Advertisement

ನಕಲಿ‌ ಜಾಲ ತಾಣಗಳ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡ : ಪ್ರಸನ್ನ ಶೆಟ್ಟಿ ಕಳವಳ

05:18 PM Jun 02, 2022 | Team Udayavani |

ಶಿರಸಿ : ಜಿಲ್ಲೆಯಲ್ಲಿ ನಕಲಿ ಸಾಮಾಜಿಕ ಜಾಲತಾಣಗಳ ಖಾತೆಗಳಿಂದ ರಾಷ್ಟ್ರ ಮತ್ತು ರಾಜ್ಯಗಳ ಹಾಗೂ ಸ್ಥಳೀಯ ನಾಯಕರು ಹಾಗೂ ವ್ಯಕ್ತಿಗಳ ಅವಹೇಳನ ಹಾಗೂ ಅವರ ವಿರುದ್ಧ ನಿರಂತರ ಸುಳ್ಳು ಸುದ್ದಿಗಳನ್ನು ಹರಡುತ್ತಿರುವುದು ನಡೆಯುತ್ತಿದೆ ಎಂದು ಜಿಲ್ಲಾ‌ ಕಾಂಗ್ರೆಸ್ ಸಾಮಾಜಿಕ ಜಾಲ ತಾಣ ವಿಭಾಗದ ಜೊಲ್ಲಾಯ ಅಧ್ಯಕ್ಷ ಪ್ರಸನ್ನ ಶೆಟ್ಟಿ ಕಳವಳ ವ್ಯಕ್ತಪಡಿಸಿದ್ದಾರೆ.

Advertisement

ಈ ಕುರಿತು ಮಾತನಾಡಿದ ಅವರು ನಕಲಿ‌ ಜಾಲ ತಾಣಗಳ ಹಿಂದೆ ಪ್ರಭಾವಿಗಳ ಬೆಂಬಲ ಇರುವ ಸಂಶಯ ಮೂಡುತ್ತಿದ್ದೂ ನಕಲಿ ಖಾತೆಗಳ ಬಳಕೆದಾರರ ಒಂದು ದೊಡ್ಡ ಮಾಫಿಯಾವೇ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈಖರಿ ಕಂಡುಬರುತ್ತಿದೆ ಎಂದೂ ಆತಂಕಿಸಿದ್ದಾರೆ.

ನಕಲಿ ಖಾತೆಗಳ ಬಳಕೆದಾರರಿಗೆ ಬೇಕಾಗುವ ಸಲಕರಣೆಗಳು ಮತ್ತು ವ್ಯಕ್ತಿಗಳ ಮಾಹಿತಿಗಳನ್ನು ಒದಗಿಸುತ್ತಿರುವವರು ಯಾರು ಎನ್ನುವುದನ್ನು ಪೊಲೀಸ್ ಇಲಾಖೆಯು ಪತ್ತೆ ಹಚ್ಚಲೇಬೇಕು. ಈ ಹಿಂದೆಯೇ ಕೆಲವು ಖಾತೆಗಳ ವಿರುದ್ಧ ಕಾರವಾರದಲ್ಲಿ ದೂರು ದಾಖಲಿಸಿದ್ದು ಯಾವುದೇ ಕ್ರಮ ಕೈಗೊಂಡಿಲ್ಲ ಎಂದೂ ದೂರಿದ್ದಾರೆ.

ಇದನ್ನೂ ಓದಿ : ಗೋವಾದ ಮಾಪ್ಸಾದಲ್ಲಿ ಹಾಡಹಗಲೇ ಪ್ರವಾಸಿಗರ ಲೂಟಿ

ಇತ್ತೀಚಿನ ದಿನಗಳಲ್ಲಿ ಫೇಸ್ ಬುಕ್ ಒಂದರಲ್ಲೆ ದಿನ ನಿತ್ಯ ಹೊಸ ಹೊಸ ನಕಲಿ ಖಾತೆಗಳು ಸೃಷ್ಟಿಯಾಗುತ್ತಿದ್ದರೂ ಕೂಡ ಜಿಲ್ಲೆಯ ಸೈಬರ್ ಕ್ರೈಂ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ.

Advertisement

ರಾಜ್ಯದ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿದ್ದೂ ಜಿಲ್ಲೆಯಲ್ಲಿ ಜಾತಿ, ಧರ್ಮಗಳ ನಡುವೆ ಹಾಗೂ ಪಕ್ಷಗಳ ಕಾರ್ಯಕರ್ತರ ನಡುವೆ ದ್ವೇಷದ ಮನೋಭಾವನೆ ಬಿತ್ತುವ ಕಾರ್ಯವನ್ನು ಕಿಡಿಗೇಡಿಗಳು ಮಾಡುತ್ತಿದ್ದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಶಾಂತಿ ಸೌಹಾರ್ದತೆಯನ್ನು ಕದಡುವ ಕಾರ್ಯಕ್ಕೆ ಮುಂದಾಗುತ್ತಿರುವ ನಕಲಿ ಖಾತೆಯ ಬಳಕೆದಾರರ ವಿರುದ್ಧ ಪೊಲೀಸ್ ಇಲಾಖೇಯು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳದೆ ಇದ್ದರೆ ಮುಂದಿನ ದಿನ ಈ ಕೃತ್ಯವು ಜಿಲ್ಲೆಯ ತಿಳಿಯಾದ ವಾತಾವರಣವನ್ನು ಕೆಡಿಸುವುದರಲ್ಲಿ ಸಂದೇಹವೇ ಇಲ್ಲ ಎಂದೂ ಆತಂಕ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next