Advertisement
ನಿಯಮ ಇಂತಿದೆಉದಾಹರಣೆಗೆ ಸುಳ್ಯ ನಗರ ಪಂಚಾಯತ್ ನ ಪರವಾನಿಗೆ ಹೊಂದಿರುವ ಖಾಸಗಿ ಕಟ್ಟಡದಲ್ಲಿ ಅಂಗಡಿ, ಕಚೇರಿ ಇತ್ಯಾದಿ ವ್ಯವಹಾರ ಆರಂಭಿಸಬೇಕು ಎಂದಿಟ್ಟುಕೊಳ್ಳೋಣ. ಅಂಗಡಿ ಮಾಡುವ ವ್ಯಕ್ತಿ ಕಟ್ಟಡ ಪರವಾನಿಗೆ ಹೊಂದಿದ್ದರೆ ಸಾಲದು. ಆತ ತಾನು ವ್ಯವಹಾರ ನಡೆಸುವ ಉದ್ದೇಶವನ್ನು ದಾಖಲಿಸಿ ನಗರ ಪಂಚಾಯತ್ ಗೆ ಪರವಾನಿಗೆ ನೀಡುವಂತೆ ಅರ್ಜಿ ಸಲ್ಲಿಸಬೇಕು. ಬಳಿಕ ಕಂದಾಯ ನಿರೀಕ್ಷಕರು, ಆರೋಗ್ಯ ನಿರೀಕ್ಷಕರು ಆ ಕಟ್ಟಡ/ ಸ್ಥಳವನ್ನು ಪರಿಶೀಲಿಸಿ, ಅನುಮತಿ ನೀಡುವ ಕುರಿತು ತೀರ್ಮಾನಿಸುತ್ತಾರೆ.
ಸ್ಕಿಲ್ ಗೇಮ್ ಹೆಸರಿನಲ್ಲಿ ಜೂಜಾಟ ನಡೆಯುತ್ತಿರುವ ಕುರಿತು ಜನಸಾಮಾನ್ಯರಿಗೆ ಮಾಹಿತಿ ಇದೆ. ಆದರೆ ಸ್ಥಳೀಯಾಡಳಿತಗಳು ಮಾತ್ರ ಗೊತ್ತೇ ಇಲ್ಲ ಅನ್ನುತ್ತಿವೆ. ನಗರಸಭೆ, ನಗರಪಂಚಾಯತ್ ಅಥವಾ ಇತರ ಸ್ಥಳೀಯಾಡಳಿತದ ಅಧಿಕಾರಿಗಳು ನಾವು ಪರವಾನಿಗೆಯೇ ಕೊಟ್ಟಿಲ್ಲ ಎನ್ನುತ್ತಾರೆ. ಪರವಾನಿಗೆ ಕೊಡದೆ ಸ್ಕಿಲ್ ಗೇಮ್ ಕೇಂದ್ರ ತೆರೆಯಲು ಹೇಗೆ ಸಾಧ್ಯ? ಕಾನೂನುಬಾಹಿರ ವ್ಯವಹಾರವನ್ನು ಮುಚ್ಚಿಸುವ ಅಧಿಕಾರ ಸ್ಥಳೀಯಾಡಳಿತಕ್ಕೆ ಇದ್ದರೂ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಪ್ರಶ್ನೆಯೀಗ ಉದ್ಭವಿಸಿದೆ.
Related Articles
ಇಲ್ಲಿ ಕಟ್ಟಡ ಪರವಾನಿಗೆ ಕೊಟ್ಟಿರುವ ಸ್ಥಳೀಯಾಡಳಿತ ಬಳಿಕ ವ್ಯಾಪಾರ ಇನ್ನಿತರ ವ್ಯವಹಾರಗಳಿಗೂ ಅನುಮತಿ ಕೊಟ್ಟಿದೆ. ಆದರೆ ಅರ್ಜಿದಾರನ ಉದ್ದೇಶವನ್ನು ಖಚಿತಪಡಿಸಿಕೊಂಡಿಲ್ಲ. ಒತ್ತಡಕ್ಕೆ ಒಳಗಾಗಿ ಅನುಮತಿ ಕೊಟ್ಟು, ಅವ್ಯವಹಾರ ನಡೆಯುತ್ತಿರುವ ಅರಿವಿದ್ದರೂ ಅಧಿಕಾರಿಗಳು ಬಾಯಿ ಬಿಡುತ್ತಿಲ್ಲ. ಕೆಲವೆಡೆ ಕಮಿಷನ್ ಆಸೆಗೆ ಒಪ್ಪಿಗೆ ಕೊಟ್ಟ ಪ್ರಕರಣಗಳೂ ಇವೆ.
Advertisement
ಸಂಪೂರ್ಣ ವಿರೋಧಸ್ಕಿಲ್ ಗೇಮ್ ಹೆಸರಿನಲ್ಲಿ ನಡೆಯುತ್ತಿರುವ ಜೂಜಾಟದಂತಹ ಅಕ್ರಮ ಅಡ್ಡೆಗಳಿಗೆ ನಮ್ಮ ಸಂಪೂರ್ಣ ವಿರೋಧ ಇದೆ. ಇದಕ್ಕೆ ಅನುಮತಿ ಕೊಟ್ಟಿಲ್ಲ ಎನ್ನುವುದಾದರೆ ಆರಂಭಗೊಂಡದ್ದು ಹೇಗೆ ಎನ್ನುವ ಪ್ರಶ್ನೆ ಮೂಡುತ್ತದೆ. ಕಠಿನ ಕ್ರಮ ಕೈಗೊಳ್ಳುವಂತೆ ಮುಖ್ಯಾಧಿಕಾರಿಗೆ ಸೂಚಿಸಲಾಗಿದೆ.
– ಶೀಲಾವತಿ ಮಾಧವ, ಅಧ್ಯಕ್ಷೆ, ಸುಳ್ಯ ನ.ಪಂ.