Advertisement

ಕಾಶ್ಮೀರದಿಂದ ಕನ್ಯಾಕುಮಾರಿಗೆ ಸ್ಕೇಟಿಂಗ್‌ ಯಾತ್ರೆ: ಸೆ. 27ರಂದು ಆರಂಭ

10:29 PM Dec 10, 2022 | Team Udayavani |

ತೆಕ್ಕಟ್ಟೆ/ಕುಂದಾಪುರ : ಅಖೀಲ ಭಾರತೀಯ ಗ್ರಾಹಕ ಪಂಚಾಯತ್‌ ಕಾರ್ಯಕರ್ತೆ, ಕಾಶಿ ಪ್ರಾಂತ ಮಹಿಳಾ ಪ್ರಮುಖ್‌ ಸೋನಿ ಚೌರಾಸಿಯ ಅವರ ಸಾರಥ್ಯದಲ್ಲಿ ಸುಮಾರು 20 ಮಂದಿಯ ತಂಡ ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೆ ರೋಲರ್‌ ಸ್ಕೇಟಿಂಗ್‌ನಲ್ಲಿ ಯಾತ್ರೆ ಆರಂಭಿಸಿದ್ದು ಡಿ. 9ರಂದು ತೆಕ್ಕಟ್ಟೆಗೆ ಆಗಮಿಸಿದೆ.

Advertisement

ವಿದ್ಯಾರ್ಥಿಗಳೊಂದಿಗೆ ಸಂವಾದ
ಸೋನಿ ಚೌರಾಸಿಯ ಅವರ ಸಾರಥ್ಯದಲ್ಲಿ ಮಾರ್ಗದರ್ಶಕ ರಾಜೇಶ್‌, ವಿವೇಕ್‌, ಹೇಮಾ ಮಾಲಿನಿ, ಪುಷ್ಪ ಭಾರತಿ, ಮನ್ಸಿರಾಯಿ, ಸುಪ್ರಿಯಾ ಸಿಂಗ್‌, ಅದಿತಿ ಯಾದವ್‌, ಅಂಕಿತಾ ಶರ್ಮ, ಪ್ರಕಾಶ್‌, ಕಾರ್ತಿಕ್‌, ಸಂಕೇತ್‌ ದೊಗ್ರಾ, ಅಜಯ್‌, ಶ್ಯಾಮ್‌ಚಂದ್ರ, ಮಧು, ನೀರೂ, ಶಶಿ, ಅಭಿಷೇಕ್‌, ರಂಜಿತಾ, ಸಚಿನ್‌ ಅವರು ಈ ಯಾತ್ರೆಯಲ್ಲಿ ಭಾಗವಹಿಸಿದ್ದಾರೆ.

ಈ ತಂಡದ ಸದಸ್ಯರು ಶುಕ್ರವಾರ ತೆಕ್ಕಟ್ಟೆಯ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭ ಸಂಸ್ಥೆಯ ಪ್ರಾಂಶುಪಾಲ ಪ್ರಕಾಶ್‌ ಶೆಟ್ಟಿ ಯಾತ್ರಾರ್ಥಿ ಗಳಿಗೆ ಶುಭ ಹಾರೈಸಿದರು.

ಸೆ. 27ರಂದು ಆರಂಭ
ಸೆ. 27ರಂದು ಕಾಶ್ಮೀರದ ಲಾಲ್‌ಚೌಕ್‌ನಿಂದ ಈ ಯಾತ್ರೆ ಆರಂಭಗೊಂಡಿದ್ದು 90 ದಿನಗಳಲ್ಲಿ ಕನ್ಯಾಕುಮಾರಿ ತಲುಪಲಿದೆ. ಪ್ರತಿ ದಿನ ಬೆಳಗ್ಗೆ 6ಕ್ಕೆ ಯಾತ್ರೆ ಆರಂಭಗೊಳ್ಳಲಿದ್ದು 30 ಕಿ.ಮೀ. ಕ್ರಮಿಸಿದ ಅನಂತರ ವಿಶ್ರಾಂತಿ ಪಡೆದು ಮುಂದುವರಿ ಯುತ್ತೇವೆ ಎಂದು ಸೋನಿ ಹೇಳಿದ್ದಾರೆ.

1 ಲಕ್ಷ ಸಸಿ ನೆಡುವ ಗುರಿ
ತಂಡವು 13 ರಾಜ್ಯಗಳು, 100 ನಗರಗಳು ಮತ್ತು 10,000 ಗ್ರಾಮಗಳು ಮತ್ತು ಪಟ್ಟಣಗಳನ್ನು ಹಾದುಹೋಗುತ್ತಿರುವುದು ವಿಶೇಷ. ಧಾರ್ಮಿಕ, ಐತಿಹಾಸಿಕ ಪರಂಪರೆ, ಪ್ರವಾಸಿ ಸ್ಥಳಗಳನ್ನು ಪ್ರಚಾರ ಮಾಡುವುದರ ಜತೆಗೆ ಪ್ರಮುಖ ಸ್ಥಳಗಳಲ್ಲಿ ಸುಮಾರು ಒಂದು ಲಕ್ಷ ಸಸಿಗಳನ್ನು ನೆಡುವ ಮೂಲಕ ಪರಿಸರ ಮತ್ತು ಗ್ರಾಹಕರ ರಕ್ಷಣೆಯನ್ನು ಉತ್ತೇಜಿಸುವ ಕಾರ್ಯದಲ್ಲೂ ತೊಡಗಿಸಿಕೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next