Advertisement
ಧ್ವಜಾರೋಹಣ, ಗುರುವಂದನೆ, ಶಂಖನಾದ, ಶ್ರೀ ಲಕ್ಷಿ$¾à ನೃಸಿಂಹ ಕರಾವಲಂಬಮ್ ಸ್ತೋತ್ರ ಪಠಣದೊಂದಿಗೆ ವಲಯಾಧ್ಯಕ್ಷ ಯೇತಡ್ಕ ರಮೇಶ ಭಟ್ ಅವರ ಅಧ್ಯಕ್ಷತೆಯಲ್ಲಿ ಸಭೆ ಪ್ರಾರಂಭವಾಯಿತು. ವಲಯ ಕಾರ್ಯದರ್ಶಿ ಉಳುವಾನ ಈಶ್ವರ ಭಟ್ ಗತಸಭೆಯ ವರದಿಯನ್ನಿತ್ತು ಲೆಕ್ಕಪತ್ರ ಮಂಡಿಸಿದರು.
ಬದಿಯಡ್ಕ ಭಾರತೀ ವಿದ್ಯಾಪೀಠದಲ್ಲಿ ನಡೆದ ಹಲಸು ಮೇಳದಲ್ಲಿ ವಲಯದ ಸಕ್ರಿಯ ಪಾಲ್ಗೊಳ್ಳುವಿಕೆಯ ಬಗ್ಗೆ ಮಾಹಿತಿ ನೀಡಿ ಹಲಸಿನ ಮೇಳದ ಯಶಸ್ಸಿಗೆ ಕಾರಣರಾದ ವಲಯಗಳಿಗೆ ಹಲಸುಮೇಳ ಸಮಿತಿಯ ವತಿಯಿಂದ ನೀಡಲಾದ ಪ್ರಶಸ್ತಿ ಪತ್ರವನ್ನು ಸಭೆಗೆ ಪ್ರದರ್ಶಿಸಲಾಯಿತು. ಕಾಸರಗೋಡು ಹವ್ಯಕ ಸಭಾಭವನದಲ್ಲಿ ನಡೆದ ಮುಳ್ಳೇರಿಯ ಹವ್ಯಕ ಮಂಡಲ ಸಭೆಯಲ್ಲಿ ವಲಯದ ನಾಲ್ಕು ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿದ ಮಾಹಿತಿ ನೀಡಲಾಯಿತು. ಶ್ರೀ ಗುರುಗಳಿಂದ ಬೆಂಗಳೂರು ರಾಮಾಶ್ರಮದಲ್ಲಿ ನಡೆಯುತ್ತಿರುವ ಧಾರಾ-ರಾಮಾಯಣದ ಸೀತಾಕಲ್ಯಾಣದ ವ್ಯಾಖ್ಯಾನದ ಅಂಗವಾಗಿ ಶ್ರೀ ಸಂಸ್ಥಾನದವರ ಮಾರ್ಗದರ್ಶನದಂತೆ ಪ್ರತಿ ಮನೆಯಲ್ಲಿ ವಿಶಿಷ್ಟ ಉತ್ಸವವಾಗಿ ಆಚರಿಸಲು ಸೂಚಿಸಿದ ಪ್ರಯುಕ್ತ ವಲಯದ ಮನ್ನಿಪ್ಪಾಡಿ ಡಿ| ನಾರಾಯಣ ಭಟ್ ನಿವಾಸದಲ್ಲಿ ಸೀತಾಕಲ್ಯಾಣ ಆಚರಣೆ ನಡೆಸುವುದೆಂದು ತೀರ್ಮಾನಿಸಲಾಯಿತು.
Related Articles
Advertisement
ರಾಮತಾರಕ ಜಪ, ಶಾಂತಿ ಮಂತ್ರ, ಶಂಖನಾದದೊಂದಿಗೆ ಸಭೆ ಮುಕ್ತಾಯಗೊಂಡಿತು.