Advertisement

ಇದ್ದೂಇಲ್ಲದಂತಾದ ನೆಮ್ಮದಿ ಕೇಂದ್ರ

02:57 PM Aug 30, 2021 | Team Udayavani |

ವಿಶೇಷ ವರದಿ

Advertisement

ಸಿರುಗುಪ್ಪ: ತಾಲೂಕಿನ ಸಿರಿಗೇರಿ ಗ್ರಾಮದಲ್ಲಿರುವ ನೆಮ್ಮದಿ ಕೇಂದ್ರ ಇದ್ದು ಇಲ್ಲದಂತಾಗಿದ್ದು, ಸಾರ್ವಜನಿಕರ ಯಾವುದೇ ಕೆಲಸ ಕಾರ್ಯಗಳು ನೆಮ್ಮದಿ ಕೇಂದ್ರದಲ್ಲಿ ಸಮರ್ಪಕವಾಗಿ ನಡೆಯದ ಕಾರಣ ಜನ ನೆಮ್ಮದಿ ಕೇಂದ್ರದ ಹೆಸರು ಕೇಳಿದರೆ ಸಾಕು ಬೆಚ್ಚಿಬೀಳುತ್ತಾರೆ. ತೆಕ್ಕಲಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಬರುವ ಸಿರಿಗೇರಿ ಗ್ರಾಮದಲ್ಲಿ ಹೆಚ್ಚುವರಿ ನೆಮ್ಮದಿ ಕೇಂದ್ರ ತೆರೆಯಬೇಕೆಂದು ಗ್ರಾಮಸ್ಥರು, ರಾಜಕೀಯ ಮುಖಂಡರು, ಒತ್ತಾಯಿಸಿದ್ದರಿಂದ ಸರ್ಕಾರ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಯಲ್ಲಿ ನೆಮ್ಮದಿ ಕೇಂದ್ರ ತೆರೆದಿದೆ.

ಪ್ರಾರಂಭದಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಿ ಪಹಣಿ, ಮುಟೇಶನ್‌ ಪ್ರತಿ, ಜಾತಿ-ಆದಾಯ, ಸಂಧ್ಯಾಸುರಕ್ಷಾ, ವಿಧವಾವೇತನ, ವಿಶೇಷಚೇತನರ ವೇತನ, ಕಲ್ಯಾಣ ಕರ್ನಾಟಕ, ವಾಸಸ್ಥಳ ಸೇರಿದಂತೆ ಇನ್ನಿತರ ಪ್ರಮಾಣಪತ್ರಗಳಿಗೆ ಅರ್ಜಿ ಪಡೆದು, ನಿಗದಿತ ಸಮಯದಲ್ಲಿ ಪ್ರಮಾಣ ಪತ್ರಗಳನ್ನು ವಿತರಿಸಲಾಗುತ್ತಿತ್ತು. ಆದರೆ ಕಳೆದ ಕೆಲವು ತಿಂಗಳಿನಿಂದ ಆಧಾರ್‌ ಕಾರ್ಡ್‌ ನೋಂದಣಿ ಮತ್ತು ತಿದ್ದುಪಡಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ನೆಮ್ಮದಿ ಕೇಂದ್ರದ ಕೆಲಸ ಮತ್ತು ಆಧಾರ್‌ ಕಾರ್ಡ್‌ ನೋಂದಣಿ, ತಿದ್ದುಪಡಿ ಕೆಲಸಗಳನ್ನು ಒಬ್ಬರೇ ನಿಭಾಯಿಸಿಕೊಂಡು ಹೋಗಬೇಕಾಗಿದೆ. ಈ ಭಾಗದಲ್ಲಿ ನೆಟ್‌ವರ್ಕ್‌ ಸಮಸ್ಯೆ ಮತ್ತೂಂದು ಕಡೆ ಕಾಡುತ್ತಿದ್ದು, ಪದೇ ಪದೇ ಕೈಕೊಡುತ್ತಿರುವ ವಿದ್ಯುತ್‌ ಸಮಸ್ಯೆ, ನೆಮ್ಮದಿ ಕೇಂದ್ರಕ್ಕೆ ಬರುವ ಜನರಿಗೆ ತಮ್ಮ ಯಾವುದೇ ಕೆಲಸಗಳಾಗದಿರುವುದು ಬೇಸರ ಮೂಡಿಸಿದೆ.

ತುರ್ತು ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸಲು ಇನ್‌ವರ್ಟ್‌ರ್‌ ವ್ಯವಸ್ಥೆ ಇಲ್ಲ. ಒಂದು ದಿನದಲ್ಲಿ 10 ಸಲ ವಿದ್ಯುತ್‌ ಕಣ್ಣಾಮುಚ್ಚಾಲೆ ಆಡುತ್ತದೆ. ಕರೆಂಟ್‌ ಇದ್ದಾಗ ನೆಟ್‌ವರ್ಕ್‌ ಸಮಸ್ಯೆ, ನೆಟ್‌ವರ್ಕ್‌ ಇದ್ದಾಗ ಕರೆಂಟ್‌ ಸಮಸ್ಯೆ ಇರುತ್ತದೆ, ಒಟ್ಟಾರೆ ನೆಮ್ಮದಿ ಕೇಂದ್ರದಲ್ಲಿ ನೆಮ್ಮದಿಯಾಗಿ ಸಾರ್ವಜನಿಕರ ಕೆಲಸ ಕಾರ್ಯಗಳು ನಡೆಯುತ್ತಿಲ್ಲ.

Advertisement

ಒಂದೇ ಸೂರಿನಡಿ ಕೆಲಸ: ಚಿಕ್ಕ ಕೋಣೆಯಲ್ಲಿ ನೆಮ್ಮದಿ ಕೇಂದ್ರ ಮತ್ತು ಗ್ರಾಮಲೆಕ್ಕಾಧಿಕಾರಿ ಕಚೇರಿ ಕಾರ್ಯ ನಿರ್ವಹಿಸುತ್ತದೆ. ಇಕ್ಕಟ್ಟಾದ ಚಿಕ್ಕದಾದ ಪ್ರಾಂಗಣದಲ್ಲಿ ನೆಮ್ಮದಿ ಕೇಂದ್ರದ ಕಂಪ್ಯೂಟರ್‌, ಪ್ರಿಂಟರ್‌, ಇತರೆ ಸಾಮಗ್ರಿಗಳ ತುಂಬಿವೆ. ಇದರಿಂದ ಗ್ರಾಮಲೆಕ್ಕಾಧಿಕಾರಿಗಳ ಕೆಲಸಕ್ಕೂ, ನೆಮ್ಮದಿ ಕೇಂದ್ರದ ಕೆಲಸಕ್ಕೂ, ಆಧಾರ್‌ ಕೆಲಸಕ್ಕೂ ತೊಂದರೆಯಾಗಿ ಜನರ ಗುಂಪಿನಲ್ಲಿ ಗ್ರಾಮಲೆಕ್ಕಾಧಿಕಾರಿ‌ಳ ಹತ್ತಿರ ಕೆಲಸ ಮಾಡಿಸಿಕೊಳ್ಳುವ ರೈತರಿಗೆ ತೊಂದರೆಯಾಗಿದೆ.

ಆಧಾರ್‌ ಕಾರ್ಡ್‌ ಮಾಡುವಾಗ ಇತರೆ ಕೆಲಸಕ್ಕೆ ಬಂದವರಿಗೆ ತೊಂದರೆ, ಪಹಣಿ, ಪ್ರಮಾಣ ಪತ್ರಗಳನ್ನುಪಡೆಯಲು,ಅರ್ಜಿಹಾಕಲುಬಂದವರಿಗೆ ಯಾವಾಗ ತೆಗೆದುಕೊಳ್ಳುತ್ತಾರೋ ಎಂದು ಕಾಯುತ್ತ ಕುಳಿತುಕೊಳ್ಳುವ ಪರಿಸ್ಥಿತಿ ನೆಮ್ಮದಿ ಕೇಂದ್ರಕ್ಕೆ ಬರುವ ಸಾರ್ವಜನಿರದ್ದಾಗಿದೆ. ಈ ಕಚೇರಿ ಮೇಲ್ಛಾವಣೆಯೂ ಶಿಥಿಲಗೊಂಡುಕಾಂಕ್ರಿಟ್‌ನಚೂರುಗಳುಕಂಪ್ಯೂಟರ್‌ ಕೀಬೋರ್ಡ್‌ ಮೇಲೆ, ಸಿಬ್ಬಂದಿ ತಲೆ ಮೇಲೆ ಉದುರಿ ಬೀಳುತ್ತಿವೆ. ದೊಡ್ಡ ಮಳೆ ಬಂದರೆ ಮಳೆನೀರು ಜಿನುಗುತ್ತವೆ.

ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಕಟ್ಟಡವನ್ನು ರಿಪೇರಿ ಮಾಡಿಸಬೇಕು. ನೆಮ್ಮದಿ ಕೇಂದ್ರಕ್ಕೆ ಮತ್ತೂಬ್ಬ ಸಿಬ್ಬಂದಿ ನೀಡಬೇಕು. ಸಾರ್ವಜನಿಕರಿಗೆ ವಿವಿಧ ಸೇವೆಗಳು ಸುಸೂತ್ರವಾಗಿ ದೊರೆಯಲು ಬೇಕಾದ ವ್ಯವಸ್ಥೆಯನ್ನು ಸಂಬಂಧಿಸಿದ ಅಧಿಕಾರಿಗಳುಮಾಡಿಕೊಟ್ಟರೆ ನೆಮ್ಮದಿಕೆಂದ್ರಕ್ಕೆಬರುವ ಜನರಿಗೆ ಸೇವೆಗಳು ದೊರೆಯಲು ಸಾಧ್ಯವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next