Advertisement
ಈ ಮೂಲಕ ಉದ್ದೇಶಿತ ಮಾರ್ಗದಲ್ಲಿ ಒಟ್ಟಾರೆ 14 ಆರು ಬೋಗಿಗಳ ಮೆಟ್ರೋ ರೈಲುಗಳು ಕಾರ್ಯಾಚರಣೆ ಮಾಡಲಿವೆ. ಭಾನುವಾರ ಹೊರತುಪಡಿಸಿ ಆರು ಬೋಗಿಗಳ ಈ ರೈಲುಗಳು ಒಟ್ಟು 106 ಸುತ್ತಿನ ಪ್ರಯಾಣ ನಡೆಸಲಿವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ ಪ್ರಕಟಣೆ ತಿಳಿಸಿದೆ. ಗರಿಷ್ಠ ಸಮಯದಲ್ಲಿ ಅಂದರೆ ಪೀಕ್ ಅವರ್‌ನಲ್ಲಿ ಶೇ.77ರಷ್ಟು ಆರು ಬೋಗಿ ರೈಲುಗಳು ಸಂಚರಿಸಲಿವೆ. ಈ ಮಾರ್ಗದಲ್ಲಿ ಒಟ್ಟಾರೆ 22 ರೈಲುಗಳು ನಿತ್ಯ ಕಾರ್ಯಾಚರಣೆ ನಡೆಸುತ್ತವೆ.
ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ. 31ರ ತಡರಾತ್ರಿ ನಗರದ ಮೂರು ಮೆಟ್ರೋ ನಿಲ್ದಾಣಗಳಿಂದ ಯಾವುದೇ ನಿಲ್ದಾಣಕ್ಕೆ ಪ್ರಯಾಣ ದರ 50 ರೂ.! 31ರಂದು ತಡರಾತ್ರಿ 2 ಗಂಟೆಗೆ ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ಏಕ ಕಾಲ ದಲ್ಲಿ ನಾಲ್ಕೂ ದಿಕ್ಕುಗಳಿಗೆ ರೈಲುಗಳು ಹೊರ ಡಲಿವೆ. ಈ ವಿಸ್ತರಿಸಿದ ಅಂದರೆ 11.30ರ ನಂತರ ಮಹಾತ್ಮ ಗಾಂಧಿ ರಸ್ತೆ (ಎಂ.ಜಿ. ರಸ್ತೆ), ಟ್ರಿನಿಟಿ ಮತ್ತು ಕಬ್ಬನ್ ಉದ್ಯಾನ ನಿಲ್ದಾಣಗಳಿಂದ ಇತರೆ ಯಾವುದೇ ನಿಲ್ದಾಣಗಳಿಗೆ ಪ್ರಯಾಣಿಸುವವರಿಗೆ 50 ರೂ. ಟಿಕೆಟ್ ದರ ನಿಗದಿಪಡಿಸಲಾಗಿದೆ. 50 ರೂ. ಮೊತ್ತದ ಕಾಗದದ ಟಿಕೆಟ್‌ಗಳನ್ನು ವಿತರಿಸಲಾಗುವುದು. ಟೋಕನ್‌ಗಳನ್ನು ವಿತರಿಸುವುದಿಲ್ಲ. ಪ್ರಯಾಣಿಕರ ಅನುಕೂಲಕ್ಕಾಗಿ ವಿಸ್ತರಿಸಿದ ಅವಧಿಯಲ್ಲಿ 31ರ ರಾತ್ರಿ 8ರಿಂದಲೇ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಮುಂಚಿತವಾಗಿ ಟಿಕೆಟ್ ಖರೀದಿಸಬಹುದು. ಸ್ಮಾರ್ಟ್ ಕಾರ್ಡ್ ಹೊಂದಿರುವವರಿಗೆ ಎಂದಿನಂತೆ ರಿಯಾಯ್ತಿ ದರ ಅನ್ವಯ ಆಗಲಿದೆ. ಟ್ರಿನಿಟಿ, ಎಂ.ಜಿ. ರಸ್ತೆ ಮತ್ತು ಕಬ್ಬನ್ ಉದ್ಯಾನ ಹೊರತುಪಡಿಸಿದರೆ, ಉಳಿದ ನಿಲ್ದಾಣಗಳ ನಡುವೆ ಪ್ರಯಾಣ ದರ ಎಂದಿನಂತೆ ಇರಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಪ್ರಕಟಣೆ ತಿಳಿಸಿದೆ.
Related Articles
ಟರ್ಮಿನಲ್ ನಿರ್ಗಮನ ಸಮಯ (ತಡರಾತ್ರಿ)
ಬೈಯಪ್ಪನಹಳ್ಳಿ 1.35
ಮೈಸೂರು ರಸ್ತೆ 1.40
ನಾಗಸಂದ್ರ 1.30
ಯಲಚೇನಹಳ್ಳಿ 1.35
Advertisement