Advertisement

ಅರ್ಬನ್‌ ಪ್ಲಾನರ್‌ ಎಂಬ ಸ್ಕೆಚ್‌ ಮಾಸ್ಟರ್‌

06:00 AM Jun 05, 2018 | Team Udayavani |

ಉತ್ತಮ ನಗರವೊಂದು ನಿರ್ಮಾಣವಾಗಬೇಕೆಂದರೆ ಸರ್ಕಾರ ಅದೆಷ್ಟೋ ಪೂರ್ವಯೋಜನೆಗಳನ್ನು ತಯಾರಿಸುತ್ತದೆ. ಆ ಪ್ರದೇಶದಲ್ಲಿ ಒದಗಿಬರುವ ಸಂಪನ್ಮೂಲ, ನಗರ ಪ್ರದೇಶದ ವಿಸ್ತೀರ್ಣ, ಪ್ರಾಕೃತಿಕ ಅನುಕೂಲ- ಅನನುಕೂಲ, ವ್ಯಾಪಾರ ವಹಿವಾಟು, ಸಾರಿಗೆ ಸಂಪರ್ಕ… ಹೀಗೆ ಬೇರೆ ಬೇರೆ ದೃಷ್ಟಿಕೋನದಲ್ಲಿಟ್ಟುಕೊಂಡು ನಗರವಾಗಲು ಈ ಪ್ರದೇಶ ಸೂಕ್ತವೇ ಎಂದು ಪರಿಶೀಲಿಸಲಾಗುತ್ತದೆ. ಆನಂತರ ಯಾವ ಪ್ರದೇಶದಲ್ಲಿ ಯಾವ ರೀತಿಯ ಕಟ್ಟಡಗಳನ್ನು ನಿರ್ಮಿಸಬೇಕೆಂದು ಪ್ಲಾನ್‌ ತಯಾರಿಸಲಾಗುತ್ತದೆ. ಇದಕ್ಕೆ ಸಹಾಯ ಮಾಡುವ ವರ್ಗವೇ ಅರ್ಬನ್‌ ಪ್ಲಾನರ್‌ಗಳು. ಇವರು, ಸರ್ಕಾರಕ್ಕೆ ಸಲಹೆಗಳನ್ನು ನೀಡುತ್ತಾ ಕಾರ್ಯಯೋಜನೆಯನ್ನು ತಯಾರಿಸಿಕೊಡುತ್ತಾರೆ. 

Advertisement

ಅರ್ಬನ್‌ ಪ್ಲಾನರ್‌
ಬೆಂಗಳೂರಿನಲ್ಲಿ ಹೆಚ್ಚು ಮಳೆಯಾದಾಗಲೆಲ್ಲಾ ನೀರು ಎಲ್ಲೆಂದರಲ್ಲಿ ನಿಂತುಬಿಡುತ್ತದೆ. ಸರಾಗವಾಗಿ ನೀರು ಹರಿದು ಹೋಗದ್ದರಿಂದ ರಸ್ತೆಯೇ ಕೆರೆಯಂತಾಗುತ್ತದೆ. ಮನೆಯೊಳಕ್ಕೆ ನೀರು ನುಗ್ಗುತ್ತದೆ. ಅಂಥ ಸಂದರ್ಭದಲ್ಲೆಲ್ಲಾ, ನಗರವನ್ನು ಯೋಜಿತವಾಗಿ ನಿರ್ಮಾಣ ಮಾಡಿಲ್ಲ. ಅದಕ್ಕಾಗಿಯೇ ಜನರಿಗೆ ಹೀಗೆಲ್ಲಾ ಸಂಕಷ್ಟ ಜೊತೆಯಾಗುತ್ತದೆ ಎಂದು ಹೇಳುವುದಿದೆ. ದೇಶದ ಬೇರೆ ಬೇರೆ ಮಹಾನಗರಗಳಲ್ಲೂ ಇದೇ ಮಾದರಿಯ ಬೇರೆ ಬೇರೆ ಸಮಸ್ಯೆಗಳಿವೆ. ಇವಕ್ಕೆಲ್ಲಾ ಮುಖ್ಯ ಕಾರಣ, ನಗರ ನಿರ್ಮಾಣದ ಕಾಲದಲ್ಲಿ ತಗೆದುಕೊಂಡ ಸರ್ಕಾರದ ನಿಲುವುಗಳು. ಅಥವಾ ಒಂದು ಪ್ರದೇಶ ಹೋಬಳಿಯಾಗಿ, ತಾಲೂಕಾಗಿ, ಪುರಸಭೆ, ನಗರಸಭೆ, ನಗರಪಾಲಿಕೆ, ಮಹಾನಗರಪಾಲಿಕೆಯಾಗಿ ವಿವಿಧ ಹಂತದಲ್ಲಿ ಬೆಳವಣಿಗೆ ಹೊಂದುವಾಗ ಆದ ಬದಲಾವಣೆ ಅಥವಾ ತೊಂದರೆ ಎನ್ನಬಹುದು.

ನಗರ ನಿರ್ಮಾಣದ ಕಾಲದಲ್ಲಿ ಮನೆಗಳ ನಿರ್ಮಾಣ, ಮಾರುಕಟ್ಟೆ ವ್ಯವಸ್ಥೆ, ಎಪಿಎಂಸಿ, ಬಸ್‌ನಿಲ್ದಾಣ, ವ್ಯಾಪಾರ ಕೇಂದ್ರಗಳು, ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳು, ಆಸ್ಪತ್ರೆಗಳು, ನ್ಯಾಯಾಲಯ ಹೀಗೆ ಅನೇಕ ವ್ಯವಸ್ಥೆಗಳು ಬೇಕು. ಇವು ಎಲ್ಲೆಲ್ಲಿ ಇದ್ದರೆ ಸೂಕ್ತ? ಅವುಗಳ ನಿರ್ಮಾಣ ಪ್ರದೇಶದಲ್ಲಿ ಪ್ರಾಕೃತಿಕ ಅನುಕೂಲ, ಅಡಚಣೆ ಏನೇನಿದೆ? ನೀರಿನ ವ್ಯವಸ್ಥೆ ಮೂಲಸೌಕರ್ಯ, ಅಗತ್ಯ ಮತ್ತು ಜಲಸಂಪನ್ಮೂಲ ಎಷ್ಟು ಪ್ರಮಾಣದಲ್ಲಿದೆ ಎಂದು ನಿರ್ಧರಿಸಿ ನಗರಕ್ಕೆ ಬೇಕಾದ ಅವಶ್ಯಕತೆಗಳನ್ನೆಲ್ಲ ಲೆಕ್ಕ ಹಾಕಿ ಕಾರ್ಯಯೋಜನೆಯನ್ನು ರೂಪಿಸುವವರು ಅರ್ಬನ್‌ ಪ್ಲಾನರ್‌ಗಳು. ಇವರು ಸರ್ಕಾರದ ಕೊಂಡಿಯಂತೆ ಕಾರ್ಯನಿರ್ವಹಿಸಿ ಸಲಹೆ, ಸೂಚನೆ ನೀಡುತ್ತಾರೆ. ಕೆಲವೊಮ್ಮೆ ಸರ್ಕಾರವೇ ಇವರನ್ನು ನೇಮಿಸಿಕೊಂಡು ಅಗತ್ಯ ಮಾಹಿತಿ ಪಡೆಯುತ್ತದೆ. 

ಓದು ಹೀಗಿರಲಿ
ಅರ್ಬನ್‌ಪ್ಲಾನರ್‌ ಆಗಬಯಸುವವರು ಪಿಯುಸಿ ಬಳಿಕ ಪದವಿಯಲ್ಲಿ ಬಿಎ(ಎಕನಾಮಿಕ್ಸ್‌, ಸೋಶಿಯಾಲಜಿ) ಅಥವಾ ಬಿ.ಆರ್ಕಿಟೆಕ್ಟ್ ಆರಿಸಿಕೊಳ್ಳಿ. ಸ್ನಾತಕೋತ್ತರ ಪದವಿಯಲ್ಲಿ ಎಂ.ಎ. ಅಥವಾ ಎಂ.ಪ್ಲಾನಿಂಗ್‌ ವಿಷಯವನ್ನು ಓದಿದರೆ ಅರ್ಬನ್‌ ಪ್ಲಾನರ್‌ ಅಗಬಹುದು. ಮತ್ತೂಂದು ಮಾರ್ಗದಲ್ಲಿ ವಿಜ್ಞಾನ ವಿಷಯದಲ್ಲಿ ಪಿಯುಸಿ ಬಳಿಕ ಪದವಿಯಲ್ಲಿ ಬಿ.ಆರ್ಕಿಟೆಕ್ಟ್ ಅಥವಾ ಬಿ.ಟೆಕ್‌ ಅಭ್ಯಾಸ ಮಾಡಿ, ಪ್ಲಾನಿಂಗ್‌ ವಿಷಯದಲ್ಲಿ ಎಂ.ಟೆಕ್‌ ಮಾಡಿದರೆ ಅರ್ಬನ್‌ ಪ್ಲಾನರ್‌ ಆಗುವುದು ಸುಲಭ.

ಕೌಶಲ್ಯಗಳೂ ಬೇಕು
ನಗರ ಪ್ರದೇಶಗಳ ರಚನೆ, ಮೂಲಸೌಕರ್ಯದ ಬಳಕೆ, ರಸ್ತೆ, ನಿವೇಶನ, ಉಪವನ, ಭವನ, ಸರ್ಕಾರಿ ವಲಯ, ಹೀಗೆ ಪ್ರತಿಯೊಂದು ವಿಷಯದ ಬಗೆಗೆ ಜ್ಞಾನ ಆಯಾ ಪ್ರದೇಶದ ಹಿನ್ನೆಲೆ. ಪ್ರಾಕೃತಿಕ ಸ್ಥಿತಿಗತಿಗಳ ಬಗ್ಗೆ ಅರಿವು ಸ್ಕೆಚ್‌ಗಳನ್ನು ರಚಿಸುವ, ವಿಷಯ ಸಂಬಂಧಿತ ತಂತ್ರಾಂಶ ಬಳಸುವ ತಿಳಿವಳಿಕೆ ಸಮೂಹದಲ್ಲಿ ಕಾರ್ಯ ನಿರ್ವಹಿಸುವ, ಸಮಸ್ಯೆಗಳನ್ನು ಎದುರಿಸುವ, ಉತ್ತಮ ಸಂವಹನ ಕೌಶಲ್ಯ

Advertisement

ಅವಕಾಶಗಳು ಎಲ್ಲೆಲ್ಲಿ?
ಸೆಂಟ್ರಲ್‌ ಬಿಲ್ಡಿಂಗ್‌ ರಿಸರ್ಚ್‌ ಇನ್ಸ್‌ಟಿಟ್ಯೂಟ್‌ಗಳು
ಕನ್ಸಲ್ಟೆನ್ಸಿಗಳು
ಟ್ರಾನ್ಸ್‌ಪೊರ್ಟ್‌ ಡೆವಲೆಪ್‌ಮೆಂಟ್‌ ಕಾರ್ಪೊರೇಷನ್‌
ಟೌನ್‌ ಅಂಡ್‌ ಕಂಟ್ರಿ ಪ್ಲಾನಿಂಗ್‌ ಆರ್ಗನೈಜೇಷನ್‌
ರಿಯಲ್‌ ಎಸ್ಟೇಟ್‌ ಡೆವಲಪರ್‌ ವಲಯ
ಹೌಸಿಂಗ್‌ ಅಂಡ್‌ ಇಂಡಸ್ಟ್ರಿಯಲ್‌ ಡೆವಲಪ್‌ಮೆಂಟ್‌ ಅಥಾರಿಟೀಸ್‌
ಮೆಟ್ರೋ ಟ್ರಾನ್ಸ್‌ಪೊರ್ಟ್‌ ಆರ್ಗನೈಜೇಷನ್‌
ಸೆಂಟ್ರಲ್‌ ಅಂಡ್‌ ಸ್ಟೇಟ್‌ ಪೊಲ್ಯೂಷನ್‌ ಕಂಟ್ರೋಲ್‌ ಬೋರ್ಡ್‌
ಸೆಂಟ್ರಲ್‌ ಬಿಲ್ಡಿಂಗ್‌ ರಿಸರ್ಚ್‌ ಇನ್ಸ್‌ಟಿಟ್ಯೂಟ್‌
ಎನ್‌ಜಿಒಗಳು ಮತ್ತು ಮಲ್ಟಿನ್ಯಾಷನಲ್‌ ಆರ್ಗನೈಜೇಷನ್‌ಗಳಲ್ಲಿ ಅವಕಾಶಗಳಿವೆ

ಓದುವುದು ಎಲ್ಲಿ?
ಎಸ್‌ಜೆಬಿ ಸ್ಕೂಲ್‌ ಆಫ್ ಆರ್ಕಿಟೆಕ್ಟ್ ಅಂಡ್‌ ಪ್ಲಾನಿಂಗ್‌, ಬೆಂಗಳೂರು
ಇನ್ಸ್‌ಟಿಟ್ಯೂಟ್‌ ಆಫ್ ಡೆವಲಪ್‌ಮೆಂಟ್‌ ಸ್ಟಡೀಸ್‌, ಮೈಸೂರು
ಆರ್‌. ವಿ ಕಾಲೇಜು, ಬೆಂಗಳೂರು (ಬಿ.ಆರ್ಕಿಟೆಕ್ಟ್)
ಬಿಎಂಎಸ್‌ ಕಾಲೇಜು, ಬೆಂಗಳೂರು (ಬಿ.ಆರ್ಕಿಟೆಕ್ಟ್)
ಸೃಷ್ಟಿ ಇನ್ಸ್‌ಟಿಟ್ಯೂಟ್‌ ಆಫ್ ಆರ್ಟ್‌, ಡಿಸೈನ್‌ ಅಂಡ್‌ ಟೆಕ್ನಾಲಜಿ, ಬೆಂಗಳೂರು (ಎಂ.ಪ್ಲಾನಿಂಗ್‌) 

ಎನ್. ಅನಂತನಾಗ್

Advertisement

Udayavani is now on Telegram. Click here to join our channel and stay updated with the latest news.

Next