Advertisement
ಗಣೇಶನಗರ ಅಂಗನವಾಡಿ ಹಿಂಬದಿಯಲ್ಲಿ ಗೌರಿ ನಾಯ್ಕ 33 ದಿನಗಳ ನಿರಂತರ ಶ್ರಮದಿಂದ 5 ಅಡಿ ಅಗಲ, 45 ಅಡಿ ಆಳ ತೋಡಿದ ಬಾವಿಗೆ ಕಟ್ಟೆ ನಿರ್ಮಿಸಿದ್ದಾರೆ. ಈ ಬಾವಿ ಅಪಾಯಕ್ಕೆ ಕಾರಣವಾಗಬಾರದು ಎಂದು 3 ಅಡಿ ಎತ್ತರ ಕಟ್ಟೆಯನ್ನೂ ಸ್ವತಃ ನಿರ್ಮಿಸಿದ್ದಾರೆ. ಸುಮಾರು ಹತ್ತು ದಿನಕ್ಕೂ ಹೆಚ್ಚು ಕಾಲ ಶ್ರಮವಹಿಸಿ ಈ ಕಾರ್ಯ ಪೂರೈಸಿದ್ದಾರೆ. ಬಾವಿಯೊಳಗೆ ಕಸ ಬೀಳದಂತೆ ಕಬ್ಬಿಣದ ಬೇಲಿಯನ್ನೂ ಹಾಕಿದ್ದಾರೆ. ಕಟ್ಟೆ ಕಟ್ಟಲು ಸಮೀಪದ ತನ್ನ ಮನೆಯಲ್ಲಿದ್ದ ನೂರಾರು ಕೆಂಪು ಕಲ್ಲನ್ನು ಒಬ್ಬರೇ ಹೊತ್ತು ತಂದು ಅಚ್ಚುಕಟ್ಟಾಗಿ ಜೋಡಿಸಿದ್ದಾರೆ. ಸಿಮೆಂಟ್ ಕಾರ್ಯಕ್ಕೆ ಸ್ಥಳೀಯರ ನೆರವು ಪಡೆದಿದ್ದಾರೆ. ಮಕ್ಕಳಿಗೆ ಅಪಾಯ ಆಗದಂತೆ ಗೋಡೆ ಕಟ್ಟಿದ್ದು ಖುಷಿಯಾಗಿದೆ. ಬಾವಿ ಕೂಡ ಪೂರ್ಣವಾದಂತೆ ಆಗಿದೆ ಎಂದು ಗೌರಿ ನಾಯ್ಕ ಸಂತಸ ವ್ಯಕ್ತಪಡಿಸಿದ್ದಾರೆ. Advertisement
Sirsi: ಏಕಾಂಗಿಯಾಗಿ ತೋಡಿದ್ದ ಬಾವಿಗೆ ಕಟ್ಟೆ ಕಟ್ಟಿದ ಗೌರಿ
10:37 PM Apr 04, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.