Advertisement
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಈ ಬಗ್ಗೆ ಪ್ರಕಟಣೆ ನೀಡಿದ್ದು, ಈ ಪ್ರಕರಣ ಅನ್ನಾರಿ ಕುಟುಂಬ ವರ್ಗಕ್ಕೆ ದೊಡ್ಡ ನಿಟ್ಟುಸಿರು ಬಿಡುವಂತೆ ಮಾಡಿದೆ ಎಂದು ತಿಳಿಸಿದ್ದಾರೆ.
Related Articles
Advertisement
33ರ ಹರೆಯದ ಇಂಜಿನಿಯರ್ ಅನ್ಸಾರಿ ಖೈಬರ್ ಫಾಖ್ತುನ್ ಖಾವಾ ಪ್ರಾಂತ್ಯದ ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ ಗೆಳತಿಯ ಬಲವಂತದ ವಿವಾಹವನ್ನು ತಡೆದು ರಕ್ಷಿಸುವ ನಿಟ್ಟಿನಲ್ಲಿ 2012ರ ನವೆಂಬರ್ 12ರಂದು ಅಫ್ಘಾನಿಸ್ತಾನದ ಗಡಿದಾಟಿ ಜಲಾಲಬಾದ್ ನಿಂದ ಪೇಶಾವರಕ್ಕೆ ತೆರಳಿ ಪಾಕಿಸ್ತಾನವನ್ನು ಪ್ರವೇಶಿಸಿದ್ದ.
2012ರ ನವೆಂಬರ್ ನಿಂದ ನಾಪತ್ತೆಯಾಗಿದ್ದ ಅನ್ಸಾರಿಯನ್ನು ಹುಡುಕಿಕೊಡುವಂತೆ ಮನೆಯವರು ಮನವಿ ಮಾಡಿದ್ದರು. ಏತನ್ಮಧ್ಯೆ ಕಾನೂನು ಬಾಹಿರವಾಗಿ ಪಾಕಿಸ್ತಾನವನ್ನು ಪ್ರವೇಶಿಸಿದ್ದ ಅನ್ಸಾರಿ ಪಾಕ್ ಗುಪ್ತಚರ ಇಲಾಖೆಯ ಕೈಗೆ ಸಿಕ್ಕಿಬಿದ್ದಿದ್ದ. ಅನ್ಸಾರಿ ಭಾರತದ ಗೂಢಚಾರ ಎಂದೇ ಪ್ರತಿಪಾದಿಸಿದ್ದು, ಸೇನಾ ಕೋರ್ಟ್ ಅನ್ಸಾರಿಗೆ ಮೂರು ವರ್ಷಗಳ ಜೈಲುಶಿಕ್ಷೆ ವಿಧಿಸಿತ್ತು. ಹೀಗೆ ಸುಮಾರು ಆರು ವರ್ಷಗಳ ಕಾಲ ಬಂಧನದಲ್ಲಿದ್ದ ಅನ್ಸಾರಿ ಬಿಡುಗಡೆಗಾಗಿ ಮುಂಬೈ ಭಾರತೀಯ ಜನತಾ ಪಕ್ಷದ ಕಾರ್ಯಕರ್ತ ಕೃಷ್ಣ ಹೆಗಡೆ ಅವರು ಸಹಾಯ ಹಸ್ತ ಚಾಚಿದ್ದರು. ನವದೆಹಲಿಯ ಪಾಕಿಸ್ತಾನದ ಹೈಕಮಿಷನ್ ಗೆ ತೆರಳಿ ಭಾರತಕ್ಕೆ ವಾಪಸ್ಸಾಗುವ ಪ್ರಕ್ರಿಯೆನ್ನು ಪೂರ್ಣಗೊಳಿಸಿದ್ದರು ಎಂದು ವರದಿ ತಿಳಿಸಿದೆ.
ಪಾಕಿಸ್ತಾನದ ಜೈಲಿನಿಂದ ಬಿಡುಗಡೆಗೊಂಡ ಅನ್ಸಾರಿಯನ್ನು ಅಧಿಕಾರಿಗಳು ವಾಘಾ ಗಡಿಯಲ್ಲಿ ಭಾರತೀಯ ಅಧಿಕಾರಿಗಳಿಗೆ ಇಂದು ಮಧ್ಯಾಹ್ನ ಹಸ್ತಾಂತರಿಸಿರುವುದಾಗಿ ಪಿಐಪಿಎಫ್ ಪಿಡಿಯ ಪ್ರಧಾನ ಕಾರ್ಯದರ್ಶಿ ಜತಿನ್ ದೇಸಾಯಿ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.