Advertisement

Sirsi: ಸರಣಿ ಅಪಘಾತ; ರಸ್ತೆ ಬಿಟ್ಟು ಅಂಗಡಿಗಳಿಗೆ ನುಗ್ಗಿದ ವಾಹನಗಳು

11:58 AM Aug 03, 2023 | Team Udayavani |

ಶಿರಸಿ: ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿ ವಾಹನಗಳು ರಸ್ತೆ ಬಿಟ್ಟು ಅಂಗಡಿಗಳಿಗೆ ನುಗ್ಗಿ ಅನಾಹುತ ಸೃಷ್ಟಿಸಿದ ಘಟನೆ ತಾಲೂಕಿನ ಬಿಸಿಲಕೊಪ್ಪದಲ್ಲಿ ಆ.3ರ ಗುರುವಾರ ನಡೆದಿದೆ.

Advertisement

ಬೊಲೆರೋ ಪಿಕಪ್, ಎನ್.ಡಬ್ಲೂ,ಕೆ.ಎಸ್ .ಆರ್ .ಟಿ.ಸಿ ಬಸ್ ಹಾಗೂ ಮಾರುತಿ ಓಮಿನಿ ನಡುವೆ ಸರಣಿ ಅಪಘಾತವಾಗಿದೆ. ಓಮಿನಿ ಮತ್ತು ಬೊಲೆರೋ ಪಿಕಪ್ ವಾಹನ ರಸ್ತೆ ಪಕ್ಕದಲ್ಲಿದ್ದ ಅಂಗಡಿಗೆ ನುಗ್ಗಿದ್ದು, ವಾಹನ ಚಾಲಕರು ಸೇರಿ  ಕೆಲವರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಶಿರಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಳಗಿಯಿಂದ ಶಿರಸಿಗೆ ಸಾಗುತಿದ್ದ ಪಿಕಪ್ ವಾಹನ ಹಾಗೂ ಓಮಿನಿ ಶಿರಸಿಯಿಂದ ಹಾವೇರಿಗೆ ಸಾಗುತಿದ್ದ ಬಸ್ ನಡುವೆ ಅಪಘಾತ ಸಂಭವಿಸಿದ ಘಟನೆ ನಡೆದಿದ್ದು, ಈ  ಕುರಿತು ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next