Advertisement

ಎಸ್‌ಐಟಿ ಅವಧಿ 1 ವರ್ಷ ವಿಸ್ತರಣೆ 

06:15 AM Feb 01, 2018 | Team Udayavani |

ಬೆಂಗಳೂರು: ಅಕ್ರಮ ಗಣಿಗಾರಿಕೆ ಕುರಿತಂತೆ ಸಿಬಿಐ ಕೈಬಿಟ್ಟ ಪ್ರಕರಣಗಳನ್ನು ಲೋಕಾಯುಕ್ತ ಸಂಸ್ಥೆಯ ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ವಹಿಸಿದ ಬೆನ್ನಲ್ಲೆ ತನಿಖಾ ದಳದ ಅವಧಿಯನ್ನು ಮತ್ತೆ ಒಂದು ವರ್ಷ ಕಾಲ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ.

Advertisement

ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಎಸ್‌ಐಟಿ ಅವಧಿಯನ್ನು 2019ರ ಜ. 24ರವರೆಗೆ ವಿಸ್ತರಿಸಲು ಒಪ್ಪಿಗೆ ನೀಡಲಾಗಿದೆ. ಇದರೊಂದಿಗೆ ಅಗತ್ಯ ಬಿದ್ದರೆ ಎಸ್‌ಐಟಿಯನ್ನು ಇನ್ನಷ್ಟು ಬಲಗೊಳಿಸುವ ಬಗ್ಗೆಯೂ ತೀರ್ಮಾನಿಸಲಾಗಿದೆ. ಸಂಪುಟ ಸಭೆ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಈ ಕುರಿತು ಮಾಹಿತಿ ನೀಡಿದರು.

ಆದರೆ, ಸಿಬಿಐ ಕೈಬಿಟ್ಟ ಪ್ರಕರಣಗಳ ತನಿಖೆ ಉದ್ದೇಶದಿಂದ ಮಾತ್ರ ಎಸ್‌ಐಟಿ ಕಾರ್ಯಾವಧಿ ವಿಸ್ತರಿಸಲಾಗಿಲ್ಲ.
ಈಗಾಗಲೇ ಎಸ್‌ಐಟಿ ನಡೆಸುತ್ತಿರುವ ತನಿಖೆಯೂ ಪೂರ್ಣಗೊಳ್ಳದ ಕಾರಣ ಅವಧಿ ವಿಸ್ತರಿಸಲಾಗಿದೆ. ಜತೆಗೆ ಇದೀಗ ಎಸ್‌ಐಟಿ ಮುಂದೆ ಸಾಕಷ್ಟು ಪ್ರಕರಣಗಳು ಬಾಕಿ ಇರುವುದರಿಂದ ಅದನ್ನು ಮತ್ತಷ್ಟು ಬಲವರ್ದನೆಗೊಳಿಸುವ ಬಗ್ಗೆಯೂ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. 

ಈ ಕುರಿತು ಎಸ್‌ಐಟಿಯಿಂದ ಬೇಡಿಕೆ ಬಂದಲ್ಲಿ ಅದನ್ನು ಪರಿಗಣಿಸಲು ತೀರ್ಮಾನಿಸಲಾಗಿದೆ. ಸಿಬಿಐ, ಕಾರವಾರ
ಮತ್ತು ಮಂಗಳೂರು ಬಂದರುಗಳ ಮೂಲಕ ಒಟ್ಟು 1028 ಶಿಪ್‌ಮೆಂಟ್‌ಗಳಲ್ಲಿ ಸಾಗಣೆಯಾದ 2.86 ಕೋಟಿ ಮೆಟ್ರಿಕ್‌ ಟನ್‌ ಅದಿರಿಗೆ ಸಂಬಂಧಿಸಿದ 76 ಪ್ರಕರಣ ಗಳನ್ನು ಕೈಬಿಟ್ಟಿದ್ದು, ಈ ಎಲ್ಲವನ್ನೂ ಎಸ್‌ಐಟಿ ತನಿಖೆಗೆ ವಹಿಸಲಾಗಿದೆ. ಇನ್ನೊಂದೆಡೆ ಎಸ್‌ಐಟಿಯಲ್ಲೇ ದಾಖಲಾದ 73 ಕೇಸ್‌ಗಳಲ್ಲಿ 28 ಪ್ರಕರಣಗಳಲ್ಲಿ ಆರೋಪಪಟ್ಟಿ ದಾಖಲಿಸಲಾ ಗಿದೆ. ಪ್ರಸ್ತುತ ತನಿಖೆ ಹಂತದಲ್ಲಿರುವ 26 ಪ್ರಕರಣಗಳ ಪೈಕಿ 5 ಪ್ರಕರಣಗಳಿಗೆ ಇನ್ನೂ ಪ್ರಾಸಿಕ್ಯೂಷನ್‌ಗೆ ಸರ್ಕಾರದ ಅನುಮತಿ ಸಿಕ್ಕಿಲ್ಲ. 3 ಪ್ರಕರಣಗಳಲ್ಲಿ ನ್ಯಾಯಾಲಯದ ತಡೆಯಾಜ್ಞೆ ಇದೆ. ಉಳಿದ 19 ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಈ ಎಲ್ಲಾ ಪ್ರಕರಣವನ್ನು ಮುಕ್ತಾಯ ಗೊಳಿಸುವ ಉದ್ದೇಶದಿಂದ ಎಸ್‌ಐಟಿ ಕಾರ್ಯಾವಧಿಯನ್ನು 1 ವರ್ಷ ವಿಸ್ತರಿಸಲಾಗಿದೆ.

ಅದಾನಿ ಎಂಟರ್‌ಪ್ರೈಸಸ್‌, ಆಲ್ಫೆ„ನ್‌ ಇಂಟರ್‌ ನ್ಯಾಷನಲ್‌ ಸೇರಿದಂತೆ 76 ಕಂಪನಿಗಳ ವಿರುದ್ಧದ ತನಿಖೆಯನ್ನು ಸಿಬಿಐ ಕೈಬಿಟ್ಟಿದ್ದು, ಈ ಎಲ್ಲಾ ಪ್ರಕರಣಗಳ ಕುರಿತು ಎಸ್‌ಐಟಿ ಹೊಸದಾಗಿ ತನಿಖೆ ಆರಂಭಿಸಲಿದೆ ಎಂದು ಸಚಿವರು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next