ಶಿರಸಿ: ನಗರ ಭಾಗದ ತ್ಯಾಜ್ಯ ಹರಿಯುವ ಗಟಾರದಲ್ಲಿ ಕೇವಲ 250 ಮೀಟರ್ ಉದ್ದದ ಗಟಾರ ನಿರ್ಮಾಣ ಮಾಡಿದ್ದರೆ ಪರಿಸರ, ಕೃಷಿ ಭೂಮಿ ಎಲ್ಲವೂ ಉಳಿಯುತ್ತಿತ್ತು ಎಂದು ಕಲ್ಕುಣಿ ಗ್ರಾಮಸ್ಥರ ಪರವಾಗಿ ನಿವೃತ್ತ ಅಧಿಕಾರಿ ದಯಾನಂದ ನಾಯಕ ಹೇಳಿದರು.
ಲೋಕಾಯಕ್ತ ಎಸ್ಪಿ ಕುಮಾರ ಚಂದ್ರ ಎದುರು ಅಳಲು ತೋಡಿಕೊಂಡು ಪೊಟೊ ಸಹಿತ ಸಮಸ್ಯೆ ತೋರಿಸಿದರು.
ಒಂದು ಗಟಾರ ಆಗಿದ್ದರೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿರುವುದು ತಪ್ಪುತ್ತಿತ್ತು. ಪರಿಸರ ನಾಶವೂ ಉಳಿಯುತ್ತಿತ್ತು. ಈಗ ಬೆಳೆ, ಕೆರೆಗೂ ನಷ್ಟವಾಗಿದೆ ಎಂದರು.
ಕಳೆದ ಹಲವು ದಶಕಗಳಿಂದ ಈ ಸಮಸ್ಯೆ ಇದೆ. ನನ್ನ ಅಣ್ಣ ಕೂಡ ಹೋರಾಟ ಮಾಡಿ ಮೃತಪಟ್ಟ. ಆದರೆ, ನ್ಯಾಯದ ಹೋರಾಟಕ್ಕೆ ಆರಂಭಿಸುತ್ತಿದ್ದೇನೆ. ಎಲ್ಲರಿಗೂ ಅರ್ಜಿ ಕೊಟ್ಟು ಸುಸ್ತಾಗಿದ್ದೇನೆ. ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನ ಆಗಿಲ್ಲ. 35 ಲಕ್ಷ ರೂ. ಖರ್ಚು ಮಾಡಿ ಗಟಾರ ಮಾಡಿದ್ದರೆ ಕೆರೆ ಉಳಿಯುತ್ತಿತ್ತು ಎಂದರು.
ನಗರಸಭೆ, ಇಲಾಖೆ 140 ಲ.ರೂ.ಹೇಳುತ್ತದೆ. ಆದರೆ ಅಷ್ಟು ಹಣ ಬೇಡ. ಈ ಗಟಾರ ಆಗದೇ ಹೋದರೆ ನಗರದ ತ್ಯಾಜ್ಯ, ಸ್ಮಶಾನ ಇಲ್ಲೇ ಬರುತ್ತದೆ ಎಂದೂ ಹೇಳಿದರು.
ಯಡಹಳ್ಳಿ ಪಂಚಾಯತಿ ಗಿಡಮಾವಿನಕಟ್ಟೆಯಲ್ಲಿನ ಕುಲುಮೆ ಸಮಸ್ಯೆ ಕೂಡ ಮಾಲಿನಿ ರೋಹಿದಾಸ ನಾಯಕ ಹೇಳಿಕೊಂಡು ಕಣ್ಣೀರು ಹಾಕಿದರು. ಈ ವೇಳೆ ಡಿವೈಎಸ್ ಪಿ ಗಣೇಶ ಕೆ.ಎಲ್. , ಸಿಪಿಐ ರಾಮಚಂದ್ರ ನಾಯಕ, ತಹಸೀಲ್ದಾರ ಡಾ. ಶ್ರೀಧರ ಮುಂದಲಮನಿ ಇತರರು ಇದ್ದರು.
ಇದನ್ನೂ ಓದಿ: ಬೆಚ್ಚಿ ಬೀಳಿಸುವ ಘಟನೆ: ದೆಹಲಿ ಫ್ಲೈಓವರ್ ಬಳಿ ಮಹಿಳೆಯ ದೇಹದ ಭಾಗಗಳು ಪತ್ತೆ, ಪೊಲೀಸರಿಂದ ಶೋಧ