ಶಿರಸಿ: ಇಲ್ಲಿನ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಡಾ. ಅಜ್ಜಯ್ಯ ಅವರ ನೇತೃತ್ವದಲ್ಲಿ ಭರ್ಜರಿ ಕಾರ್ಯಾಚರಣೆ ನಡೆದಿದೆ. ಅಂದಾಜು 50 ಲಕ್ಷ ರೂ.ಗೂ ಮಿಕ್ಕಿದ ನಾಟಾಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾಗ ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿತಗಳನ್ನು ಕಲ್ಲಪ್ಪ ಬಸಪ್ಪಕೇಂಗಾಪುರ, ಹೈದರ್ ಅಲಿ ಮಹಮ್ಮ ಹನೀಪ ಫಾರಿ, ಗುಲಾಮ ಹುಸೇನ್, ಮಹ್ಮದ್ ಸೂಹೇಲ್ ಎಂದು ಗುರುತಿಸಲಾಗಿದೆ.ಅಧಿಕಾರಿಗಳು ಎರಡು ಲಾರಿಗಳನ್ನೂ ವಶಪಡಿಸಿಕೊಂಡಿದ್ದಾರೆ.
ಸಿ.ಸಿ.ಎಫ್. ವಸಂತ ರೆಡ್ಡಿ ಮಾರ್ಗದರ್ಶನದಲ್ಲಿ ಡಿ.ಎಫ್.ಓ ಅಜ್ಜಯ್ಯ, ಎ.ಸಿ.ಎಫ್. ಅಶೋಕ ಅಲಗೂರ, ಶಿರಸಿ ಆರ್.ಎಫ್.ಓ. ಶಿವಾನಂದ ನಿಂಗಾಣಿ ಹಾಗೂ ಸಿಬಂದಿಗಳು ಕಾರ್ಯಾಚರಣೆ ನಡೆಸಿದ್ದರು. ಶಿರಸಿಯ ಅರಣ್ಯ ಇಲಾಖೆಯ ಇತಿಹಾಸದಲ್ಲೇ ದೊಡ್ಡ ಪ್ರಮಾಣದ ಕಾರ್ಯಾಚರಣೆ ಇದಾಗಿದೆ.