Advertisement

Dohaದಲ್ಲಿ 12ನೇ ವಾರ್ಷಿಕೋತ್ಸವ ಆಚರಿಸಿದ ಸ್ಕಿಲ್ಸ್ ಡೆವೆಲಪ್ಮೆಂಟ್ ಸೆಂಟರ್

04:46 PM Jun 12, 2024 | Team Udayavani |

ಕತಾರ್: ಇಲ್ಲಿನ ಸ್ಕಿಲ್ಸ್ ಡೆವೆಲಪ್ಮೆಂಟ್ ಸೆಂಟರ್ ದೋಹಾ ತಮ್ಮ 12ನೇ TAAL YATRA ವಾರ್ಷಿಕೋತ್ಸವವನ್ನು ಜೂನ್ 1ರಂದು ಆಚರಿಸಿತು. ಇದು ಹಿಂದೂಸ್ತಾನಿ ಸಂಗೀತದ ತಬಲಾ ವಿಭಾಗದ ವಾರ್ಷಿಕ ಕಾರ್ಯಕ್ರಮವಾಗಿದೆ.

Advertisement

ತಬಲಾ ಶಿಕ್ಷಕ ಪಂಡಿತ ಸಂತೋಷ ಕುಲಕರ್ಣಿ ಮಾರ್ಗದರ್ಶನದಲ್ಲಿ 3 ರಿಂದ 63 ವಯಸ್ಸಿನ ಸುಮಾರು 35 ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿದ ಕುಲಕರ್ಣಿಯವರ ವಿದ್ಯಾರ್ಥಿಗಳು ವೇದಿಕೆಯಲ್ಲಿ ತಬಲಾ ವಾದನ ಮಾಡಿದರು.

ಹಿಂದೂಸ್ತಾನಿ ವೋಕಲ್ ಶಿಕ್ಷಕ ಪ್ರಸಾದ್ ಪೂಜಾರ್ ಸೇರಿದಂತೆ ಗಾಯಕರೊಂದಿಗೆ ಈ ಕಾರ್ಯಕ್ರಮ ನೆರವೇರಿತು. ಭಾರತೀಯ ಕಾಲೇಜುಗಳಲ್ಲಿ ಓದುತ್ತಿರುವ ಸುಮಾರು 3 ವಿದ್ಯಾರ್ಥಿಗಳು ಕೇವಲ TAAL YATRA ಗಾಗಿ ಪಾಲ್ಗೊಂಡರು. ಇದು SDC ಯ ಒಂದು ಪ್ರಸಿದ್ಧ ಸಾಂಸ್ಕೃತಿಕ ಕಾರ್ಯಕ್ರಮವಾಗಿದೆ.

ಸಾಮೂಹಿಕ ಮುಖಂಡರು, ಕರ್ನಾಟಕ ಸಂಘ ಕತಾರ್ ನ ಪ್ರಸ್ತುತ ಅಧ್ಯಕ್ಷ ರವಿ ಶೆಟ್ಟಿ ಮತ್ತು ಮಾಜಿ ಅಧ್ಯಕ್ಷ ಅರುಣ್ ಕುಮಾರ್, ICC ಉಪಾಧ್ಯಕ್ಷ ಸುಬ್ರಮಣ್ಯ ಹೆಬ್ಬಗಿಲು ಮತ್ತು ಮಾಜಿ ಅಧ್ಯಕ್ಷೆ ಮಿಲಾನ್ ಅರುಣ್, ಬಿಲ್ಲವಾಸ್ ಕತಾರ್ ಅಧ್ಯಕ್ಷ ಸಂದೀಪ್ ಸಲಿಯಾನ್, ಮಹಾರಾಷ್ಟ್ರ ಮಂಡಲ್ ಅಧ್ಯಕ್ಷ ರಾಕೇಶ್ ವಾಘ್, ಶಾಲೆಗಳ ಮುಖ್ಯಸ್ಥರು, ತುರ್ಕಿಯ ಸಂಸ್ಕೃತಿ ಕೇಂದ್ರದ ಪ್ರತಿನಿಧಿಗಳು ಮತ್ತು ಕಾರ್ಪೊರೇಟ್ ಮುಖಂಡರು ಉಪಸ್ಥಿತರಿದ್ದರು.

Advertisement

ಹೋಸ್ಟ್ ಮಿಸಸ್ ಸುಷ್ಮಾ ಹರೀಶ್, ಮ್ಯಾನೇಜಿಂಗ್ ಡೈರೆಕ್ಟರ್ ಬಾಬುರಾಜನ್ ಅವರನ್ನು ಹಿಂದೂಸ್ತಾನಿ ಸಂಗೀತದ ಕೇಂದ್ರದಲ್ಲಿ ಅವರ ಬೆಂಬಲ ಮತ್ತು ಉತ್ತೇಜನಕ್ಕಾಗಿ ವಿಶೇಷವಾಗಿ ಶ್ಲಾಘಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next