ಶಿರಸಿ: ಬನವಾಸಿ ಸಮೀಪದ ಹಳ್ಳಕೊಪ್ಪ ಬಳಿ ಅರಣ್ಯದಲ್ಲಿ ಹತ್ಯೆಯಾದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾದ 48 ಗಂಟೆಯೊಳಗೆ ಕೊಲೆ ಮಾಡಿದ ಮೂವರು ಆರೋಪಿಗಳನ್ನೂ ಬಂಧಿಸಿ ಕೃತ್ಯಕ್ಕೆ ಬಳಸಿದ ವಸ್ತುಗಳನ್ನೂ ವಶಪಡಿಸಿಕೊಂಡು ಕಾನೂನು ಕ್ರಮ ಜರುಗಿಸುವಲ್ಲಿ ಶಿರಸಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೃತ ವ್ಯಕ್ತಿಯನ್ನು ಹಾವೇರಿ ಹಾನಗಲ್ ಸಮೀಪದ ಹೊಸಗೆಜ್ಜೆಹಳ್ಳಿಯ ಅಶೋಕ್ ಗಿರಿಯಪ್ಪ ಉಪ್ಪಾರ್ (೪೮)ಎಂದು ಗುರುತಿಸಲಾಗಿದ್ದು. ಶವದ ಗುರುತು ಪತ್ತೆಯಾದ 48 ಗಂಟೆ ಒಳಗೆ ಹಣದ ಆಸೆಗೆ ಕೊಲೆ ಮಾಡಿದ ಮೂವರನ್ನು ಕೂಡ ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.
ಕೊಲೆಯಾದ ವ್ಯಕ್ತಿಯ ಊರಿನವರು ಹಾಗೂ ಕೆಲಸ ಕೊಟ್ಟ ಯಜಮಾನನ್ನೇ ಕೊಂದಿದ್ದು ಹಣದ ಅತಿ ಆಸೆಗೆ ಸಾಕ್ಷಿಯಾಗಿದೆ.
ಹಾವೇರಿಯ ಹೊಸಗೆಜ್ಜೆಹಳ್ಳಿಯ ಕಿರಣ್ ಪರಶುರಾಮ್ ಸುರುಳೇಶ್ವರ್ (23), ನಿರಂಜನ್ ಗೋವಿಂದಪ್ಪ ತಳವಾರ್ (19), ಗುಡ್ಡಪ್ಪ ಕೊಟಪ್ಪ ತಿಳುವಳ್ಳಿ (19) ಬಂಧಿತ ಆರೋಪಿಗಳು.
ಕಾರ್ಯಾಚರಣೆಯಲ್ಲಿ ಎಸ್ ಪಿ ವಿಷ್ಣುವರ್ಧನ್, ಡಿಎಸ್ಪಿ ಗಣೇಶ ಕೆ.ಎಲ್ ಮಾರ್ಗದರ್ಶನ ಸಿಪಿಐ ರಾಮಚಂದ್ರ ನಾಯಕ, ಪಿಎಸ್ಐ ಚಂದ್ರಕಲಾ ಪತ್ತಾರ್, ಸುನಿಲ್ ಕುಮಾರ್ ಬಿವೈ, ಮಹಾಂತೇಶ್ ಕಂಬಾರ್, ಚಂದ್ರಪ್ಪ ಕೊರವರ್, ಅನ್ಸಾರಿ, ಬಸವರಾಜ್ ಜಾಡರ್, ಜಗದೀಶ್ ಕೆ, ಬಸವರಾಜ್ ಮಾಗೇರಿ, ರಾಜು ಸಲಗಾವಿ, ಸಹದೇವ್, ಮಹಾಂತೇಶ್ ರಾಮಯ್ಯ, ನಾಗಪ್ಪ ಲಮಾಣಿ, ಸದ್ದಾಮ್ ಹುಸೇನ್, ಮುಕ್ತಿಯಾರ್, ಮಲ್ಲೇಶ್, ಪಾಲ್ಗೊಂಡಿದ್ದರು. ಜಿಲ್ಲಾ ಎಸ್ಪಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಅಧಿಕಾರಿಗಳನ್ನು ಅಭಿನಂದಿಸಿದ್ದಾರೆ.
ಇದನ್ನೂ ಓದಿ: ಸುಲಭವಾಗಿ ಮನೆಯಲ್ಲೇ ಮಣ್ಣಿನ ಗಣಪತಿ ಮಾಡುವುದು ಹೇಗೆ ಇಲ್ಲಿದೆ ವಿಡಿಯೋ