Advertisement

ಜಮ್ಮು : ಆಂಶಿಕವಾಗಿ ಕುಸಿದ ಸುರಂಗ, 6 ಕಾರ್ಮಿಕರಿಗೆ ಗಾಯ

03:27 PM Aug 18, 2017 | udayavani editorial |

ಜಮ್ಮು : ಜಮ್ಮು ಕಾಶ್ಮೀರದ ಪೂಂಚ್‌ ಜಿಲ್ಲೆಯ ಪರ್ನಾಯಿ ಜಲ ವಿದ್ಯುತ್‌ ಯೋಜನೆಯ ಭಾಗವಾಗಿ ನಿರ್ಮಾಣ ಹಂತದಲ್ಲಿರುವ ಸುರಂಗವೊಂದು ಆಂಶಿಕವಾಗಿ ಕುಸಿದು ಸಂಭವಿಸಿರುವ ಅವಘಡದಲ್ಲಿ ಆರು ಕೂಲಿ ಕಾರ್ಮಿಕರು ಗಾಯಗೊಂಡಿರುವುದಾಗಿ ವರದಿಯಾಗಿದೆ.

Advertisement

37.5 ಮೆಗಾ ವ್ಯಾಟ್‌ ಸಾಮರ್ಥ್ಯದ ಪರ್ನಾಯಿ ಜಲ ವಿದ್ಯುತ್‌ ಯೋಜನೆಯು ಮುಂದಿನ ವರ್ಷ ಜನವರಿ ಅಂತ್ಯದಲ್ಲಿ ಮುಗಿಯುವ ನಿರೀಕ್ಷೆ ಇದೆ. 

ಸೂರನ್‌ಕೋಟ್‌ ಪಟ್ಟಿಯಲ್ಲಿನ ಸುರಂಗವೊಂದರ ಭಾಗವು ಕುಸಿದಾಗ ಆರು ಮಂದಿ ಕೂಲಿ ಕಾರ್ಮಿಕರು ಗಾಯಗೊಂಡರು. ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಿದ್ದು ಅವರನ್ನು ಜಮ್ಮುವಿನ ಸರಕಾರಿ ಮೆಡಿಕಲ್‌ ಕಾಲೇಜ್‌ ಆಸ್ಪತ್ರೆಗೆ ಸೇರಿಸಲಾಗಿದೆ.  

Advertisement

Udayavani is now on Telegram. Click here to join our channel and stay updated with the latest news.

Next