Advertisement
ನಿಜ, ಇದು ದಕ್ಷಿಣ ಕೊರಿಯಾದ ಬೋರಮ್ ಎಂಬ ಆರರ ಬಾಲಕಿಯ ಸುದ್ದಿ. ಈ ಪುಟ್ಟ ಕಂದಮ್ಮ ಆಟಿಕೆ ವಿಮರ್ಶೆಯ ಯೂಟ್ಯೂಬ್ ವೀಡಿಯೊ ಮೂಲಕ ಗಳಿಸಿದ ಆದಾಯದಲ್ಲಿ 55 ಕೋಟಿ ರೂ.ಗಳ ಮೂರು ಮಹಡಿ ಮನೆ ಖರೀದಿಸಿದ್ದಾಳೆ.
Related Articles
Advertisement
ಈಕೆಯ ಒಂದೊಂದು ವೀಡಿಯೋ ಕೂಡ 30 ಕೋಟಿಗಳಿಗಿಂತ ಹೆಚ್ಚು ವ್ಯೂ ಪಡೆದಿವೆ. ಅಡುಗೆ ಮನೆಆಟಿಕೆ ಬಳಸಿ ಇನ್‌ಸ್ಟಂಟ್ ನೂಡಲ್ ತಿನ್ನುವವೀಡಿಯೋ ಮನೆಮಾತಾಗಿದೆ. ಬೋರಮ್‌ನಪ್ರತಿ ವೀಡಿಯೋ ಕೂಡ ವಿಶಿಷ್ಟ ಪರಿಕಲ್ಪನೆಯನ್ನು ಹೊಂದಿರುತ್ತದೆ.
ದುಡ್ಡು ಮಾಡುವುದು ಹೇಗೆ?
ಯೂಟ್ಯೂಬ್ ವೀಡಿಯೋಗಳಲ್ಲಿ ತಾನು ಜಾಹೀರಾತು ಪ್ರದರ್ಶಿಸುವುದರಿಂದ ಬರುವ ಆದಾಯದ ಭಾಗವನ್ನು ಆಯಾ ಚಾನೆಲ್ ಮಾಲಕ ರಿಗೆ ನೀಡುತ್ತದೆ. ಆಟಿಕೆ ತಯಾರಕ ಕಂಪೆನಿ ಗಳೂ ಈ ಮಕ್ಕಳ ಜತೆ ಒಪ್ಪಂದ ಮಾಡಿ ಹಣ ನೀಡುತ್ತವೆ. ವಿವಿಧ ಉತ್ಪನ್ನಗಳನ್ನು ಕೂಡ ಪ್ರಚಾರ ಮಾಡುವ ಮೂಲಕವೂ ಮಕ್ಕಳು ಹಣ ಗಳಿಸುತ್ತಾರೆ.
ಫೋಬ್ರ್ಸ್ ನಿಯತಕಾಲಿಕವೂ ಇಂಥ ಮಕ್ಕಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. 2018ರ ಪಟ್ಟಿಯಲ್ಲಿ 7 ವರ್ಷದ ರ್ಯಾನ್ ಕಜಿ ಎಂಬ ಮಗು ಅತಿ ಹೆಚ್ಚು ಆದಾಯವುಳ್ಳದ್ದಾಗಿತ್ತು. ಈ ಮಗು ತನ್ನ ಯೂಟ್ಯೂಬ್ ಚಾನೆಲ್ನಿಂದ 150 ಕೋಟಿ ರೂ. ಗಳಿಸಿದ್ದು, 2 ಕೋಟಿ ಸಬ್‌ಸೆðೖಬರ್‌ಗಳನ್ನು ಹೊಂದಿತ್ತು. ಅಮೆರಿಕನ್ ಟೈಡಸ್ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು.