Advertisement

ಶಾಲೆಗಳೇ ಕ್ವಾರಂಟೈನ್‌ ಕೇಂದ್ರಗಳು

05:07 PM May 17, 2020 | Naveen |

ಸಿರುಗುಪ್ಪ: ತಾಲೂಕು ಕ್ರೀಡಾಂಗಣದಲ್ಲಿರುವ ಬಿಸಿಎಂ ಮತ್ತು ಸಮಾಜ ಕಲ್ಯಾಣ ಇಲಾಖೆಗೆ ಸೇರಿದ 4 ವಸತಿ ನಿಲಯಗಳು ಮತ್ತು ಕೆಂಚನಗುಡ್ಡ ಮುರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ನಡವಿ ಮುರಾರ್ಜಿ ದೇಸಾಯಿ, ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆಗಳು ಈಗ ಕ್ವಾರಂಟೈನ್‌ ಕೇಂದ್ರಗಳಾಗಿವೆ.

Advertisement

ಸೀಮಾಂಧ್ರ ಮತ್ತು ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದ ಸುಮಾರು 949 ಕಾರ್ಮಿಕರನ್ನು ಇಲ್ಲಿ 14 ದಿನ ಕ್ವಾರಂಟೈನ್‌ ಮಾಡಲಾಗಿದೆ. ಸೀಮಾಂಧ್ರ ಪ್ರದೇಶದಿಂದ ಬಂದ 204 ಜನರಿಗೆ ನಡಿವಿ ಗ್ರಾಮದ ವಸತಿ ಶಾಲೆ ಮತ್ತು ರಾಜ್ಯದ ವಿವಿಧ ಕಡೆಗಳಿಗೆ ವಲಸೆ ಹೋಗಿದ್ದ 745 ಕಾರ್ಮಿಕರಿಗೆ ನಗರದ ವಿವಿಧ ವಸತಿ ನಿಲಯಗಳು ಮತ್ತು ಕೆಂಚನಗುಡ್ಡ ಮುರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಬಳಸಿಕೊಳ್ಳಲಾಗಿದೆ. ಆರೋಗ್ಯ, ಕಂದಾಯ, ಪೊಲೀಸ್‌ ಇಲಾಖೆ ಸಿಬ್ಬಂದಿ 2 ಪಾಳಿಗಳಲ್ಲಿ ಕಾರ್ಮಿಕರ ಮೇಲೆ ನಿಗಾ ವಹಿಸುತ್ತಿದ್ದಾರೆ.

ಈಗಾಗಲೆ ವಸತಿ ನಿಲಯಗಳಲ್ಲಿರುವವರನ್ನು ಥರ್ಮಲ್‌ ಸ್ಕ್ರೀನಿಂಗ್‌ ತಪಾಸಣೆ ಮಾಡಿ ಸುಮಾರು 600 ಜನರ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ. ವಸತಿ ಶಾಲೆ ಅಡುಗೆ ಸಿಬ್ಬಂದಿಯೇ ಊಟ ತಯಾರಿಸುತ್ತಿದ್ದಾರೆ. ಕ್ವಾರಂಟೈನ್‌ ಗಳಲ್ಲಿ ಇರುವವರಿಗೆ ಸಕಾಲಕ್ಕೆ ಊಟ, ಉಪಾಹಾರ ನೀಡಲಾಗುತ್ತಿದೆ. ನಮ್ಮಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂದು ತಾಲೂಕು ನೋಡಲ್‌ ಅಧಿಕಾರಿ ಶ್ಯಾಮಪ್ಪ ತಿಳಿಸಿದ್ದಾರೆ.

204 ಜನ ಕ್ವಾರಂಟೈನ್‌ ಕೇಂದ್ರಕ್ಕೆ ತಾಲೂಕಿನಿಂದ ಕೂಲಿ ಕೆಲಸ ಅರಸಿ ಸೀಮಾಂಧ್ರದ ಗುಂಟೂರು ಜಿಲ್ಲೆಗೆ ವಲಸೆ ಹೋಗಿದ್ದ 190 ಕೂಲಿ ಕಾರ್ಮಿಕರನ್ನು ಕರೆತರಲಾಗಿದೆ. ಅವರೊಂದಿಗೆ ತೆಲೆಂಗಾಣದಿಂದ ಬಂದ 14ಜನರನ್ನು ನಡವಿ ಮುರಾರ್ಜಿ ಮತ್ತು ಕಿತ್ತೂರು ಚೆನ್ನಮ್ಮ ವಸತಿ ಶಾಲೆಗಳಲ್ಲಿ ಕ್ವಾರಂಟೈನ್‌ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next