Advertisement

ಸಿರುಗುಪ್ಪದಲ್ಲಿ 60 ಕ್ಕೇರಿದ ಸೋಂಕಿತರ ಸಂಖ್ಯೆ

12:17 PM Jul 04, 2020 | Naveen |

ಸಿರುಗುಪ್ಪ: ತಾಲೂಕಿನಲ್ಲಿ ಶುಕ್ರವಾರ ಒಟ್ಟು 8 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು ತಾಲೂಕಿನಲ್ಲಿ ಇಲ್ಲಿವರೆಗೆ ಒಟ್ಟು 60 ಜನಕ್ಕೆ ಕೋವಿಡ್ ಸೋಂಕು ದೃಢಪಟ್ಟಿದ್ದು ಮೂರು ಜನ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

Advertisement

ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನುಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆಂದು ಟಿ.ಎಚ್‌.ಒ. ಸುರೇಶ್‌ಗೌಡ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನ ಅಗಸನೂರು ಗ್ರಾಮದಲ್ಲಿ 6 ವರ್ಷದ ಬಾಲಕ, ತೆಕ್ಕಲಕೋಟೆಯಲ್ಲಿ 54 ವರ್ಷ ವ್ಯಕ್ತಿಗೆ, ರಾರಾವಿ ಗ್ರಾಮದ 25 ವರ್ಷದ ಯುವಕ, ತಾಳೂರು ಗ್ರಾಮದ 18 ವರ್ಷದ ಯುವತಿಗೆ ಮತ್ತು ಸಿರುಗುಪ್ಪ ನಗರದ 12ನೇ ವಾರ್ಡ್‌ನ 54 ವರ್ಷದ ವ್ಯಕ್ತಿ, 43 ವರ್ಷದ ಮಹಿಳೆ, 21 ವರ್ಷದ ಯುವಕ, 19 ವರ್ಷದ ಯುವತಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸೋಂಕಿತರನ್ನು ಬಳ್ಳಾರಿ ಕೋವಿಡ್‌-19 ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಲೂಕಿನ ಅಗಸನೂರು, ತೆಕ್ಕಲಕೋಟೆ, ರಾರಾವಿ, ತಾಳೂರು ಮತ್ತು ನಗರದ 12ನೇ ವಾರ್ಡ್‌ನಲ್ಲಿ ಸೀಲ್‌ಡೌನ್‌ ಮಾಡಲಾಗಿದ್ದು, 100 ಮೀಟರ್‌ ಬಫರ್‌ ಝೋನ್‌ ಎಂದು ಗುರುತಿಸಲಾಗಿದೆ. ಕೋವಿಡ್ ಸೊಂಕು ಕಾಣಿಸಿಕೊಂಡ ಪ್ರದೇಶದಲ್ಲಿ ಡಿ. ಸ್ಯಾನಿಟೈಸರ್‌ ಸಿಂಪಡಣೆಯನ್ನು ಮಾಡಲಾಗಿದೆ, ನಮ್ಮ ಇಲಾಖೆಯ ಸಿಬ್ಬಂದಿಯು ಬಫರ್‌ ಝೋನ್‌ನಲ್ಲಿ ವಾಸಮಾಡುವವರ ಆರೋಗ್ಯ ತಪಾಸಣೆ ಮಾಡುವುದರೊಂದಿಗೆ ಪ್ರತಿಯೊಬ್ಬರ ಮಾಹಿತಿ ಸಂಗ್ರಹಿಸಲಿದ್ದಾರೆಂದು ಮಾಹಿತಿ ನೀಡಿದರು.

ವೈದ್ಯರಾದ ಸಿದ್ದಲಿಂಗೇಶ್ವರಿ, ಚನ್ನವೀರ, ಕೊಟ್ರೇಶ್‌, ಹಿರಿಯ ಆರೋಗ್ಯ ಸಹಾಯಕ ಗಿರೀಶ್‌, ಕಂದಾಯ ನಿರೀಕ್ಷಕ ಮಹಮ್ಮದ್‌ ಸಾದಿಕ್‌ಬಾಷ, ಆರೋಗ್ಯ ಸಿಬ್ಬಂದಿ ಪ್ರವೀಣ್‌, ಗ್ರಾಮಲೆಕ್ಕಾಧಿಕಾರಿಗಳಾದ ವಿರುಪಾಕ್ಷಪ್ಪ, ಪರಮೇಶ, ರಾಮಪ್ಪ, ನಗರಸಭೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next