Advertisement

Siruguppa: ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಪಡಿತರ ಅಕ್ಕಿ ವಶ

04:11 PM Jul 01, 2024 | Team Udayavani |

ಸಿರುಗುಪ್ಪ: ಗೋಸಬಾಳು ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಪಡಿತರ ಅಕ್ಕಿಯನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಸಿರಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಖಚಿತ ಮಾಹಿತಿ ಮೇರೆಗೆ ಸಿರಿಗೇರಿ ಪೊಲೀಸ್ ಠಾಣೆಯ ಎ ಎಸ್ ಐ ಶ್ರೀನಿವಾಸ ನೇತೃತ್ವದ ತಂಡ ದಾಳಿ ನಡೆಸಿ ₹26100 ಮೌಲ್ಯದ 25 ಚೀಲದಲ್ಲಿ 9ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಗೋಸಬಾಳ ಗ್ರಾಮ ಈಶ್ವರ ಗುಡಿ ಹತ್ತಿರ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಹೋಳಗುಂದ ಗ್ರಾಮದ ಪಂಚಣ್ಣ ಇವರನ್ನು ವಶಕ್ಕೆ ಪಡೆದು, ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಸಿರುಗುಪ್ಪ ಆಹಾರ ನಿರೀಕ್ಷಕ ಮಹಾರುದ್ರಗೌಡ ಹಾಜರಿದ್ದರು. ಈ ಬಗ್ಗೆ ಸಿರಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ: INDWvsSAW; ಚೆನ್ನೈನಲ್ಲಿ ಹರಿಣಗಳ ಬೇಟೆಯಾಡಿದ ಟೀಂ ಇಂಡಿಯಾ; ಏಕೈಕ ಟೆಸ್ಟ್ ನಲ್ಲಿ ಭರ್ಜರಿ ಜಯ

Advertisement

Udayavani is now on Telegram. Click here to join our channel and stay updated with the latest news.

Next