Advertisement
ಅವರು ಗುರುವಾರ ಮಾರಿಕಾಂಬ ಕಲ್ಯಾಣ ಮಂಟಪದಲ್ಲಿ ರವೀಂದ್ರ ನಾಯ್ಕ ನೇತೃತ್ವದಲ್ಲಿ ಜರುಗಿದ ಅರಣ್ಯ ಭೂಮಿ ಹಕ್ಕಿನ 33 ವರ್ಷದ ಹೋರಾಟದ ಅಂಗವಾಗಿ ಏರ್ಪಡಿಸಿದ ‘ಅರಣ್ಯ ವಾಸಿಗಳ ಚಿಂತನ’ ಕಾರ‍್ಯಕ್ರಮ ಉದ್ಗಾಟಿಸಿ ಮಾತನಾಡುತ್ತಿದ್ದರು.ಮಲಗಿರುವ ಸರ್ಕಾರವನ್ನು ಎದ್ದೇಳಿಸಬೇಕು. ಭೂಮಿ ಮಾನವನ ಸಂವಿಧಾನ ಬದ್ಧ ಹಕ್ಕು. ಕಾನೂನು ಬಂದರೂ ಮಂಜೂರಿಯಲ್ಲಿ ವಿಫಲರಾಗಿದ್ದೇವೆ ಎಂದರು. ಜನಪ್ರತಿನಿಧಿಗಳ ನಿರಾಸಕ್ತಿ ಇದಕ್ಕೆ ಕಾರಣವಾಗಿದೆ. ಹೋರಾಟದೊಂದಿಗೆ ಕಾನೂನು ಜಾಗೃತವನ್ನು ಮೂಡಿಸಿ ಎಂದು ಹೇಳಿದರು.
Related Articles
ಹಿಂದಿನ ಚುನಾವಣೆ ಸಂದರ್ಭದಲ್ಲಿ ನಿಮ್ಮ ಒತ್ತಾಯಕ್ಕೆ ಸ್ಪಂದಿಸಿ ನನ್ನ ಸಾಮರ್ಥ್ಯದ ಮೇಲೆ ಚುನಾವಣೆಯಲ್ಲಿ ಟೀಕೆಟ್ ಕೇಳಿದೆ. ಆದರೆ, ರವೀಂದ್ರ ನಾಯ್ಕ ಹತ್ತಿರ ದುಡ್ಡು ಇಲ್ಲ ಎಂದರು. ಹೌದು, ನನ್ನ ಹತ್ತಿರ ಚುನಾವಣೆ ಖರ್ಚು ಮಾಡುವಷ್ಟು ದುಡ್ಡು ಇಲ್ಲದಿರಬಹುದು. ಆದರೆ, ನೀವಿದ್ದೀರಿ. ದುಡ್ಡು ಇಲ್ಲವೆಂದು ಅಪಾದನೆ ಮಾಡಿದವರಿಗೆ, ಮುಂದಿನ ದಿನಗಳಲ್ಲಿ ಸೂಕ್ತ ಸಮಯ, ಸೂಕ್ತ ವೇದಿಕೆಯಲ್ಲಿ ಉತ್ತರಿಸುವೆ. -ರವೀಂದ್ರ ನಾಯ್ಕ ಹೋರಾಟಗಾರ
Advertisement