಧಿಕಾರಿಗಳುತೆರಳಿದ್ದರು ಸಹ ಅವರ ಪಿಎ ಭೇಟಿ ಮಾಡಲುಅವಕಾಶವನ್ನೇ ಮಾಡಿಕೊಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷ ಪರಶಿವಮೂರ್ತಿ, ಜಿಲ್ಲಾ ಉಪಾಧ್ಯಕ್ಷರಾದ ಕಡಬೂರು ಮಂಜುನಾಥ್, ರಾಜೇಶ್, ಮಹೇಶ್, ಕಾರ್ಯದರ್ಶಿ ಸಂಜಯ್, ಶಿವರುದ್ರಸ್ವಾಮಿ ಇತರರು ಇದ್ದರು