Advertisement
ಮಕ್ಕಳು, ವಯಸ್ಸಾದವರಿಗೆ ಸೊಂಕು ಸುಲಭವಾಗಿ ಹರಡಿ ಆಸ್ಪತ್ರೆಗೆ ಅಲೆಯುವಂತಾಗಿದೆ. ನಗರದ ಸರ್ಕಾರಿ ಆಸ್ಪತ್ರೆ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಿತ್ಯವೂ ಮಕ್ಕಳು ಮತ್ತು ವೃದ್ಧರು ವೈರಲ್ ಫೀವರ್ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರದಲ್ಲಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ಹೊರ ರೋಗಿಗಳಿಗೆ ಶೇಕಡ ೫೦ಕ್ಕೂ ಹೆಚ್ಚು ಜನ ವೈರಲ್ ಫೀವರ್ನಿಂದ ಬಳಲುತ್ತಿದ್ದಾರೆ. ಕಳೆದ ಕೆಲವುದಿನಗಳ ಹಿಂದೆ ಸುರಿದ ಮಳೆಯಿಂದಾಗಿ ನಗರದಲ್ಲಿ ವ್ಯಾಪಕವಾಗಿ ಸೊಂಕು ಜ್ವರ ಮತ್ತು ಢೆಂಘಿ ಜ್ವರ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿರುತ್ತದೆ.
Related Articles
Advertisement
ನಗರದ 10ನೇ ವಾರ್ಡ್ ನಲ್ಲಿ ಆಯೇಷ ಸಿದ್ದಿಕಾ (8) ಎನ್ನುವ ಬಾಲಕಿಗೆ ಢೆಂಘಿ ಜ್ವರ ಕಾಣಿಸಿಕೊಂಡಿದ್ದು, ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೆ ಇತ್ತೀಚೆಗೆ ಮರಣಹೊಂದಿದ್ದಳು.
ನಗರದಲ್ಲಿ ಢೆಂಘಿ ಮತ್ತು ವೈರಲ್ ಫೀವರ್ ಜ್ವರ ಹರಡಲು ಸ್ವಚ್ಛತೆ ಇಲ್ಲದೆ ಇರುವುದು ಮುಖ್ಯ ಕಾರಣವಾಗಿದೆ ನಮ್ಮ ಮನೆಯಲ್ಲಿರುವ ಇಬ್ಬರು ಮಕ್ಕಳಿಗೆ ಜ್ವರ ಬಂದಿದ್ದು, ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಕಸ ವಿಲೇವಾರಿ ಮಾಡಲು ಹಾಗೂ ಚರಂಡಿಗಳನ್ನು ಸ್ವಚ್ಛಗೊಳಿಸಲು ಕ್ರಮ ತೆಗೆದುಕೊಳ್ಳಬೇಕೆಂದು ನಗರಸಭೆ ಅಧಿಕಾರಿಗಳಿಗೆ ಖುದ್ದಾಗಿ ಕಂಡು ಹೇಳಿ ಬಂದರೂ 8 ದಿನಕ್ಕೊಮ್ಮೆ ನಮ್ಮ ವಾರ್ಡ್ ನಲ್ಲಿ ಕಸ ವಿಲೇವಾರಿ ಮಾಡುತ್ತಿರುವುದರಿಂದ ರೋಗಗಳ ಹರಡುತ್ತಿವೆ ಎಂದು 10 ವಾರ್ಡ್ ನ ನಿವಾಸಿ ಕಟುಗರ ಮಾಲಸಾಬ್ ತಿಳಿಸಿದ್ದಾರೆ.
ನಗರದಲ್ಲಿರುವ 31 ವಾರ್ಡ್ ಗಳಲ್ಲಿ ಕಸ ವಿಲೇವಾರಿಯು ಸಮಪರ್ಕವಾಗಿ ನಡೆಯದೇ 8 ದಿನಕ್ಕೊಮ್ಮೆ ವಾರ್ಡ್ಗಳಲ್ಲಿ ಕಸ ವಿಲೇವಾರಿ ಮಾಡಲಾಗುತ್ತಿದೆ, ಕಸ ವಿಲೇವಾರಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಅಧಿಕಾರಿಗಳು ವಿಫಲರಾಗಿದ್ದು, ರೋಗ ಹರಡಲು ಕಾರಣವಾಗಿದೆ, ಕನಿಷ್ಠ ಫಾಗಿಂಗ್ ಮಾಡಿ ಎಂದು ತಿಳಿಸಿದರು ಮಾಡುತ್ತಿಲ್ಲವೆಂದು ನಗರಸಭೆ ಸದಸ್ಯ ಮಹೇಶ್ಗೌಡ ಆರೋಪಿಸಿದ್ದಾರೆ.
ನಗರದಲ್ಲಿ ವೈರಲ್ ಫೀವರ್ ಪ್ರಕರಣಗಳು ಹೆಚ್ಚಾಗಿದ್ದು, ಢೆಂಘಿ ಜ್ವರ ಕಾಣಿಸಿಕೊಂಡಿದ್ದು, ಢೆಂಘಿ ಜ್ವರಕ್ಕೆ ಚಿಕಿತ್ಸೆ ನೀಡಲು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ 11 ಬೆಡ್ಗಳ ವಾರ್ಡ್ ನ ಸಿದ್ದಪಡಿಸಲಾಗಿದೆ, 8 ಜನ ಢೆಂಘಿ ಜ್ವರದಿಂದ ಬಳಲುತ್ತಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ, ನಗರದಲ್ಲಿ ಸ್ವಚ್ಛತೆ ಕಾಪಾಡುವಂತೆ ನಗರಸಭೆ ಅಧಿಕಾರಿಳಿಗೆ ತಿಳಿಸಲಾಗಿದೆ ಎಂದು ಟಿ.ಹೆಚ್.ಒ. ಡಾ.ಡಿ.ವೀರೇಂದ್ರಕುಮಾರ್ ತಿಳಿಸಿದ್ದಾರೆ.
ಇರುವ ಸಿಬ್ಬಂದಿಯಿಂದಲೇ ನಗರದಲ್ಲಿ ಕಸ ವಿಲೇವಾರಿ ಮತ್ತು ಚರಂಡಿ ಸ್ವಚ್ಛತೆ ಕಾರ್ಯವನ್ನು ಮಾಡುತ್ತಿದ್ದೇವೆ, ಢೆಂಘಿ ಪ್ರಕರಣ ಕಾಣಿಸಿಕೊಂಡ ಸ್ಥಳಗಳಲ್ಲಿ ಆರೋಗ್ಯ ಇಲಾಖೆ ಸೂಚನೆಯ ಮೇರೆಗೆ ಧೂಮೀಕರಣವನ್ನು ಮಾಡುತ್ತಿದ್ದೇವೆಂದು ನೈರ್ಮಲ್ಯ ಅಧಿಕಾರಿ ರಂಗಸ್ವಾಮಿ ತಿಳಿಸಿದ್ದಾರೆ.
ಇದನ್ನೂ ಓದಿ: Thekkatte: ಪ್ರಯಾಣಿಕರ ಬಸ್ ತಂಗುದಾಣ ಸ್ಥಳಾಂತರಕ್ಕೆ ಮಹತ್ವದ ನಿರ್ಣಯ ಕೈಗೊಂಡ ಗ್ರಾ.ಪಂ.!