ಶಿರಸಿ: ಕೆಡಿಸಿಸಿ ಬ್ಯಾಂಕ್ ನೀಡುವ ಅಜ್ಜೀಬಳ ಜಿ.ಎಸ್.ಹೆಗಡೆ ಅವರ ಹೆಸರಿನ ಪ್ರಶಸ್ತಿಯನ್ನು ಕುಮಟಾ ತಾಲೂಕಿನ ಕೂಜಳ್ಳಿಯ ಹಿರಿಯ ಸಹಕಾರಿ ತಿಮ್ಮಣ್ಣ ಗೋ ಭಟ್ಟ ಅವರಿಗೆ ಅತ್ಯುತ್ತಮ ಸಹಕಾರಿ, ಮುಂಡಗೋಡ ತಾಲೂಕಿನ ಕಾಳಗನಕೊಪ್ಪದ ರಾಮು ಬಸವಣ್ಣೆಪ್ಪ ಸುಬ್ಬಾಯವರ ಅತ್ಯುತ್ತಮ ಸಹಕಾರಿ ನೌಕರ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರಾಜ್ಯ ಮಟ್ಟದ ಸಹಕಾರಿ ಸಮಾವೇಶದಲ್ಲಿ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ್ ಪ್ರದಾನ ಮಾಡಿದರು.
ಅತ್ಯುತ್ತಮ ಪ್ರಾಥಮಿಕ ಪತ್ತಿನ ಸಹಕಾರಿ ಸಂಘವಾದ ವಾನಳ್ಳಿಯ ಮೆಣಸಿ ಸೀಮೆ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘಕ್ಕೆ ಎಸ್.ಪಿ.ಪಂಡಿತ್ ಪ್ರಶಸ್ತಿಯನ್ನು ಕೂಡ ಪ್ರದಾನ ಮಾಡಲಾಯಿತು.
ಇದೇ ವೇಳೆ ಅಪೆಕ್ಸ್ ಬ್ಯಾಂಕ್ ನೀಡುವ 10 ಅತ್ಯುತ್ತಮ ಪ್ರಾಥಮಿಕ ಸಂಘಗಳಿಗೆ ತಲಾ 10 ಸಾ.ರೂ. ನಂತೆ ಜಿಲ್ಲೆಯ ಶಿರಸಿಯ ಹೆಗಡೆಕಟ್ಟ, ಸಿದ್ದಾಪುರದ ಬಿದ್ರಕಾನ, ಯಲ್ಲಾಪುರದ ಭರತನಳ್ಳಿ, ಮುಂಡಗೋಡಿನ ಚವಡಳ್ಳಿ, ಹಳಿಯಾಳದ ಯಡೋಗಾ, ಜೋಯಿಡಾದ ಜಗಲ್ ಪೇಟ, ಅಂಕೋಲಾದ ಹಿಚಕಡ, ಕುಮಟಾದ ಕತಗಾಲ, ಹೊನ್ನಾವರದ ಖರ್ವಾ, ಭಟಕಳದ ಕಾಯ್ಕಿಣಿಗೆ ನೀಡಲಾಯಿತು.
ಪ್ರಾಥಮಿಕ ಕೃಷಿ ಪತ್ತಿನ ಸಂಘಗಳಿಗೆ ಡಿಸಿಸಿ ಬ್ಯಾಂಕ್ ನೀಡುವ ಪುರಸ್ಕಾರ ತಲಾ 10 ಸಾ.ರೂ. ಒಳಗೊಂಡಿದ್ದು, ಶಿರಸಿ ಅಜ್ಜಿಬಳ, ಸಿದ್ದಾಪುರದ ಲಂಬಾಪುರ, ಮುಂಡಗೋಡದ ಚೌಡಳ್ಳಿ, ಯಲ್ಲಾಪುರದ ಹಾಸಣಗಿ, ಹಳಿಯಾಳದ ಹಳಿಯಾಳ, ಜೋಯಿಡಾದ ಪ್ರಧಾನಿ, ಕಾರವಾರದ ಚಂಡಿಯಾ, ಅಂಕೋಲಾದ ಆಂದ್ಲೆ, ಕುಮಟಾದ ಮಿರ್ಜಾನ, ಹೊನ್ನಾವರದ ಹಡಿನಬಾಳ, ಭಟಕಳದ ಮುರ್ಡೆಶ್ವರ, ದಾಂಡೇಲಿಯ ದಾಂಡೇಲಪ್ಪ ಸೊಸೈಟಿಗೆ ನೀಡಲಾಯಿತು.
ಕೃಷಿಯೇತರ ಸಂಸ್ಥೆಗಳಾದ ಸಿದ್ದಾಪುರ ಟಿಎಂಎಸ್, ಶಿರಸಿ ಒಕ್ಕಲುತನ ಸಂಸ್ಥೆ, ಕುಮಟಾ ತೆಂಗಿನ ನಾರಿನ ಕೈಗಾರಿಕೆ ಸಂಸ್ಥೆ, ಕುಮಟಾದ ಅರ್ಬನ್ ಕೋಆಪರೇಟಿವ, ಶಿರಸಿ ಭೂತೇಶ್ವರ, ಯಲ್ಲಾಪುರ ಅರ್ಬನ್, ದಾಂಡೇಲಿ ಕೂಲಿಕಾರರ ಸಂಸ್ಥೆ, ಶಿರಳಗಿ ಹಾಲು ಸಂಘ, ಕಾರವಾರದ ದೈವಜ್ಞ ಸೊಸೈಟಿ, ಕಾರವಾರ ಪರ್ಶಿಯನ್ ಬೋಟ್ ಮೀನುಗಾರರ ಸಂಸ್ಥೆಗೆ ತಲಾ 10 ಸಾವಿರ ರೂ. ಬಹುಮಾನ ನೀಡಲಾಯಿತು. ಇದೇ ಕಾರ್ಯಕ್ರಮದಲ್ಲಿ ನೂರಕ್ಕೆ ನೂರು ಸಾಲ ವಸೂಲಿ ಮಾಡಿದ ವಿವಿಧ ಸೊಸೈಟಿ ಕಾರ್ಯದರ್ಶಿಗಳಿಗೆ ಕೂಡ ಪುರಸ್ಕಾರ ಪ್ರದಾನ ಮಾಡಲಾಯಿತು.
ಉಪಾಧ್ಯಕ್ಷ ಮೋಹನದಾಸ ನಾಯಕ, ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಪ್ರಧಾನ ವ್ಯವಸ್ಥಾಪಕ ಆರ್.ಜಿ. ಭಾಗ್ವತ್ ಇನ್ನಿತರ ಸಹಕಾರಿಗಳು ಪಾಲ್ಗೊಂಡಿದ್ದರು.