ಸಿರುಗುಪ್ಪ: ತಾಲೂಕಿನ ಬಿ.ಎಂ. ಸೂಗೂರು ಗ್ರಾಮದ ಬಿ.ನಾಗರಾಜ ಕರ್ನಾಟಕ ಲೋಕಸೇವಾ ಆಯೋಗ (ಕೆ.ಪಿ.ಎಸ್.ಸಿ) ಎರಡನೇ ಪ್ರಯತ್ನದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರಾಗಿ ಆಯ್ಕೆಯಾಗಿದ್ದಾರೆ.
ಪ್ರಸ್ತುತ ನಗರದ ಆದರ್ಶ ವಿದ್ಯಾಲಯದಲ್ಲಿ ಸಮಾಜ ವಿಜ್ಞಾನ
ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದು, 2014ರಲ್ಲಿ ಮೊದಲ ಬಾರಿಗೆ
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಸಹಕಾರ ಎಂಬ ಐಚ್ಛಿಕ ವಿಷಯ ಆಯ್ಕೆ ಮಾಡಿಕೊಂಡು ಸಂದರ್ಶನದಲ್ಲಿ ವಿಫಲರಾಗಿದ್ದರು. ಆದರೂ ದೃತಿಗೆಡದೆ ಮತ್ತೆ ಅದೇ ಐಚ್ಛಿಕ ವಿಷಯದಲ್ಲಿ 2017 ಡಿಸೆಂಬರ್‌ನಲ್ಲಿ ನಡೆದ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ತನ್ನ ಎರಡನೇ ಪ್ರಯತ್ನದಿಂದ ಉತ್ತೀರ್ಣರಾಗಿ ಡಿ.23ರಂದು ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರಾಗಿ ಆಯ್ಕೆಯಾಗಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹುಟ್ಟೂರು ಬಿ.ಎಂ. ಸೂಗೂರುನಲ್ಲಿ, ನಗರದ ಸರ್ಕಾರಿ ಕಾಲೇಜ್ ಪಿಯುಸಿ ಮತ್ತು ಎಸ್‌ಇಎಸ್ ಕಾಲೇಜಿನಲ್ಲಿ ಡಿ.ಇಡಿ ಶಿಕ್ಷಕರ ತರಬೇತಿ ಪಡೆದು 2010ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮುಕ್ಕುಂದ ಗ್ರಾಮದಲ್ಲಿ 6 ವರ್ಷ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ, 2016ರಲ್ಲಿ 6ರಿಂದ 8ನೇ ತರಗತಿಯ ಟಿಇಟಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ತಾಲೂಕಿನ ಅಗಸನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತ, 2018 ಫೆಬ್ರವರಿಯಲ್ಲಿ ನಡೆದ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ನಗರದ ಆದರ್ಶ ವಿದ್ಯಾಲಯದಲ್ಲಿ ಸಮಾಜವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ತಾಲೂಕಿನ ಬಿ.ಎಂ. ಸೂಗೂರು ಗ್ರಾಮದ ಈಶಪ್ಪ ಸರಸ್ವತಿ ದಂಪತಿಯ ಎರಡನೇ ಮಗನಾಗಿದ್ದು, ಬಡತನದಲ್ಲಿ ಕೂಲಿನಾಲಿಯಿಂದ ಓದಿ, ಶಿಕ್ಷಕನಾಗಿ ಕಾರ್ಯನಿರ್ವಹಿಸಿ ಇಂದು ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರಾಗಿ ಆಯ್ಕೆಯಾಗಿರುವುದು ತಾಲ್ಲೂಕಿಗೆ ಹೆಮ್ಮೆಯ ವಿಷಯವಾಗಿದೆ. ನಿರಂತರ ಅಭ್ಯಾಸದಿಂದ 9 ವರ್ಷದಲ್ಲಿ 7 ಹುದ್ದೆಗಳು ಮತ್ತು ಒಂದು ಪದವಿ ಉಪನ್ಯಾಸಕರ ಅರ್ಹತೆ ಪರೀಕ್ಷೆಯಲ್ಲಿ ತೆರ್ಗಡೆಯಾಗಿ ಪ್ರಸ್ತುತ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರಾಗಿ ಆಯ್ಕೆಯಾಗಿದ್ದಾರೆ.
ಓದಲು ಗ್ರಾಮೀಣ ಮತ್ತು ನಗರ ಕೊಟ್ಟೂರು ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರದೇಶ ಎಂಬ ವ್ಯಾತ್ಯಾಸಗಳಿಲ್ಲದೆ ನಿರಂತರವಾಗಿ ತಾಳ್ಮೆಯಿಂದ ಅಭ್ಯಾಸ ಮಾಡಿದಲ್ಲಿ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬಹುದು.
ಬಿ.ನಾಗರಾಜ,
ನಾವು ಪಡುವ ಕಷ್ಟವನ್ನು ಮಕ್ಕಳು ಪಡಬಾರದು ಎನ್ನುವ
ಉದ್ದೇಶದಿಂದ ಉತ್ತಮ ಶಿಕ್ಷಣ ಕೊಡಿಸಲು ಪ್ರಯತ್ನಿಸಿದ್ದರಿಂದ ನಮ್ಮ ಮಗ ಶ್ರದ್ಧೆಯಿಂದ ಓದಿ ಒಳ್ಳೆ ಹುದ್ದೆ ಪಡೆದಿರುವುದರಿಂದ ನಮಗೆ ಸಂತೋಷವಾಗಿದೆ.
ಈಶಪ್ಪ,
ನಾಗರಾಜರ ತಂದೆ