ಚೆನ್ನೈ: ಕಾಲಿವುಡ್ ನಟ ಶಿವಕಾರ್ತಿಕೇಯನ್ ಸದ್ಯ ʼ ಮಾವೀರನ್ʼ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಚಾರ ಕಾರ್ಯಕ್ರಮದಲ್ಲಿ ಅವರು ಆಡಿದ ಮಾತು ಅಭಿಮಾನಿಗಳ ಮನಗೆದ್ದಿದೆ.
ಶಿವಕಾರ್ತಿಕೇಯನ್ ಅವರ ʼಡಾನ್ʼ, ʼಡಾಕ್ಟರ್ʼ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿತ್ತು. ʼಡಾನ್ʼ ಮೊದಲ ದಿನವೇ ವರ್ಲ್ಡ್ ವೈಡ್ 15 ಕೋಟಿ ರೂ. ಗಳಿಕೆ ಕಂಡಿತ್ತು. ಆ ಬಳಿಕ ಬಂದ ʼಡಾಕ್ಟರ್ʼ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ರೂ. ಕಮಾಯಿ ಮಾಡಿತ್ತು. ಎರಡು ಬ್ಲಾಕ್ ಬಸ್ಟರ್ ನೀಡಿದ ನಂತರ ಬಂದ ʼಪ್ರಿನ್ಸ್ʼ ಸಿನಿಮಾ ಹೇಳಿಕೊಳ್ಳುವಷ್ಟರ ಮಟ್ಟಿಗೆ ಗಳಕೆ ಹಾಗೂ ಸದ್ದು ಮಾಡಿಲ್ಲ.
ಈ ಬಗ್ಗೆ ಪ್ರಶ್ನೆಯನ್ನು ಕೇಳಿದಾಗ, “ನನ್ನ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸೋತರೆ ಅದರ ಸಂಪೂರ್ಣ ಜವಾಬ್ದಾರಿಯನ್ನು ನಾನು ಹೊರುತ್ತೇನೆ. ಚಿತ್ರ ಹಿಟ್ ಆದಾಗ ಅದರ ಕ್ರೆಡಿಟ್ ಇಡೀ ತಂಡಕ್ಕೆ ಸಲ್ಲಬೇಕು” ಎಂದು ಅವರು ಸರಳವಾಗಿ ಒಂದೇ ಮಾತಿನಲ್ಲಿ ಹೇಳಿದ್ದಾರೆ.
ಈ ಮಾತು ಅಭಿಮಾನಿಗಳ ವಲಯದಲ್ಲಿ ವೈರಲ್ ಆಗಿದೆ.
ʼಮಾವೀರನ್ʼನಲ್ಲಿ, ಶಿವಕಾರ್ತಿಕೇಯನ್ ಮಾವೀರನ್ ಎಂಬ ಪಾತ್ರವನ್ನು ಬಿಡಿಸುವ ಕಾರ್ಟೂನಿಸ್ಟ್ ಆಗಿ ನಟಿಸಿದ್ದಾರೆ. ಚಿತ್ರದಲ್ಲಿ ಅದಿತಿ ಶಂಕರ್ ನಾಯಕಿಯಾಗಿದ್ದು, ಅವರು ಪತ್ರಕರ್ತೆಯಾಗಿ ನಟಿಸಿದ್ದಾರೆ. ಈ ಚಿತ್ರಕ್ಕಾಗಿ ಇಬ್ಬರೂ ಜೊತೆಯಾಗಿ ಒಂದು ಹಾಡನ್ನೂ ಹಾಡಿದ್ದಾರೆ. ಅಂದಹಾಗೆ ಈ ಸಿನಿಮಾ ಇದೇ ಜು.14 ರಂದು ತೆರೆಗೆ ಬರಲಿದೆ.