Advertisement

ಕೊರವಡಿ: ಮಹಿಳೆಯ ಅಸ್ಥಿಪಂಜರ ಪತ್ತೆ

04:07 AM Feb 02, 2019 | Team Udayavani |

ತೆಕ್ಕಟ್ಟೆ : ಇಲ್ಲಿನ ಕೊರವಡಿ ಕ್ರಾಸ್‌ ಸಮೀಪದ ಗಿಡಗಂಟಿಗಳು ಬೆಳೆದು ನಿಂತ ಜಾಗದಲ್ಲಿರುವ ಶೆಡ್‌ ಒಳಗೆ ಶುಕ್ರ ವಾರ ಸಂಜೆ ಮಹಿಳೆಯ ಅಸ್ಥಿಪಂಜರ ಪತ್ತೆಯಾಗಿದೆ.

Advertisement

ಖಾಸಗಿ ವ್ಯಕ್ತಿಯೋರ್ವರಿಗೆ ಸಂಬಂಧಿಸಿದ ಜಾಗದಲ್ಲಿ ಜೆಸಿಬಿ ಯಂತ್ರದ ಮೂಲಕ ಸ್ವತ್ಛತೆ ನಡೆಸುತ್ತಿದ್ದ ಸಂದರ್ಭ ಶೆಡ್‌ ಒಳಗೆ ಕುಳಿತ ಸ್ಥಿತಿಯಲ್ಲಿದ್ದ ಮಹಿಳೆಯ ಅಸ್ಥಿಪಂಜರ ಪತ್ತೆಯಾಗಿದೆ.  ಅದನ್ನು ಮಣಿಪಾಲದ ಪ್ರಯೋಗಾಲಯಕ್ಕೆ  ಕಳುಹಿಸಲಾಗಿದೆ.

 ಅಸ್ಥಿಪಂಜರದಲ್ಲಿ ರವಿಕೆಯಂಥ ವಸ್ತು ಕಂಡು ಬಂದಿದ್ದರಿಂದ ಅದು ಮಹಿಳೆಯ ದ್ದೆಂದು ಭಾವಿಸಲಾಗಿದೆ.  ವರ್ಷಗಳಿಂದ ಮುಚ್ಚಿದ್ದ ಸ್ಥಿತಿಯಲ್ಲಿದ್ದ ಈ ಶೆಡ್‌ನಲ್ಲಿ ಅಸ್ಥಿ ಪಂಜರ ಸಿಕ್ಕಿರುವುದು ತೀವ್ರ ಕುತೂಹಲ ಕೆರಳಿಸಿದೆ.  
ಡಿವೈಎಸ್‌ಪಿ ದಿನೇಶ್‌ ಕುಮಾರ್‌, ಕುಂದಾಪುರ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್‌., ಕುಂದಾಪುರ  ಠಾಣಾಧಿಕಾರಿ ಹರೀಶ್‌ ಆರ್‌. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next