Advertisement

ಎಸ್.ಎಲ್ ಭೈರಪ್ಪ ಇತಿಹಾಸಕಾರ ಅಲ್ಲ: ವೀರಪ್ಪ‌ ಮೊಯ್ಲಿ ಕಿಡಿ

07:58 PM Nov 14, 2022 | Team Udayavani |

ಬೆಂಗಳೂರು : ಟಿಪ್ಪು ದೇಶದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ. ಟಿಪ್ಪು ಸುಲ್ತಾನ್ ಪ್ರತಿಮೆ ಏಕೆ ಮಾಡಬಾರದು ಎಂದು ಪ್ರಶ್ನಿಸಿರುವ ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ‌ ಮೊಯ್ಲಿ, ಎಸ್.ಎಲ್ ಭೈರಪ್ಪ ಇತಿಹಾಸಕಾರ ಅಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

Advertisement

ಬೆಂಗಳೂರಿನಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಎಲ್ಲ ಸಾಹಿತಿಗಳು ಇತಿಹಾಸಕಾರಲ್ಲ.ನಮ್ಮ ಇತಿಹಾಸವನ್ನು ಭೈರಪ್ಪ ನೋಡಲಿ.ಕಾದಂಬರಿ ‌ಬರೆದರೆ ಇತಿಹಾಸಕಾರ ಆಗುವುದಿಲ್ಲ.ಇತಿಹಾಸದಲ್ಲಿ ಟಿಪ್ಪು ಬಗ್ಗೆ ಏನು ಹೇಳಿದ್ದಾರೆ ಎಂದು ನೋಡಬೇಕು ಎಂದು‌ ಹೇಳಿದರು.

ಯುದ್ಧ ಮಾಡುವಾಗ ಕೆಲವರು ಸಾಯುತ್ತಾರೆ. ಅದಕ್ಕೆ ಚಕ್ರವರ್ತಿ ಕಾರಣ ಎಂದು ಆರೋಪ ಮಾಡುವುದು ಸರಿಯಲ್ಲ.ಟಿಪ್ಪು ಉತ್ತಮ ಆಡಳಿತಗಾರ,  ಬ್ರಿಟಿಷರ ವಿರುದ್ಧ ಹೋರಾಟ ಮಾಡಿದವರು.ದೇಶಕ್ಕಾಗಿ ಮಕ್ಕಳನ್ನು ಒತ್ತೆ ಇಟ್ಟವರು ಎಂದು ಹೇಳಿದರು.

ಕಾಂಗ್ರೆಸ್ ಅಧಿಕಾರಕ್ಕೆ  ಬಂದರೆ ಪ್ರತಿಮೆ ನಿರ್ಮಾಣ ಮಾಡುವುದು ಸರ್ಕಾರಕ್ಕೆ ಬಿಟ್ಟ ವಿಚಾರ. ಆ ಬಗ್ಗೆ ನಾನು‌ ಮಾತನಾಡುವುದಿಲ್ಲ ಎಂದರು.

ಕೆಂಪೇಗೌಡ ಪ್ರತಿಮೆ‌ ಉದ್ಘಾಟನಾ ಕಾರ್ಯಕ್ರಮಕ್ಕೆ ನನಗೂ ಆಹ್ವಾನ ಇತ್ತು.ಸಿಎಂ ಬಸವರಾಜ್ ಬೊಮ್ಮಾಯಿ ಕರೆ ಮಾಡಿದ್ದರು.ಆದರೆ ಆಹ್ವಾನ ಪತ್ರಿಕೆಯಲ್ಲಿ ಹೆಸರು ಇರಲಿಲ್ಲ.ಈ ಬಗ್ಗೆ ಸಿದ್ದರಾಮಯ್ಯ ಬಳಿ ಚರ್ಚಿಸಿ ಕಾರ್ಯಕ್ರಮಕ್ಕೆ ಹೋಗದಿರಲು ನಿರ್ಧರಿಸಿದೆವು.ಎಸ್.ಎಂ ಕೃಷ್ಣ ಅವಧಿಯಲ್ಲಿ ಬೆಂಗಳೂರು ಏರ್ ಪೋರ್ಟ್ ನಿರ್ಮಾಣ ಆಗಿತ್ತು.ವಿಮಾನ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ‌ಎಸ್.ಎಂ ಕೃಷ್ಣ ಕೂಡಾ ಇದ್ದರು. ಆದರೆ ಅವರನ್ನು  ವೇದಿಕೆ ಮೇಲೆ ಕೂರಿಸಿಲ್ಲ. ಇವರು ಇಂತಹ ಕೃತಞರು ಎಂದು ಆರೋಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next