Advertisement
ಸಚಿವ ಅಶ್ವತ್ಥನಾರಾಯಣ ಮಾತನಾಡಿ, ಈ ಒಡಂಬಡಿಕೆಯ ಅನ್ವಯ ಸೈಬರ್ ಸೆಕ್ಯೂರಿಟಿ, ಇಂಗ್ಲಿಷ್ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ಕೋರ್ಸುಗಳ ಅಡಿಯಲ್ಲಿ ಅಸೋಸಿಯೇಟ್ ಡಿಗ್ರಿ ಕೋರ್ಸುಗಳಲ್ಲಿ ಸಂಯೋಜಿತ ಅಸೋಸಿಯೇಟ್ ಡಿಗ್ರಿ ಆರಂಭಿಸುವ ಚಿಂತನೆ ಇದೆ. ಅಥೆನ್ಸ್ ವಿವಿ ಅಡಿಯಿರುವ ಡಲ್ಲಾಸ್ ಕಮ್ಯುನಿಟಿ ಕಾಲೇಜಿನ ಜತೆ ಒಡಂಬಡಿಕೆ ಮಾಡಿಕೊಳ್ಳುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದರು.
Related Articles
Advertisement
ಕೌಶಲ್ಯ ಅಭಿವೃದ್ಧಿ ವಿಷಯದಲ್ಲಿ ಅಮೆರಿಕದ ಈ ಸಂಸ್ಥೆ ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮದ ಜೊತೆ ಕೈಗೂಡಿಸಿ ನಾಲ್ಕು ವರ್ಷಗಳ ನರ್ಸಿಂಗ್ ಪದವಿ ವಿದ್ಯಾಭ್ಯಾಸ ಒದಗಿಸಲಿದೆ ಎಂದು ಸಚಿವರು ಹೇಳಿದರು.
ಮಂಗಳವಾರ ರಾಜ್ಯಕ್ಕೆ ಆಗಮಿಸಿರುವ ಅಮೆರಿಕದ ಈ ನಿಯೋಗವು ಹತ್ತು ದಿನ ರಾಜ್ಯದಲ್ಲಿ ಇರಲಿದೆ. ಗುರುವಾರ ಎಸ್.ಜೆ.ಪಿ.ಗೆ ಭೇಟಿ ನೀಡಿ, ಟ್ವಿನ್ನಿಂಗ್ ಡಿಗ್ರಿ ಮುಂತಾದವುಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳಲಿದೆ.
ಆ.22ರಂದು ಕೃಷ್ಣದೇವರಾಯ ವಿವಿ ಕುಲಪತಿ ಜೊತೆ ಚರ್ಚಿಸಲಿದೆ. ಆ.23ರಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಬಿ. ತಿಮ್ಮೇಗೌಡ ಅವರೊಂದಿಗೆ ಹೆಚ್ಚಿನ ಸಹಭಾಗಿತ್ವ ಕುರಿತು ಮಾತುಕತೆ ನಡೆಸಲಿದೆ ಎಂದು ಅಶ್ವತ್ಥನಾರಾಯಣ ಮಾಹಿತಿ ನೀಡಿದರು.ಅಮೆರಿಕದ ನಿಯೋಗವು ಆ.21ರ ಭಾನುವಾರ ವಿಶ್ವವಿಖ್ಯಾತ ಹಂಪೆಗೆ ತೆರಳಿ ಅಲ್ಲಿನ ತಾಣಗಳನ್ನು ವೀಕ್ಷಿಸಲಿದೆ. ಪೂರ್ವಭಾವಿ ಚರ್ಚೆಯಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ. ಪ್ರದೀಪ್ , ನಿರ್ದೇಶಕ ಅಪ್ಪಾಜಿ ಗೌಡ, ಹೆಚ್ಚುವರಿ ನಿರ್ದೇಶಕ ಅಶೋಕ ಬಿ ರೇವಣಕರ್, ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ರವಿಚಂದ್ರನ್, ಜಂಟಿ ನಿರ್ದೇಶಕ ಶ್ರೀಕಾಂತ್ ಸಲಹೆಗಾರ ಅರುಣ್ ಸೀತಾರಾಮನ್ ಇದ್ದರು.