Advertisement

Sirsi; ಮನೆ ಬಾಗಿಲಿಗೆ ಬಂದ ಬೃಹತ್ ಕಾಳಿಂಗ ಸರ್ಪ

05:21 PM Oct 26, 2023 | Team Udayavani |

ಶಿರಸಿ: ಬೃಹತ್ ಕಾಳಿಂಗ ಸರ್ಪ ಮನೆ ಎದುರು ಆಗಮಿಸಿ ಭಯ ಹುಟ್ಟಿಸಿದ ಘಟನೆ ತಾಲೂಕಿನ ನೆಗ್ಗು ಗ್ರಾಮ ಪಂಚಾಯಿತಿ ಮರ್ಲಮನೆಯಲ್ಲಿ ಗುರುವಾರ ನಡೆದಿದೆ.

Advertisement

ಇಲ್ಲಿಯ ಗಣಪತಿ ಆರ್ ಹೆಗಡೆ ಅವರ ಮನೆಯಂಗಳದಲ್ಲಿ ಸುಮಾರು 9 ಅಡಿ ಉದ್ದದ ಕಾಳಿಂಗ ಪ್ರತ್ಯಕ್ಷವಾಗಿದೆ. ಕಳೆದ ಎರಡು ಮೂರು ದಿನಗಳಿಂದ ಮನೆ ಸಮೀಪದಲ್ಲಿಯೇ ಇದ್ದ ಅಡಕೆ ತೋಟದಲ್ಲಿ ಕಾಣಿಸಿಕೊಳ್ಳುತ್ತಿದ್ದ ಹಾವು ಗುರುವಾರ ಮನೆಯಂಗಳಕ್ಕೇ ಬಂದಿತ್ತು. ನೋಡುಗರಿಗೆ ಎದೆ ನಡುಗಿಸುವ ಬೃಹತ್ ಆಕಾರ ಹೊಂದಿದ ಹಾವನ್ನು ಉರಗ ತಜ್ಞ ಪ್ರಶಾಂತ ಹುಲೇಕಲ್ ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next