Advertisement

Prajwal Revanna ಮಾಜಿ ಕಾರು ಚಾಲಕ ಎಲ್ಲಿದ್ದಾನೆ ಎಂದು ಎಸ್‌ಐಟಿಗೆ ಗೊತ್ತು: ಪರಮೇಶ್ವರ್‌

12:14 AM May 06, 2024 | Team Udayavani |

ಬೆಂಗಳೂರು: ಪ್ರಜ್ವಲ್‌ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್‌ ಈಗ ಎಲ್ಲಿದ್ದಾನೆ ಎಂಬುದು ನಮಗೆ ಗೊತ್ತಿಲ್ಲ. ಆದರೆ ಎಸ್‌ಐಟಿಗೆ ಈ ಬಗ್ಗೆ ಮಾಹಿತಿ ಇದೆ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ತಿಳಿಸಿದರು.

Advertisement

ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರದಿಂದ ಎಸ್‌ಐಟಿಗೆ ಅಧಿಕಾರ ನೀಡಲಾಗಿದೆ. ಅದರಂತೆ ಎಸ್‌ಐಟಿ ತನ್ನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ರೇವಣ್ಣ ವಿರುದ್ಧ ದೂರು ಬಂದಿತ್ತು. ಅದರ ಪ್ರಕಾರ ಅವರನ್ನು ಬಂಧಿಸಿ, ಕೋರ್ಟಿಗೆ ಹಾಜರುಪಡಿಸಲಾಗಿದೆ. ಜತೆಗೆ ಪ್ರಜ್ವಲ್‌ ರೇವಣ್ಣ ವಿರುದ್ಧ ಬ್ಲೂ ಕಾರ್ನರ್‌ ನೋಟಿಸ್‌ ಜಾರಿಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಜ್ವಲ್‌ ಅವರ ಮಾಜಿ ಕಾರು ಚಾಲಕ ಕಾರ್ತಿಕ್‌ ಡಿ.ಕೆ.ಶಿವಕುಮಾರ್‌ ಕಸ್ಟಡಿಯಲ್ಲಿದ್ದಾನೆ ಎಂಬ ವದಂತಿ ಬಗ್ಗೆ ಕೇಳಿದಾಗ, ಕಾರ್ತಿಕ್‌ ಎಲ್ಲಿದ್ದಾನೆ ಅಂತ ನಮಗೆ ಗೊತ್ತಿಲ್ಲ. ಎಸ್‌ಐಟಿಗೆ ಗೊತ್ತು. ಯಾರು ವೀಡಿಯೋ ಬಿಡುಗಡೆ ಮಾಡಿದ್ದು ಎಂಬುದರ ಬಗ್ಗೆಯೂ ತನಿಖಾ ತಂಡವು ತನ್ನ ಅಧಿಕಾರ ಬಳಸಿ ಎಲ್ಲವನ್ನೂ ಪರಿಶೀಲಿಸಿ ಪತ್ತೆ ಹಚ್ಚಲಿದೆ ಎಂದು ಸ್ಪಷ್ಟಪಡಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next