Advertisement

5 ಲಕ್ಷ ಯುವ ಸಮೂಹಕ್ಕೆ ಕೌಶಲ್ಯ ತರಬೇತಿ

06:15 AM Mar 05, 2018 | |

ಬೆಂಗಳೂರು: ರಾಜ್ಯದಲ್ಲಿ ಯುವಸಮೂಹಕ್ಕೆ ಉದ್ಯೋಗಾವಕಾಶ ಕಲ್ಪಿಸಲು ಸರ್ಕಾರ ಕೌಶಲ್ಯಾಭಿವೃದ್ಧಿಗಾಗಿಯೇ ಪ್ರತ್ಯೇಕ ಇಲಾಖೆ ರಚಿಸಿದ್ದು, 5 ಲಕ್ಷ ಯುವಕ-ಯುವತಿಯರಿಗೆ ಕೌಶಲ್ಯ ತರಬೇತಿ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ನಗರದ ಭಾನುವಾರ ಹಮ್ಮಿಕೊಂಡಿದ್ದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಸುವರ್ಣ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯುವಸಮೂಹಕ್ಕೆ ಕೌಶಲ್ಯ ತರಬೇತಿ ನೀಡಿ ಮಾನವ ಸಂಪನ್ಮೂಲ ಸೃಷ್ಟಿಸಿ ಕೈಗಾರಿಕೆಗಳಲ್ಲಿ ಉದ್ಯೋಗ ದೊರಕಿಸಿಕೊಡುವುದು ಸರ್ಕಾರದ ಗುರಿ ಎಂದು ತಿಳಿಸಿದರು.

2013ರಲ್ಲಿ ರಾಜ್ಯವು ಹೂಡಿಕೆಗೆ 11ನೇ ಸ್ಥಾನದಲ್ಲಿತ್ತು. ಈಗ ಮೊದಲ ಸ್ಥಾನದಲ್ಲಿದೆ. ಇದರರ್ಥ ಬಂಡವಾಳ ಹೂಡಿಕೆಗೆ ನಮ್ಮಲ್ಲಿ ಪೂರಕ ವಾತಾವರಣ ಸೃಷ್ಟಿಯಾಗಿದೆ ಎಂದಾಯಿತು. ಕೈಗಾರಿಕೆಗಳಿಗೆ ಸಣ್ಣ ತೊಂದರೆಯೂ ಆಗದಂತೆ ಸರ್ಕಾರ ನೋಡಿಕೊಳ್ಳಲಿದೆ ಎಂದು ಭರವಸೆ ನೀಡಿದರು.

ಕಿವಿಮಾತು: ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಇನ್ಫೋಸಿಸ್‌ ಸಂಸ್ಥಾಪಕ ಎನ್‌.ಆರ್‌.ನಾರಾಯಣಮೂರ್ತಿ,ರಾಜ್ಯದ ಯಾವುದೇ ಕೈಗಾರಿಕೆ ಅಭಿವೃದ್ಧಿ ವಿಚಾರದಲ್ಲಿ ಸರ್ಕಾರವು ತ್ವರಿತ ಗತಿಯಲ್ಲಿ ನಿರ್ಧಾರಗಳನ್ನು ಕೈಗೊಳ್ಳುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು. ಈ ವಿಚಾರದಲ್ಲಿ ಚೀನಾವನ್ನು ನೋಡಿ ಕಲಿಯಬೇಕು ಎಂದು ಕಿವಿಮಾತು ಹೇಳಿದರು.

ಚೀನಾದ ಶಾಂಘೈನಲ್ಲಿ ಒಂದು ತುಣುಕು ಭೂಮಿಯನ್ನು ನಾವು ಕೇಳಿದ್ದೆವು. ಕೇವಲ 24 ಗಂಟೆಗಳಲ್ಲಿ ಆ ನಗರದ ಪ್ರಮುಖ ಸ್ಥಳದಲ್ಲಿ 25 ಎಕರೆ ಭೂಮಿಯನ್ನು ಅಲ್ಲಿನ ಸ್ಥಳೀಯ ಸಂಸ್ಥೆ ಮಂಜೂರು ಮಾಡಿಕೊಟ್ಟಿತು. ಇಷ್ಟೊಂದು ತ್ವರಿತ ಗತಿಯಲ್ಲಿ ನಿರ್ಧಾರ ತೆಗೆದುಕೊಳ್ಳುವುದನ್ನು ಜಗತ್ತಿನ ಯಾವುದೇ ದೇಶದಲ್ಲಿ ನಾನು ನೋಡಿಲ್ಲ. ಇದೇ ಕಾರಣಕ್ಕೆ ಚೀನಾ ಇಂದು ಕೈಗಾರಿಕೆ ಅಭಿವೃದಿಟಛಿ ಮತ್ತು ಹೂಡಿಕೆಯಲ್ಲಿ ಮುಂಚೂಣಿಯಲ್ಲಿದೆ. ಚೀನಾದವರನ್ನು ನೋಡಿ ಕರ್ನಾಟಕ ಕಲಿಯಬೇಕಿದೆ ಎಂದು ತಿಳಿಸಿದರು. 

Advertisement

ಭಾರೀ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಆರ್‌.ವಿ.ದೇಶಪಾಂಡೆ ಮಾತನಾಡಿ, ಚೀನಾದಲ್ಲಿ ಸಾಧ್ಯವಾದದ್ದು ನಮ್ಮಲ್ಲಿ ಯಾಕೆ ಆಗುವುದಿಲ್ಲ? ಮನಸ್ಸು ಮಾಡಿದರೆ, ನಾನೂ ಕೇವಲ 24 ಗಂಟೆಯಲ್ಲಿ ಭೂಮಿ ಮಂಜೂರು ಮಾಡಿಕೊಡಬಲ್ಲೆ. ಆದರೆ, ಇದಕ್ಕೆ ನಿಮ್ಮೆಲ್ಲರ (ಕೆಐಎಡಿಬಿ ಅಧಿಕಾರಿಗಳಿಗೆ) ಸಹಕಾರ ಅತ್ಯಗತ್ಯ ಎಂದು ಹೇಳಿದರು.

ಅನಗತ್ಯ ಭೂಸ್ವಾಧೀನ; ಆಕ್ರೋಶ: ಕೈಗಾರಿಕೆಗಳ ಹೆಸರಿನಲ್ಲಿ ಅನಗತ್ಯ ಭೂಸ್ವಾಧೀನ ಸರಿ ಅಲ್ಲ. ಬೇಕಾಬಿಟ್ಟಿ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸುವುದು ಸಲ್ಲದು. ರೈತರು ಎಲ್ಲಿಗೆ ಹೋಗಬೇಕು ಎಂದು ಸಚಿವ ದೇಶಪಾಂಡೆ ಹರಿಹಾಯ್ದರು.

ಕಾರ್ಯಕ್ರಮದಲ್ಲಿ ಮೇಯರ್‌ ಸಂಪತ್‌ರಾಜ್‌, ಎಫ್ ಕೆಸಿಸಿಐ ಅಧಿಕಾರಿ ರವಿ, ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ, ಕೆಐಎಡಿಬಿ ಅಧ್ಯಕ್ಷ ಡಿ. ಪ್ರಸಾದ್‌, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜೈರಾಂ, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್‌, ಕೈಗಾರಿಕಾಭಿವೃದ್ಧಿ ಆಯುಕ್ತ ದರ್ಪಣ್‌ ಜೈನ್‌, ಎಫ್ಕೆಸಿಸಿಐ ಅಧ್ಯಕ್ಷ ರವಿ,ಕಾಸಿಯಾ ಅಧ್ಯಕ್ಷ ಹನುಮಂತೇಗೌಡ ಮತ್ತಿತರರು ಉಪಸ್ಥಿತರಿದ್ದರು.

3.46 ಲಕ್ಷ ಕೋಟಿ ಬಂಡವಾಳ
ರಾಜ್ಯ ಉನ್ನತಾಧಿಕಾರ ಮಟ್ಟದ ಸಮಿತಿಯಿಂದ ಕಳೆದ ಐದು ವರ್ಷಗಳಲ್ಲಿ 1,923 ಯೋಜನೆಗಳಿಗೆ ಅನುಮೋದನೆ ನೀಡಿದ್ದು, 3.46 ಲಕ್ಷ ಕೋಟಿ ಬಂಡವಾಳ ಹರಿದು ಬಂದಿದೆ. ಅದರಲ್ಲೂ 2018ರ ಫೆ. 23ರಂದು ನಡೆದ ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನೆ ಸಮಿತಿ (ಎಸ್‌ಎಲ್‌ಎಸ್‌ಡಬುÉಸಿಸಿ) ಸಭೆಯಲ್ಲಿ ಐದು ಪ್ರತಿಷ್ಠಿತ ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಇದರಿಂದ 6,705 ಕೋಟಿ ರೂ. ಬಂಡವಾಳ ಹರಿದು ಬರುತ್ತಿದೆ.

–  ಆರ್‌.ವಿ. ದೇಶಪಾಂಡೆ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next