Advertisement

ಜನೌಷಧಿ ಕೇಂದ್ರದಲ್ಲಿ ಲಭ್ಯವಾಗಲಿದೆ “ಸಿಟಾಗ್ಲಿಪ್ಟಿನ್‌’

10:53 AM Sep 17, 2022 | Team Udayavani |

ನವದೆಹಲಿ: ಮಧುಮೇಹದ ನಿಯಂತ್ರಣಕ್ಕೆಂದು ಬಳಸುವ ಸಿಟಾಗ್ಲಿಪ್ಟಿನ್‌ ಔಷಧವು ಇನ್ನು ಮುಂದೆ ಜನೌಷಧಿ ಕೇಂದ್ರದಲ್ಲಿ ಲಭ್ಯವಾಗಲಿದೆ.

Advertisement

ಮಧುಮೇಹಿಗಳಿಗೆ ಸಹಾಯವಾಗಲೆಂದು ಮಾರುಕಟ್ಟೆ ಬೆಲೆಗಿಂತ ಶೇ.60-70 ಕಡಿಮೆ ಬೆಲೆಯಲ್ಲಿ ಔಷಧ ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಸಿಟಾಗ್ಲಿಪ್ಟಿನ್‌ ಪೋಸ್ಫೋಟ್‌ 50ಎಂಜಿಯ ಮಾತ್ರೆಗಳು ಒಂದು ಪ್ಯಾಕ್‌ಗೆ(10 ಮಾತ್ರೆ) 60 ರೂ. ಆಗಿರಲಿದೆ. ಹಾಗೆಯೇ 100ಎಂಜಿ ಮಾತ್ರೆ ಪ್ಯಾಕ್‌ಗೆ 100 ರೂ. ಆಗಿರಲಿದೆ.

ಸಿಟಾಗ್ಲಿಪ್ಟಿನ್‌ ಮತ್ತು ಮೆಟ್ಫಾರ್ಮಿನ್‌ ಹೈಡ್ರೋಕ್ಲೋರೈಡ್‌ 50ಎಂಜಿ/500ಎಂಜಿ ಮಾತ್ರೆಯು ಪ್ಯಾಕ್‌ಗೆ 65 ರೂ., ಸಿಟಾಗ್ಲಿಪ್ಟಿನ್‌ ಮತ್ತುಹೈಡ್ರೋಕ್ಲೋರೈಡ್‌ 50ಎಂಜಿ/1000ಎಂಜಿ ಮಾತ್ರೆ ಪ್ಯಾಕ್‌ಗೆ 70 ರೂ.ನಂತೆ ಮಾರಾಟವಾಗಲಿದೆ.

ಈ ಮಾತ್ರೆಗಳ ಬೆಲೆ ಮಾರುಕಟ್ಟೆಯಲ್ಲಿ 162-258 ರೂ.ವರೆಗಿದೆ. ದೇಶದಲ್ಲಿ 8,700ಕ್ಕೂ ಅಧಿಕ ಜನ ಔಷಧ ಕೇಂದ್ರಗಳಿದ್ದು ಅವುಗಳಲ್ಲಿ 1,600ಕ್ಕೂ ಅಧಿಕ ರೀತಿಯ ಔಷಧಗಳು ಲಭ್ಯವಿವೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next