Advertisement

ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಆರು ಮಂದಿ ಸಾವು

12:37 PM May 08, 2020 | mahesh |

ಕುರುಗೋಡು/ಯಲ್ಲಾಪುರ: ರಾಜ್ಯದಲ್ಲಿ ಸಂಭವಿಸಿದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಒಂದೇ ಕುಟುಂಬದ ಮೂವರ ಸಹಿತ ಆರು ಮಂದಿ ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ಮೂಲದ ನೀಲಮ್ಮ (23) ಮತ್ತವರ 11 ತಿಂಗಳ ಮಗು ಶಿವಾಜಿ ಎಂ. ಸೂಗೂರು ಗ್ರಾಮದ ಎಮ್ಮಿಗನೂರು ರಸ್ತೆ ಬಳಿ ಕುರಿ ಮೇಯಿಸಲು ಹೋಗಿದ್ದಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ಇನ್ನು ತೋಟದ ಬಾವಿಗೆ ಬಿದ್ದು ಒಂದೇ ಕುಟುಂಬದ ಇಬ್ಬರು ಮಹಿಳೆಯರು ಮೃತಪಟ್ಟಿದ್ದು, ಈ ಸುದ್ದಿ ಕೇಳಿದ ಸಂಬಂಧಿಯೂ ಅಸುನೀಗಿದ ಘಟನೆ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.

Advertisement

ಕುಂದರಗಿ ಸಮೀಪದ ಜಕ್ಕೊಳ್ಳಿ ದೊಡ್ಡಬೇಣದ ಸರಿತಾ ಆದಿತ್ಯ ನಾಯ್ಕ (26), ಶ್ವೇತಾ ದಿನೇಶ ನಾಯ್ಕ (30) ಮತ್ತು ಗೌರಿ ಶಿವಾ ನಾಯ್ಕ (55) ಮೃತಪಟ್ಟವರು. ಸರಿತಾ ತೋಟದ ಬಾವಿಯಿಂದ ನೀರು ತರಲು ಹೋದಾಗ ಕಾಲು ಜಾರಿ ಬಿದ್ದಿದ್ದು, ಅವರನ್ನು ರಕ್ಷಿಸಲು ಅತ್ತಿಗೆ ಶ್ವೇತಾ ನೀರಿಗೆ ಧುಮುಕಿದ್ದಾರೆ. ಇಬ್ಬರೂ ಸುಳಿಗೆ ಸಿಲುಕಿ ಮೃತಪಟ್ಟರು. ಪುತ್ರಿ, ಸೊಸೆ ಮೃತಪಟ್ಟ ವಿಷಯ ತಿಳಿದು ಗೌರಿ ನಾಯ್ಕ ಆಘಾತದಿಂದ ಅಸ್ವಸ್ಥರಾದರು. ಆಸ್ಪತ್ರೆಗೆ ಕರೆದೊ ಯ್ಯುವಾಗ ಮೃತಪಟ್ಟರು.

ಸಿಡಿಲು ಬಡಿದು ಮಹಿಳೆ ಸಾವು
ಯಲ್ಲಾಪುರ ಪಟ್ಟಣದ ಬೊಂಡಗೆಸರದಲ್ಲಿ ಬುಧವಾರ ರಾತ್ರಿ ಮನೆ ಅಂಗಳದಲ್ಲಿದ್ದ ಉರುವಲು ಕಟ್ಟಿಗೆ ತರಲು ಹೋದಾಗ ಸಿಡಿಲು ಬಡಿದು ಸುಮಿತ್ರಾ ಗಣಪತಿ ಮರಾಠಿ (50) ಮೃತಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next