Advertisement

ಶಿರಸಿ: ಅಂದು ದೇಶಪ್ರೇಮಿಗಳೆಂಬಂತೆ ಫೊಸು ಕೊಟ್ಟವರು ಇಂದೇನು ಹೇಳುತ್ತಾರೆ?

06:01 PM Sep 28, 2022 | Team Udayavani |

ಶಿರಸಿ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ‌ಪಿಎಫ್ಐ ಸಂಘಟನೆಯನ್ನು ನಿಷೇಧಿಸಿದ್ದು, ಅವರ ತಾಕತ್ತು ತೋರುತ್ತದೆ. ದೇಶದ್ರೋಹಿಯಾಗಿ, ದೇಶದ ಏಕತೆ ಧಕ್ಕೆ ತರುವವರ ಪರವಾಗಿ ಅಂದು ದೇಶಪ್ರೇಮಿಗಳೆಂಬಂತೆ ಫೊಸು ಕೊಟ್ಟವರು ಇಂದೇನು ಹೇಳುತ್ತಾರೆ? ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ ಪ್ರಶ್ನಿಸಿದರು.

Advertisement

ಅವರು‌ ನಗರದಲ್ಲಿ ಸೆ.28ರ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿ, ದೇಶದ ಭದ್ರತೆ, ಅಖಂಡತೆ, ಏಕತೆಗೆ ಧಕ್ಕೆ ತರುವ ಪಿ.ಎಫ್.ಐ. ಸಂಘಟನೆ ಐದು ವರ್ಷಗಳ ಕಾಲ ನಿಷೇಧ‌ ಮಾಡಿದ್ದನ್ನು ಸ್ವಾಗತಿಸುತ್ತೇವೆ. ರಾಷ್ಟ್ರೀಯ ತನಿಖಾ ದಳದ ದಾಳಿಯ ಬಳಿಕ ದೇಶ ವಿಭಜನೆ, ರಾಷ್ಟ್ರದ ನಾಯಕರ ಹತ್ಯೆ ಸಂಚು, ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವುದು ಗಮನಕ್ಕೆ ಬಂದಿದೆ. ನಿಷೇಧಿತ ಪಿ.ಎಫ್.ಐ. ಸಂಘಟನೆಯನ್ನು ಪ್ರೋತ್ಸಾಹಿಸಿ, ಬೆಳೆಸಿದ ಸಕ್ರಿಯ ಕಾರ್ಯಕರ್ತರ ಬಗ್ಗೆಯೂ ಲಕ್ಷ್ಯ ಇಡಬೇಕು. ಹಿಂದೆ ಬಂಧಿಸಿದಾಗ ಬಿಡುಗಡೆ ಮಾಡಲು, ದೇಶಪ್ರೇಮಿ ಎಂಬಂತೆ ಪೊಸು ಕೊಟ್ಟವರು ಏನು ಹೇಳುತ್ತಾರೆ ಎಂದು ಕೇಳಿದರು.

ವೋಟಿಗಾಗಿ ಮುಸ್ಲಿಂ ಸಂಘಟನೆ ಬ್ಯಾನ್ ಮಾಡುತ್ತಿಲ್ಲ. ಗೋ ಮಾಂಸ ಭಕ್ಷಣೆ ಮಾಡಿದ ಬುದ್ದಿಜೀವಿಗಳು ಏನಾಗಿದ್ದಾರೆ ಎಂಬುದು ಗೊತ್ತು. ಇಂಥವರನ್ನು ಯಾರು ಬೆಂಬಲಿಸುತ್ತಾರೆ ಎಂಬುದು ಕೂಡಾ ಗೊತ್ತಿದೆ ಎಂದರು.

ಮುಖ್ಯಮಂತ್ರಿಗಳು ಯಾರಿಗೂ ಅನ್ಯಾಯ ಆಗದಂತೆ ಮೀಸಲಾತಿ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಳೆಯ ಕಾರಣದಿಂದ ರಸ್ತೆ ಹದಗೆಟ್ಟಿದೆ. ಅದನ್ನೂ ಶೀಘ್ರ ದುರಸ್ತಿ ಮಾಡುತ್ತೇವೆ ಎಂದು ಹೇಳಿದರು.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next