Advertisement

‘ಆಪರೇಷನ್ ಕಮಲ’… ಪರಿಸ್ಥಿತಿ ಉದ್ಭವಿಸುವುದಿಲ್ಲ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

04:36 PM May 11, 2023 | Team Udayavani |

ಬೆಂಗಳೂರು : ‘ಆಪರೇಷನ್ ಕಮಲ’ದ ಸಾಧ್ಯತೆಯನ್ನು ಗುರುವಾರ ತಳ್ಳಿಹಾಕಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ 120 ರಿಂದ 125 ಸ್ಥಾನಗಳನ್ನು ಪಡೆದು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ.

Advertisement

ನಮ್ಮ ಪಕ್ಷವು  ಎಕ್ಸಿಟ್ ಪೋಲ್‌ಗಳನ್ನು ತಪ್ಪೆಂದು ಸಾಬೀತುಪಡಿಸುತ್ತದೆ, ಅವುಗಳಲ್ಲಿ ಹೆಚ್ಚಿನವು ಕಾಂಗ್ರೆಸ್‌ಗೆ ಬಿಜೆಪಿಗಿಂತ ಹೆಚ್ಚಿನ ಸ್ಥಾನವನ್ನು ನೀಡಿವೆ. ಬುಧವಾರದಂದು ಪಡೆದ “ಪ್ರಾಥಮಿಕ ವರದಿಗಳು” ಚುನಾವಣೆಯ ನಂತರದ ಫಲಿತಾಂಶಗಳನ್ನು ಸೂಚಿಸುತ್ತವೆ ಎಂದು ಹೇಳಿದರು.

ಬಿಜೆಪಿಯು ‘ಆಪರೇಷನ್ ಕಮಲ’ವನ್ನು ಆಶ್ರಯಿಸುವ ಅಗತ್ಯವಿದೆಯೇ ಎಂಬ ಪ್ರಶ್ನೆಗೆ, “ಖಂಡಿತವಾಗಿಯೂ ಇಲ್ಲ. ನಂಬಿಕೆ ಇರಲಿ. ಯಾವುದೇ ರೀತಿಯ ‘ಆಪರೇಷನ್ ಕಮಲ’ದ ಪರಿಸ್ಥಿತಿ ಉದ್ಭವಿಸುವುದಿಲ್ಲ. ಈ ಬಾರಿ ರಾಜ್ಯದ ಜನತೆ ರಾಜ್ಯದ ಅಭಿವೃದ್ಧಿಗೆ ಮತ ನೀಡಿ ಬಹುಮತದ ಸರಕಾರ ನೀಡಲಿದ್ದಾರೆ. ಯಾವುದೇ ಅತಂತ್ರ ಪರಿಸ್ಥಿತಿ ಇರುವುದಿಲ್ಲ ಎಂದು ಬಿಜೆಪಿಯ ರಾಜ್ಯ ಚುನಾವಣ ನಿರ್ವಹಣ ಸಮಿತಿಯ ಸಂಚಾಲಕಿ ಶೋಭಾ ಹೇಳಿದರು.

ನಮ್ಮ ಬೂತ್ ಮಟ್ಟದ ಕಾರ್ಯಕರ್ತರಿಂದ ಪಡೆದ ಪ್ರಾಥಮಿಕ ವರದಿಗಳ ಪ್ರಕಾರ ನಾವು 120 ರಿಂದ 125 ಸ್ಥಾನಗಳನ್ನು ಗೆಲ್ಲುತ್ತೇವೆ. ಕೆಲವು ಸ್ಥಾನಗಳಲ್ಲಿ ಪಕ್ಷವು ಊಹೆಗೂ ಮೀರಿದ ಉತ್ತಮ ಸಾಧನೆ ಮಾಡಲಿದೆ ಎಂದರು.

150 ಸ್ಥಾನಗಳನ್ನು ಗೆಲ್ಲುವುದಾಗಿ ಹೇಳಿಕೊಂಡಿದ್ದ ಪಕ್ಷವು ತನ್ನ ಅಂದಾಜನ್ನು 120 ಕ್ಕೆ ಏಕೆ ಇಳಿಸಿತು ಎಂಬುದರ ಕುರಿತು, ಬೂತ್ ಮಟ್ಟದ ಕಾರ್ಯಕರ್ತರು ಪಡೆದ ಪ್ರಾಥಮಿಕ ವರದಿಯನ್ನು ಆಧರಿಸಿ ಇತ್ತೀಚಿನ ಲೆಕ್ಕಾಚಾರವನ್ನು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next