Advertisement
ನಿಪ್ಪಾಣಿ ತಾಲೂಕಿನ ಗಡಿ ಗ್ರಾಮಗಳಾದ ಮಾಣಕಾಪೂರ ಮತ್ತು ಇನ್ನಿತರ ಗ್ರಾಮಗಳಲ್ಲಿ ಸುಮಾರು 50 ಕ್ಕೂ ಹೆಚ್ಚಿನ ದನಕರುಗಳಿಗೆ ಈ ರೋಗ ಅಂಟಿಕೊಂಡಿದ್ದು, ರಾಜ್ಯದ ಗಡಿ ಭಾಗದ ಮಹಾರಾಷ್ಟ್ರದಲ್ಲಿ ಈ ರೋಗ ಹೆಚ್ಚಿನ ಪ್ರಮಾಣದಲ್ಲಿ ಉಲ್ಬಣಗೊಂಡಿರುವ ಪರಿಣಾಮ ಈಗಾಗಲೇ ಗಡಿ ಗ್ರಾಮವಾದ ರಾಂಗೋಳೆಯಲ್ಲಿ ನಾಲ್ಕು ಜಾನುವಾರುಗಳು ಸಾವನ್ನಪ್ಪಿವೆ.
Related Articles
Advertisement
ಸೋಂಕಿತ ಪ್ರಾಣಿಗಳನ್ನು ಪ್ರತ್ಯೇಕಿಸಿ: ಪಶುಸಂಗೋಪನಾ ಇಲಾಖೆ ವೈದ್ಯರ ಪ್ರಕಾರ, ಸೋಂಕಿತ ಪ್ರಾಣಿಗಳನ್ನು ಆರೋಗ್ಯಕರ ಪ್ರಾಣಿಗಳಿಂದ ಸಂಪೂರ್ಣವಾಗಿ ಪ್ರತ್ಯೇಕಿಸಲು ರೈತರು ಮುಂದಾಗಬೇಕು. ಇದು ಸಾಂಕ್ರಾಮಿಕ ರೋಗವಾಗಿರುವುದರಿಂದ ಆರೋಗ್ಯವಂತ ಪ್ರಾಣಿಗಳೂ ಸೋಂಕಿತ ಪ್ರಾಣಿಗಳ ಸಂಪರ್ಕಕ್ಕೆ ಬಂದರೆ ರೋಗಕ್ಕೆ ತುತ್ತಾಗಬಹುದು. ಆರೋಗ್ಯಕರ ಪ್ರಾಣಿಗಳಿಗೆ ಉಳಿದ ನೀರು ಅಥವಾ ಸೋಂಕಿತ ಪ್ರಾಣಿಗಳ ಮೇವನ್ನು ತಿನ್ನಲು ಅನುಮತಿಸಬಾರದೆಂದು ಮಾಂಗೂರದ ಪಶು ವೈದ್ಯ ಅರವಿಂದ ಕಾಮಿರೆ ರೈತರಿಗೆ ಸಲಹೆ ನೀಡಿದ್ದಾರೆ.
ಚರ್ಮದ ಗಂಟು ರೋಗ ಸಾಂಕ್ರಾಮಿಕ ರೋಗವಾಗಿದೆ. ಜಾನುವಾರಗಳಲ್ಲಿ ಈ ರೋಗದ ಲಕ್ಷಣ ಕಂಡು ಬಂದರೇ ತಕ್ಷಣ ಆ ಜಾನುವಾರನ್ನು ಪ್ರತ್ಯೇಕಿಸಬೇಕು. ಕೂಡಲೇ ಪಶು ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಕೊಡಿಸಬೇಕು. ಈಗಾಗಲೇ ಇದನ್ನು ತಡೆಯಲು ಜಾನುವಾರಗಳ ಸಂತೆಯನ್ನು ಜಿಲ್ಲಾಧಿಕಾರಿಗಳು ರದ್ದು ಮಾಡಿದ್ದಾರೆ. ರೈತರು ಸದ್ಯದ ಪರಿಸ್ಥಿಯಲ್ಲಿ ಜಾನುವಾರುಗಳನ್ನು ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ತೆಗೆದುಕೊಂಡು ಹೋಗಬಾರದು. ಡಾ| ಸದಾಶಿವ ಉಪ್ಪಾರ, ಸಹಾಯಕ ನಿರ್ದೇಶಕರು, ಪಶು ಸಂಗೋಪನಾ ಇಲಾಖೆ, ಚಿಕ್ಕೋಡಿ