Advertisement

ಶಿರಸಿಗೂ 24×7 ನೀರಿಗೆ‌ ಆದ್ಯತೆ : ವಿಶ್ವೇಶ್ವರ ಹೆಗಡೆ ಕಾಗೇರಿ

01:40 PM Jun 29, 2021 | Team Udayavani |

ಶಿರಸಿ: ನಗರದಲ್ಲಿ ದಿನದ 24 ಗಂಟೆ ನೀರು ಪೂರೈಸಲು ಆದ್ಯತೆಯಲ್ಲಿ‌ ಕೆಲಸ‌‌ ಮಾಡಲಾಗುತ್ತಿದೆ ಎಂದು‌ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

Advertisement

ಅವರು‌ ನಗರ ಸಭೆಯಲ್ಲಿ‌ ಸಭೆ ನಡೆಸಿ ಶಿರಸಿಗೆ‌ ಮಾರಿಗದ್ದೆ ಹಾಗೂ ಕೆಂಗ್ರೆಯಿಂದ ಶಿರಸಿಗೆ‌ ಕುಡಿಯುವ‌ ನೀರು ಬರುತ್ತಿದೆ. ನೀರಿನ ಪೈಪಿನ ಬದಲಾವಣೆ, ಪಂಪ್ ಅಳವಡಿಕೆ, ಐದು ಲಕ್ಷ ಸಾಮರ್ಥ್ಯ ದ ಮೂರು ಓವರ್ ಹೆಡ್ ಟ್ಯಾಂಕ್ ಅಳವಡಿಕೆ ಮಾಡಲಾಗುತ್ತದೆ.

ಕೆಂಗ್ರೆ ಹೊಳೆಯಿಂದ ೮ವರೆ‌ಕಿಮಿ‌ ಶಿರಸಿಗೆ ಒಂದಡಿ ಗಾತ್ರದ ಪೈಪ್ ಅಳವಡಿಕೆ ಮಾಡಲಾಗುತ್ತದೆ ಎಂದರು.
೩೮ ಕೋಟಿ ರೂಪಾಯಿ ಮೊತ್ತದಲ್ಲಿ ಕಾಮಗಾರಿ ‌ಜು.21ರಿಂದ ಪ್ರಾರಂಭ ಮಾಡಲಾಗುತ್ತದೆ. 18 ತಿಂಗಳ ಅವಧಿಯಲ್ಲಿ ‌ಮುಗಿಯಲಿದೆ‌. ೧೦ ಸಾವಿರ ಮನೆಗಳಿಗೆ‌ ಸಂಪರ್ಕ ಆಗಲಿದೆ. ಶೀಘ್ರ ಕಾಮಗಾರಿ ನಡೆಸಲಾಗುತ್ತದೆ. ಜಲ ಶುದ್ದೀಕರಣ ಘಟಕ ಪ್ರಸ್ತಾಪ ಕೂಡ ಇದೆ. ಈ ಬಗ್ಗೂ ಪ್ರಯತ್ನ ಮಾಡಲಾಗುತ್ತದೆ. ಎಂದರು.

ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ಪೌರಾಯುಕ್ತ ಕೇಶವ ಚೌಗಳೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next