Advertisement

ಕ್ವಾರಂಟೈನ್‌ನಿಂದ ಬಿಡುಗಡೆಗೆ ಮಂಡ್ಯ ಜಿಲ್ಲೆ ವಿದ್ಯಾರ್ಥಿ ಆಗ್ರಹ

05:40 PM May 27, 2020 | Naveen |

ಸಿರಿಗೆರೆ: 14 ದಿನಗಳ ಕ್ವಾರಂಟೈನ್‌ ಅವಧಿಯನ್ನು ಪೂರೈಸಿರುವುದರಿಂದ ಬಿಡುಗಡೆ ಮಾಡುವಂತೆ ಬ್ಯಾಂಕಿಂಗ್‌ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಹೋಗಿ ಆಂಧ್ರಪ್ರದೇಶದ ನಂದ್ಯಾಲದಲ್ಲಿ ಸಿಲುಕಿಕೊಂಡು ನಂತರ ರಾಜ್ಯಕ್ಕೆ ಹಿಂದಿರುಗಿರುವ ವಿದ್ಯಾರ್ಥಿಯೊಬ್ಬ ಒತ್ತಾಯ ಮಾಡಿದ್ದಾನೆ.

Advertisement

ಬ್ಯಾಂಕಿಂಗ್‌ ಪರೀಕ್ಷೆಗಳಿಗೆ ತರಬೇತಿ ಪಡೆಯಲು ರಾಜ್ಯದ ವಿವಿಧ ಜಿಲ್ಲೆಗಳಿಂದ ನಂದ್ಯಾಲಕ್ಕೆ ಹೋಗಿದ್ದ ಸುಮಾರು 100 ವಿದ್ಯಾರ್ಥಿಗಳು ಲಾಕ್‌ಡೌನ್‌ ಕಾರಣಕ್ಕೆ ಅಲ್ಲಿ ಸಿಲುಕಿಕೊಂಡಿದ್ದರು. ಅವರನ್ನು ಅಲ್ಲಿಂದ ರಾಜ್ಯಕ್ಕೆ ಕರೆತರಲು ತರಳಬಾಳು ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದರು. ರಾಜ್ಯಕ್ಕೆ ಬರುವ ಮುನ್ನ ವಿದ್ಯಾರ್ಥಿಗಳನ್ನು ನಂದ್ಯಾಲದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಹೀಗೆ ತನ್ನೂರಿಗೆ ಬಂದ ಎನ್‌.ಆರ್‌. ಹರೀಶ್‌ ಎಂಬ ವಿದ್ಯಾರ್ಥಿಯನ್ನು ಮಂಡ್ಯ ಜಿಲ್ಲೆಯ ಸಂತೆಕಸಲಗೆರೆಯ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಕ್ವಾರಂಟೈನ್‌ ಮಾಡಲಾಗಿದೆ. ಈಗ ಆತನ ಕ್ವಾರಂಟೈನ್‌ ಅವಧಿ ಮುಗಿದಿದ್ದರೂ ಬಿಡುಗಡೆ ಸಾಧ್ಯವಾಗುತ್ತಿಲ್ಲದಿರುವಕ್ಕೆ ವಿದ್ಯಾರ್ಥಿ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಕೋವಿಡ್ ಪರೀಕ್ಷೆಗಾಗಿ ಗಂಟಲು ಮಾದರಿಯನ್ನು ಪರೀಕ್ಷೆಗೆ ತೆಗೆದುಕೊಳ್ಳಲಾಗಿತ್ತು. ಎರಡನೇ ಬಾರಿ ಮಾದರಿಯನ್ನು ತೆಗೆದುಕೊಳ್ಳುವ ಅಗತ್ಯವಿಲ್ಲವೆಂದೂ ತಿಳಿಸಲಾಗಿತ್ತು. ಆದರೆ ಈಗ 14 ದಿನಗಳ ಕ್ವಾರಂಟೈನ್‌ ಅವಧಿ ಮುಗಿದಿದ್ದರೂ ಬಿಡುಗಡೆಗೊಳಿಸುತ್ತಿಲ್ಲವೆಂದೂ ಈಗ ಎರಡನೆ ಪರೀಕ್ಷೆಗೆ ಮಾದರಿಯನ್ನು ತೆಗೆದು ಕೊಳ್ಳಲಾಗುವುದೆಂದು ಹೇಳಲಾಗುತ್ತಿದೆ. ತನ್ನ ಜೊತೆಗಿದ್ದ ಚಿತ್ರದುರ್ಗ, ಶಿವಮೊಗ್ಗ, ದೊಡ್ಡಬಳ್ಳಾಪುರ, ದಕ್ಷಿಣ ಕನ್ನಡ, ಹಾವೇರಿ ಜಿಲ್ಲೆಗಳ ವಿದ್ಯಾರ್ಥಿಗಳನ್ನು ಬಿಡುಗಡೆಗೊಳಿಸಲಾಗಿದೆ. ಆದ್ದರಿಂದ ಪೂಜ್ಯರು ನನ್ನ ಬಿಡುಗಡೆಗೆ ಸಹಾಯ ಮಾಡಬೇಕಾಗಿ ಕೋರಿದ್ದಾನೆ.

ರಾಜ್ಯದ ವಿದ್ಯಾರ್ಥಿಗಳಿದ್ದ ಪ್ರದೇಶದಲ್ಲಿ ಕೋವಿಡ್ : ರಾಜ್ಯದ ಸುಮಾರು 100 ವಿದ್ಯಾರ್ಥಿಗಳು ವಾಸ ಮಾಡುತ್ತಿದ್ದ ನಂದ್ಯಾಲದ ಎನ್‌ಜಿಒ ಕಾಲೋನಿಯಲ್ಲಿ ಈಗ ಎರಡು ಕೋವಿಡ್ ಪ್ರಕರಣಗಳು ಪತ್ತೆಯಾಗಿ ಆ ಭಾಗ ಸೀಲ್‌ಡೌನ್‌ ಆಗಿರುವುದಾಗಿ ವರದಿಯಾಗಿದೆ. ಸಕಾಲದಲ್ಲಿ ತಾವು ನೆರವಾಗಿ ನಮ್ಮನ್ನು ಇಲ್ಲಿಂದ ರಕ್ಷಿಸದೇ ಇದ್ದಲ್ಲಿ ನಾವು ಕೂಡ ವೈರಾಣು ದಾಳಿಗೆ ತುತ್ತಾಗಿ ಸಂಕಷ್ಟ ಅನುಭವಿಸಬೇಕಾಗುತ್ತಿತ್ತು. ತಾವು ನಮ್ಮ ಬಾಳಿನಲ್ಲಿ ಬೆಳಕಾಗಿ ಬಂದು ನಮ್ಮನ್ನು ರಕ್ಷಿಸಿದಿರಿ. ನಮ್ಮೆಲ್ಲರ ವತಿಯಿಂದ ತಮಗೆ ಕೃತಜ್ಞತೆ ಸಮರ್ಪಿಸುವುದಾಗಿ ಶಿವರೆಡ್ಡಿ ಎಂಬ ವಿದ್ಯಾರ್ಥಿ ಶ್ರೀಗಳಿಗೆ ಕೃತಜ್ಞತೆ ಸಲ್ಲಿಸಿದ್ದಾನೆ. ಮೈಸೂರು ಜಿಲ್ಲೆಯ ವಿದ್ಯಾರ್ಥಿಗಳು ಕ್ಷೇಮವಾಗಿ ಮನೆಗೆ ಮರಳಿರುವುದಾಗಿ ಶ್ರೀಗಳಿಗೆ ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next