Advertisement

Siruguppa: ಐತಿಹಾಸಿಕ ಬೂದಿ ದಿಬ್ಬ ಗುಡ್ಡಕ್ಕೆ ಅಧಿಕಾರಿಗಳ ಭೇಟಿ… ಪರಿಶೀಲನೆ

12:30 PM Jul 02, 2024 | Team Udayavani |

ಸಿರುಗುಪ್ಪ: ತಾಲೂಕಿನ ತೆಕ್ಕಲಕೋಟೆ ಸಮೀಪವಿರುವ ಐತಿಹಾಸಿಕ ಬೂದಿದಿಬ್ಬ ಗುಡ್ಡಕ್ಕೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ತಹಶೀಲ್ದಾರ ಎಚ್ ವಿಶ್ವನಾಥ, ಮಾತನಾಡಿ ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುವ ಬೂದಿ ದಿಬ್ಬ ಗುಡ್ಡವು ಐತಿಹಾಸಿಕ ಮಹತ್ವವನ್ನು ಹೊಂದಿದ ಗುಡ್ಡವಾಗಿದ್ದು, ಕ್ರಿಸ್ತಶಕ ಪೂರ್ವದಲ್ಲಿ ಈ ಗುಡ್ಡ ನಿರ್ಮಾಣವಾಗಿದ್ದು, ಬಳ್ಳಾರಿ ಜಿಲ್ಲೆಯ ೨ ಕಡೆ ಮಾತ್ರ ಇಂತಹ ಮಹತ್ವದ ಗುಡ್ಡಗಳಿರುತ್ತವೆ, ಬಳ್ಳಾರಿಯ ಕುಡಿತಿನಿ ಮತ್ತು ತೋರಣಗಲ್ಲು ನಡುವೆ ಬರುವ ಗುಡ್ಡದ ಭಾಗದಲ್ಲಿ ದೊಡ್ಡದಾದ ಬೂದಿ ದಿಬ್ಬದ ಗುಡ್ಡವು ಇರುತ್ತದೆ. ಅಲ್ಲಿ ಬಿಟ್ಟರೆ ತೆಕ್ಕಲಕೋಟೆಯಲ್ಲಿ ಮಾತ್ರ ಬೂದಿ ದಿಬ್ಬ ಗುಡ್ಡವನ್ನು ನೋಡಲು ಸಾಧ್ಯವಿದೆ.

ಇಲ್ಲಿನ ಕೆಲವು ಸಂಶೋಧಾನಾರ್ಥಿ ವಿದ್ಯಾರ್ಥಿಗಳು ಮತ್ತು ಸಂಶೋಧನಾರ್ಥಿಗಳು ಬೂದಿ ದಿಬ್ಬದ ಗುಡ್ಡಕ್ಕೆ ರಕ್ಷಣಾ ಬೇಲಿಯನ್ನು ಅಳವಡಿಸುವಂತೆ ಅನೇಕಬಾರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಅಲ್ಲದೆ ಕಮಲಾಪುರದ ಪ್ರಾಚ್ಯವಸ್ತು ಇಲಾಖೆಯ ಮುಖ್ಯಾಧಿಕಾರಿ ನಿಹೀಲ್‌ದಾಸ್ ಕೂಡ ಇಲ್ಲಿಗೆ ಬೇಟಿ ನೀಡಿ ಪರಿಶೀಲನೆ ಮಾಡಿದ್ದು, ಇದಕ್ಕೆ ರಕ್ಷಣಾ ಬೇಲಿಯನ್ನು ಅಳವಡಿಸಿ ನಂತರ ನಮ್ಮ ಇಲಾಖೆಗೆ ಪಟ್ಟಣ ಪಂಚಾಯಿತಿ ಯಿಂದ ಪತ್ರವನ್ನು ಇಲಾಖೆಗೆ ಬರೆದು ಕಳುಹಿಸಿದರೆ ಈ ಸ್ಥಳವನ್ನು ಪ್ರಾಚ್ಯವಸ್ತು ಇಲಾಖೆಗೆ ಸೇರಿಸಲು ಕ್ರಮ ತೆಗೆದುಕೊಳ್ಳಲಾಗುವುದೆಂದು ಹೇಳಿದ್ದಾರೆ. ಇದರಿಂದಾಗಿ ಇಲ್ಲಿಗೆ ಬೇಟಿನೀಡಿ ಪರಿಶೀಲನೆ ಮಾಡಲಾಗಿದೆ.

ಈ ಗುಡ್ಡದ ಸ್ಥಳದ ಸರ್ವೆನಂಬರ್ ಸೇರಿದಂತೆ ಅಗತ್ಯ ದಾಖಲೆಗಳನ್ನು ನೀಡಬೇಕೆಂದು ಕಂದಾಯ ಅಧಿಕಾರಿ ಸುರೇಶ್‌ಬಾಬುಗೆ ಸೂಚಿಸಿದ ತಹಶೀಲ್ದಾರರು ಅಗತ್ಯ ದಾಖಲೆಗಳನ್ನು ಸಂಗ್ರಹಿಸಿದ ನಂತರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದೆಂದು ಹೇಳಿದರು.

ಮುಖ್ಯಾಧಿಕಾರಿ ಪರಶುರಾಮ, ಕಿರಿಯ ಅಭಿಯಂತರರು ಸುನಂದ, ಸದಸ್ಯರಾದ ಸಿದ್ದೇಶ, ನಸುರಿದ್ದೀನ್, ಖಾದರ್‌ಬಾಷ, ಮುಖಂಡರಾದ ನರೇಂದ್ರಸಿAಹ, ಹೆಚ್.ರಾಮು, ಸಂಶೋಧನ ವಿದ್ಯಾರ್ಥಿ ಕಾಡಸಿದ್ದ ಇದ್ದರು.

Advertisement

ಇದನ್ನೂ ಓದಿ: ಸರಕಾರಿ ಕಾರ್ಯಕ್ರಮಕ್ಕೆ ಬಂದು ಸ್ವಾಮೀಜಿ ರಾಜಕೀಯ ಮಾತಾಡಿದರೆ ಹೇಗೆ?: ಕೃಷ್ಣಭೈರೇಗೌಡ ಅಸಮಾಧಾನ

Advertisement

Udayavani is now on Telegram. Click here to join our channel and stay updated with the latest news.

Next