ಶಿರಸಿ: ಬನವಾಸಿ ಸಮೀಪದ ಹಾಡ್ಲಗಿ ಕನಕಾಪುರ ಕೆರೆಗೆ ಈಜಾಡಲು ಹೋಗಿದ್ದ ಎಸ್ಎಸ್ ಎಲ್ ಸಿ ವಿದ್ಯಾರ್ಥಿ ನೀರಲ್ಲಿಮುಳುಗಿ ಮೃತಪಟ್ಟ ದಾರುಣ ಘಟನೆ ಗುರುವಾರ ನಡೆದಿದೆ.
ಸ್ಥಳೀಯ ನಾಗಶ್ರೀ ಪ್ರೌಢಶಾಲೆ ವಿದ್ಯಾರ್ಥಿಯಾಗಿದ್ದ ರಾಮ್ ಕುಮಾರ್ ಮಧುಕೇಶ್ವರ ನಾಯ್ಕ್ ಮಧುರವಳ್ಳಿ ಮೃತ ದುರ್ದೈವಿ. ನಾಲ್ವರು ವಿದ್ಯಾರ್ಥಿ ಸ್ನೇಹಿತರ ಜತೆ ಈಜಾಡಲು ಹೋಗಿದ್ದ.
ಬನವಾಸಿ ಪಿಎಸ್ ಐ ಚಂದ್ರಕಲಾ ಪತ್ತಾರ್ ನೇತೃತ್ವದ ಪೊಲೀಸರ ತಂಡ ಸ್ಥಳೀಯ ಗ್ರಾಮಸ್ಥರು ಫೈರ್ ಬ್ರಿಗೇಡ್ ತಂಡ ಹಾಗೂ ಶ್ರೀ ಮಾರಿಕಾಂಬಾ ಲೈಫ್ ಗಾರ್ಡ್ ಟೀಮ್ ನ ಗೋಪಾಲ್ ಗೌಡ ನೇತೃತ್ವದ ತಂಡ ಸತತ ಕಾರ್ಯಾಚರಣೆ ನಡೆಸಿ ಕೆರೆಯಲ್ಲಿನ
ಮೃತ ದೇಹವನ್ನು ಪತ್ತೆ ಹಚ್ಚಿ ಮೇಲಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸಿಪಿಐ ರಾಮಚಂದ್ರ ನಾಯಕ ತಿಳಿಸಿದ್ದಾರೆ.