Advertisement

ಶಿರಸಿ: ಸಹಸ್ರಲಿಂಗಕ್ಕೆ, ಬನವಾಸಿಗೆ ಭಕ್ತ ಸಾಗರ

02:11 PM Feb 18, 2023 | Team Udayavani |

ಶಿರಸಿ: ತಾಲೂಕಿನ ಐತಿಹಾಸಿಕ ಪ್ರಸಿದ್ಧ ಸಹಸ್ರಲಿಂಗ ಹಾಗೂ ಬನವಾಸಿ‌ ಮಧುಕೇಶ್ವರ ದೇವಲಾಯಕ್ಕೆ ಭಕ್ತ ಸಾಗರವೇ‌ ಮಹಾ ಶಿವರಾತ್ರಿಯಂದು ಹರಿದು ಬಂತು.

Advertisement

ಶನಿವಾರ ತಾಲೂಕಿನ ಹಲವಡೆ ಶ್ರದ್ಧಾ ಭಕ್ತಿಯಿಂದ ಶಿವರಾತ್ರಿ ಆಚರಣೆ ಮಾಡಿ ಚಿಲಗಿ ಚಂಡೆ,ಪತ್ರೆಯ ಜೊತೆ ರುದ್ರಚನೆಗಳನ್ನು ಹೇಳಿ ಪೂಜಿಸಿದ ಭಕ್ತರು, ಮನೆ ಮನೆಗಳಲ್ಲಿ ಪೂಜಿಸಿದರು. ಉಪವಾಸ ಕೂಡ ಆಚರಿಸಿದರು.

ಸಹಸ್ರಲಿಂಗಕ್ಕೆ ವಿಶೇಷ ವಾಹನ ಸಾರಿಗೆಯನ್ನು ಮಾಡಲಾಗಿತ್ತು. ಹಲವಡೆ ಅರವಟ್ಟಿಗೆ‌ ಕೂಡ ಇಡಲಾಗಿತ್ತು. ಸಹಸ್ರಲಿಂಗದಲ್ಲಿ ಭೈರುಂಬೆ ಪಂಚಾಯ್ತಿ ಅಧ್ಯಕ್ಷ ರಾಘು ನಾಯ್ಕ‌ ನೇತೃತ್ವದಲ್ಲಿ ಸಿದ್ದತೆ ಜೊತೆ ಸಿಸಿಟಿವಿ ಕೂಡ ಅಳವಡಿಸಲಾಗಿತ್ತು.

ದೂರದ ಉತ್ತರ ಕರ್ನಾಟಕ ಭಾಗದಿಂದಲೂ ಆಗಮಿಸಿದ ಭಜಕರು ಶಾಲ್ಮಲಾ ನದಿಯೊಳಗಿನ ಶಿವ ಲಿಂಗಗಳಿಗೆ ಪೂಜೆ ನಡೆಸಿದರು. ಬನವಾಸಿಯಲ್ಲಿ ಮಧು ಬಣ್ಣದ‌ ಮಧುಕೇಶ್ವರನಿಗೆ ಕೂಡ ವಿಶೇಷ ಪೂಜೆ ಸಲ್ಲಿಸಿದರು.  ಸೋಮಸಾಗರ, ಲಿಂಗದಕೋಣ, ಈಶ್ವರ ದೇವಸ್ಥಾನ, ದೊಡ್ನಳ್ಳಿ ದೇವಾಲಯ ಸೇರಿದಂತೆ ಹಲವಡೆ ವಿಶೇಷ ಪೂಜೆಗಳು ನಡೆದವು. ಭಕ್ತರು ನೀರನ್ನು ಹಾಕಿಯೂ ಧನ್ಯತೆ ಅನುಭವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next