Advertisement

ಕಡವೆ ಬೇಟೆಯಾಡಿದ ಆರು ಮಂದಿ ಸೆರೆ

11:23 PM Apr 27, 2019 | Lakshmi GovindaRaj |

ಮಡಿಕೇರಿ: ಕೊಡಗು, ಕೇರಳ ಗಡಿಯ ಕುಟ್ಟ ಮೀಸಲು ಅರಣ್ಯ ಪ್ರದೇಶದಲ್ಲಿ ಕಡವೆ ಬೇಟೆಯಾಡಿದ ಆರು ಮಂದಿಯ ತಂಡವನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ.

Advertisement

ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಕೇರಳ ಗಡಿಭಾಗ ಕುಟ್ಟ-ಇರ್ಪು ಜಂಕ್ಷನ್‌ನಲ್ಲಿ ಶನಿವಾರ ಬೆಳ್ಳಂ ಬೆಳಗ್ಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ವಾಹನ ಸಹಿತ ಕಡವೆ ಮಾಂಸ, ಬೇಟೆಗೆ ಬಳಸಿದ ಆಯುಧಗಳು ಮತ್ತು ಆರು ಮಂದಿಯನ್ನು ವಶಕ್ಕೆ ಪಡೆದರು.

ಪೊನ್ನಂಪೇಟೆಯ ಮಾಪಿಳ್ಳೆ ತೋಡು ನಿವಾಸಿಗಳಾದ ಕೆ.ಬಿ.ಸಿದ್ದಿಕ್‌, ಎಂ.ಎಚ್‌.ಶಮೀರ್‌, ಎ.ಯು.ಸಮೀರ್‌, ನಾಪೋಕ್ಲುವಿನ ಕುಂಜಿಲ ಗ್ರಾಮದ ಕೆ.ಇ.ಇಸ್ಮಾಯಿಲ್‌, ಕೆ.ಎ.ಯೂಸಫ್ ಹಾಗೂ ಕೆ.ಎ.ಮಹಮ್ಮದ್‌ ಬಂಧಿತರು.

ಬಂಧಿತರಿಂದ ಕೃತ್ಯಕ್ಕೆ ಬಳಸಿದ ಒಂಟಿ ನಳಿಕೆಯ ಒಂದು ಬಂದೂಕು, ಇನ್ನಿತರ ಆಯುಧಗಳು, ಸುಮಾರು 150 ಕೆ.ಜಿ.ಕಡವೆ ಮಾಂಸ, ಮಾರುತಿ ಸೆಲೆರಿಯಾ ಕಾರು ಹಾಗೂ ಗೂಡ್ಸ್‌ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಬೇಟೆಗಾರರನ್ನು ಬಂಧಿಸಿದ ತಂಡಕ್ಕೆ ಪೊಲೀಸ್‌ ವರಿಷ್ಠಾಧಿಕಾರಿಯವರು 10 ಸಾವಿರ ರೂ.ನಗದು ಬಹುಮಾನ ಘೋಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next