Advertisement

ಜೇನುನೊಣ ದಾಳಿ: ಇಬ್ಬರು ಮಹಿಳೆಯರ ಸಹಿತ 6 ಮಂದಿಗೆ ಗಾಯ

11:31 AM Dec 11, 2018 | Team Udayavani |

ಮುಜಫ‌ರನಗರ : ಇಲ್ಲಿನ ಬೇಲ್ಡಾ ಸೇತುವೆ ಸಮೀಪ ಗಂಗಾ ಕಾಲುವೆ ರಸ್ತೆಯಲ್ಲಿ ಜೇನು ನೊಣಗಳ ಹಠಾತ್‌ ದಾಳಿಗೆ ಇಬ್ಬರು ಮಹಿಳೆಯರ ಸಹಿತ ಆರು ಮಂದಿ ಗಾಯಗೊಂಡ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಈ ಘಟನೆಯಿಂದಾಗಿ ಈ ಮಾರ್ಗದಲ್ಲಿ ವಾಹನ ಸಂಚಾರ ಸ್ವಲ್ಪ ಹೊತ್ತು ಬಾಧಿತವಾಯಿತು. 

ಗಾಯಾಳುಗಳನ್ನು ಒಡನೆಯೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಇವರನ್ನು ಸೋನು, ದೀಪಾಂಶಿ, ಹರ್ಜಾ, ಫ‌ುರ್ಕಾನ್‌, ದೀಪಕ್‌, ಅರುಣ್‌ ಮತ್ತು ರೇಖಾ ಎಂದು ಗುರುತಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next