ಭತ್ತದ ಕಣಜ ಎಂದೇ ಖ್ಯಾತಿ ಪಡೆದಿರುವ ಗಂಗಾವತಿ ನಗರ ಕಳೆದ ದಶಕದಿಂದ ಶೈಕ್ಷಣಿಕವಾಗಿ ಸಾಧನೆ ಮಾಡುತ್ತಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಭಾರತದ ಸಾಕ್ಷರತಾ ಮಟ್ಟ ಶೇ 80ರ ಆಸುಪಾಸಿಗೆ ತಲುಪಿದೆ. ಕಳೆದ 75 ವರ್ಷಗಳಲ್ಲಿ ದೇಶದ ಸಾಕ್ಷರತೆಯಲ್ಲಿ ಈ ಮಟ್ಟದ ಸುಧಾರಣೆ ತರುವಲ್ಲಿ ಸರ್ಕಾರ ಮತ್ತು ಅದೆಷ್ಟೋ ಸರ್ಕಾರೇತರ ಸಂಸ್ಥೆಗಳ ಯೋಗದಾನವಿದೆ.
ಶ್ರೀ ಜಿವ್ಹೇಶ್ವರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರು ಮತ್ತು ಅಧ್ಯಕ್ಷರಾದ ಶ್ರೀ ಕೃಷ್ಣ ಕೆಂಧೋಳೆಯವರು ಇಂತಹ ಒಂದು ಶಿಕ್ಷಣ ಸಂಸ್ಥೆಯೊಂದನ್ನು ಆರಂಭಿಸಿ, ಲಿಂಗ, ಜಾತಿ, ಮತಗಳಿಗೆ ಆಸ್ಪದ ನೀಡದೇ ಮುನ್ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯವಾಗಿದೆ.
ಕಲ್ಯಾಣ ಕರ್ನಾಟಕ ಪ್ರಾಂತ್ಯದ ಕೊಪ್ಪಳ ಜಿಲ್ಲೆ ಗಂಗಾವತಿ ನಗರವಾಸಿಯಾದ ಇವರು ವೃತ್ತಿಯಿಂದ ವ್ಯಾಪಾರಸ್ಥರಾದರೂ ಪ್ರವೃತ್ತಿಯಿಂದ ಶಿಕ್ಷಣ ಪ್ರೇಮಿಗಳಾಗಿದ್ದಾರೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದಾರೆ.
ಇವರು ತಮ್ಮ ತಂದೆಯವರ ಸ್ಮರಣಾರ್ಥ, ಗಂಗಾವತಿ ತಾಲೂಕಿನ ವಡ್ಡರಹಟ್ಟಿಯಲ್ಲಿ 2001ರಲ್ಲಿ ಶ್ರೀ ಕೆಂಧೋಳೆ ರಾಮಣ್ಣ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ, 2007ರಲ್ಲಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ, ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆಗಳನ್ನು ಆರಂಭಿಸಿದರು ಮತ್ತು 2020ರಲ್ಲಿ ಶ್ರೀ ಕೆಂಧೋಳೆ ರಾಮಣ್ಣ ಪದವಿ ಪೂರ್ವ ಕಾಲೇಜು ಆರಂಭಿಸಿದರು. ಆರಂಭಿಸಿದ ಮೂರೇ ವರ್ಷಗಳಲ್ಲಿ ತನ್ನ ಗುಣಮಟ್ಟದ ಶಿಕ್ಷಣದಿಂದಾಗಿ ಗಂಗಾವತಿ ಭಾಗದ ಉತ್ತಮ ಕಾಲೇಜುಗಳಲ್ಲಿ ಒಂದಾಗಿ ಕಾಲೇಜು ಖ್ಯಾತಿ ಹೊಂದಿತು.
ಈ ಭಾಗದಲ್ಲಿ ವಾಣಿಜ್ಯ ವಿಭಾಗದಲ್ಲಿ CA-CPT ಮತ್ತು ವಿಜ್ಞಾನ ವಿಭಾಗದಲ್ಲಿ Mains, CET, NEET, JEE (Mains) ಮತ್ತಿತರೆ ಸರ್ಧಾತ್ಮಕ ಪರೀಕ್ಷೆಗಳೊಂದಿಗೆ JEE (Advanced) ಮತ್ತು KVPY ಗಳನ್ನೊಳಗೊಂಡ ವಿಶೇಷ ತರಬೇತಿ ಒದಗಿಸುವುದರೊಂದಿಗೆ ಅತ್ಯುತ್ತಮ ವಿದ್ಯಾ ಸಂಸ್ಥೆಯೆಂದು ಹೆಸರುವಾಸಿಯಾಗಿದೆ.
5.5 ಎಕರೆ ಪ್ರದೇಶದಲ್ಲಿ ವಿಸ್ತಾರ ಮೈದಾನ ಹೊಂದಲಾಗಿದ್ದು, ಶೈಕ್ಷಣಿಕ, ಕ್ರೀಡೆ ಮತ್ತಿತರೆ ಸಂಬಂಧಿತ ಚಟುವಟಿಕೆಗಳಿಗೆ ಬೇಕಿರುವ ಸೌಕರ್ಯಗಳನ್ನೆಲ್ಲ ಒದಗಿಸಲಾಗಿದೆ. ಮುಂದಿನ ವರ್ಷಗಳಲ್ಲಿ ಉತ್ತರ ಕರ್ನಾಟಕ ಪ್ರಾಂತ್ಯದ ಅತ್ಯುತ್ತಮ ಪದವಿ ಪೂರ್ವ ಕಾಲೇಜುಗಳಲ್ಲೊಂದಾಗಿ ರೂಪಿಸಬೇಕೆನ್ನುವ ಗುರಿ ಹೊಂದಲಾಗಿದೆ.