Advertisement
ನಗರದಿಂದ ಬಳ್ಳಾರಿ ಕಡೆಗೆ ಸಂಚರಿಸುವ ಬಹುತೇಕ ಬಸ್‌ಗಳು ಸಂಜೆ 5ಗಂಟೆ ಒಳಗೆ ತೆರಳುತ್ತಿರುವುದರಿಂದ ಕಾಲೇಜು ಮತ್ತು ಶಾಲಾ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ, ಸರ್ಕಾರಿ ನೌಕರರಿಗೆ ಬಳ್ಳಾರಿ ಕಡೆಗೆ ತೆರಳಲು ಯಾವುದೇ ಬಸ್ ಸೌಲಭ್ಯವಿಲ್ಲದೆ ದೂರದ ಗುಲ್ಬರ್ಗಾ-ಬಳ್ಳಾರಿ, ರಾಯಚೂರು-ಬಳ್ಳಾರಿ, ಹುಮ್ನಾಬಾದ್-ಬಳ್ಳಾರಿ, ಬೀದರ್-ಬಳ್ಳಾರಿ, ಸಿಂಧನೂರು-ಬೆಂಗಳೂರಿನಿಂದ ಬರುವ ಬಸ್‌ಗಳೇ ಸಂಚಾರಕ್ಕೆ ಆಧಾರವಾಗಿವೆ.
ಬಸ್ ನಿಲ್ಲಿಸದೆ ಇರುವುದರಿಂದ ಗುಲ್ಬರ್ಗಾ-ಬಳ್ಳಾರಿ, ರಾಯಚೂರು-ಬಳ್ಳಾರಿ, ಬೀದರ್-ಬಳ್ಳಾರಿ ಬಸ್‌ಗಳು ಕೇವಲ ತೆಕ್ಕಲಕೋಟೆ, ಸಿರಿಗೇರಿ ಕ್ರಾಸ್, ಭೆ„ರಾಪುರ ಕ್ರಾಸ್, ಕೋಳೂರು ಕ್ರಾಸ್, ಸಿಂದಿಗೇರಿ, ಬೈಲೂರಿನಲ್ಲಿ ನಿಲುಗಡೆ ಮಾಡಲಾಗುತ್ತದೆ. ಇನ್ನುಳಿದ ಗ್ರಾಮಗಳಿಗೆ ತೆರಳಬೇಕಾದ ಪ್ರಯಾಣಿಕರಿಗೆ ಇದರಿಂದಾಗಿ ಸಾಕಷ್ಟು ಸಮಸ್ಯೆ ಉಂಟಾಗುತ್ತಿದ್ದು, ಸಿರುಗುಪ್ಪದಿಂದ ಬಳ್ಳಾರಿವರೆಗೆ ಎಲ್ಲ ಗ್ರಾಮಗಳಲ್ಲಿ ನಿಲುಗಡೆ ಮಾಡುವ ಒಂದು ಬಸ್ ಮತ್ತು ಆಯ್ದ ಕೆಲವು ಗ್ರಾಮಗಳ ಕಡೆ ಮಾತ್ರ ನಿಲ್ಲಿಸುವ ಒಂದು ಬಸ್‌ನ್ನು ಸಂಜೆ 5-30ರ ನಂತರ ಓಡಿಸಿದರೆ ಸಿರುಗುಪ್ಪ ಕಡೆಯಿಂದ ಬಳ್ಳಾರಿ ಕಡೆಗೆ ಸಂಚರಿಸುವ ಎಲ್ಲ ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಆದರೆ ಸಿರುಗುಪ್ಪ ಸಾರಿಗೆ ಇಲಾಖೆ ಅಧಿ ಕಾರಿಗಳು ಮಾತ್ರ ಸಂಜೆ 5 ಗಂಟೆಯಿಂದ 7ಗಂಟೆವರೆಗೆ ಸಿರುಗುಪ್ಪದಿಂದ ಬಳ್ಳಾರಿ ಕಡೆಗೆ ಬಸ್
ಓಡಿಸಲು ಮುಂದಾಗುತ್ತಿಲ್ಲ. ಇದರಿಂದಾಗಿ ನಿತ್ಯವೂ 150ರಿಂದ 200ಕ್ಕೂ ಹೆಚ್ಚು ಪ್ರಯಾಣಿಕರು ಸಿರುಗುಪ್ಪ ಬಸ್‌ನಿಲ್ದಾಣದ ಮುಂದೆ ಬಸ್ಸಿಗಾಗಿ ಚಾತಕ ಪಕ್ಷಿಯಂತೆ ಕಾಯುವುದು ಸಾಮಾನ್ಯವಾಗಿದೆ.
Related Articles
ಬಸ್‌ಗಳು ತೆಕ್ಕಲಕೋಟೆಯಲ್ಲಿ ಮಾತ್ರ ನಿಲುಗಡೆ ಮಾಡುತ್ತವೆ. ಇನ್ನೆರಡು ಬಸ್ ಗಳು ಐದು ಕಡೆ ಮಾತ್ರ ನಿಲುಗಡೆ ಮಾಡುತ್ತಿರುವುದರಿಂದ ಈ ಭಾಗದಲ್ಲಿ ಸಂಚರಿಸುವ ಪ್ರಯಾಣಿಕರು ನಿತ್ಯವೂ ನರಕಯಾತನೆ ಅನುಭವಿಸಬೇಕಾಗಿದೆ.
ಭಾಗ್ಯಲಕ್ಷ್ಮೀ , ಗೃಹಿಣಿ
Advertisement
ಸಂಜೆ ನಂತರ ಬಳ್ಳಾರಿ ಕಡೆಗೆ ಹೊರಡುವ ಬಸ್‌ಗಳ ಕೊರತೆ ಇರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದೆ. ಈ ಬಗ್ಗೆ ಸಿರುಗುಪ್ಪ ಸಾರಿಗೆ ಡಿಪೋ ವ್ಯವಸ್ಥಾಪಕ ತಿರುಮಲೇಶರೊಂದಿಗೆ ಚರ್ಚಿಸಿದ್ದೇನೆ. ಪ್ರಯಾಣಿಕರ ಅನುಕೂಲಕ್ಕೆ ಶೀಘ್ರವಾಗಿ ಬಸ್‌ಬಿಡುವ ಭರವಸೆ ನೀಡಿದ್ದಾರೆ.ಎಸ್.ಬಿ. ಕೂಡಲಗಿ,
ತಹಶೀಲ್ದಾರ್ ಸಂಜೆ 5ರ ನಂತರ ಬಳ್ಳಾರಿ ಕಡೆಗೆ ಹೆಚ್ಚುವರಿ ಬಸ್ ಬಿಡುವ ಬಗ್ಗೆ ನಮ್ಮ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಈ ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು.
ಕೆ.ಎಂ. ತಿರುಮಲೇಶ,
ಸಿರುಗುಪ್ಪ ಸಾರಿಗೆ ಘಟಕದ ವ್ಯವಸ್ಥಾಪಕ ಆರ್.ಬಸವರೆಡ್ಡಿ ಕರೂರು