Advertisement
ಪ್ರತಿಕೂಲ ಹವಾಮಾನದ ನಡುವೆ ಬಂಡೆ ಸ್ಫೋಟಿಸಿ ಪುಡಿ ಮಾಡಿ ತೆರವುಗೊಳಿಸುವ ಕೆಲಸ ನಡೆಯುತ್ತಿದೆ. ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೈಲ್ವೇ ವಿಭಾಗದ ಸುಮಾರು ಎಂಬತ್ತರಷ್ಟು ಮಂದಿ ಕಾರ್ಮಿಕರು ಹಿಟಾಚಿ, ಕಂಪ್ರಶರ್ ಮೂಲಕ ಕೆಲಸ ನಿರತರಾಗಿದ್ದಾರೆ. ಒಂದೆಡೆ ತೆರವು ಕಾಮಗಾರಿ ನಡೆಯುತ್ತಿದ್ದರೆ ಇನ್ನೊಂದೆಡೆ ಮತ್ತೆ ಬಂಡೆಯ ಛಿದ್ರ ಭಾಗಗಳು ಮತ್ತು ಮಣ್ಣು ಹಳಿಯ ಮೇಲೆ ಕುಸಿಯುತ್ತಿವೆ. ಇದು ಕಾರ್ಯಾ ಚರಣೆ ಮತ್ತಷ್ಟು ಮುಂದುವರಿ ಯುವ ಮುನ್ಸೂಚನೆ ನೀಡಿದೆ.
Related Articles
ಕಂಪ್ರಸರ್ ಬಳಸಿ ಬಂಡೆಗಲ್ಲು ಪುಡಿ ಮಾಡುವ ಕೆಲಸ ನಡೆಯುತ್ತಿದ್ದು, ಸೋಮವಾರ ಮೂರು ಬಾರಿ ಬಂಡೆ ಸ್ಫೋಟಿಸಲಾಗಿದೆ. ಇದುವರೆಗೆ ಸುಮಾರು ಹತ್ತು ಬಾರಿ ಸ್ಫೋಟಕ ಸಿಡಿಸಿ ಬಂಡೆ ಪುಡಿ ಮಾಡಲಾಗಿದೆ. ಕಾರ್ಯಾಚರಣೆ ಹಗಲು ಮತ್ತು ರಾತ್ರಿ ಎರಡೂ ಪಾಳಿಯಲ್ಲಿ ನಡೆಯುತ್ತಿದೆ. ಭಾರೀ ಮಳೆ ಆಗುತ್ತಿರುವುದರಿಂದ ನಿರೀಕ್ಷಿತ ವೇಗದಲ್ಲಿ ಕೆಲಸ ಮಾಡಲಾಗುತ್ತಿಲ್ಲ. ರಾತ್ರಿ ಕಾಮಗಾರಿ ನಡೆಸಲು ಬೆಳಕಿನ ಸಮಸ್ಯೆಯೂ ಇದೆ. ಕಿರು ಜನರೇಟರ್ ಬಳಸಿ ಕಾಮಗಾರಿ ನಡೆಸಲಾಗುತ್ತಿದೆ. ಇಕ್ಕಟ್ಟಾಗಿರುವ ಈ ಜಾಗದಿಂದ ತೆರವು ಮಾಡಿದ ಮಣ್ಣು -ಕಲ್ಲು ಹಾಕಲು ಜಾಗದ ಕೊರತೆ ಎದುರಾಗಿದೆ.
Advertisement
ಯಂತ್ರಗಳಿಗೆ ಇಂಧನ ಮತ್ತು ಕಾರ್ಮಿಕರಿಗೆ, ಅಧಿಕಾರಿಗಳಿಗೆ ಆಹಾರ ಇತ್ಯಾದಿಗಳನ್ನು ನೆಟ್ಟಣ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಿಂದ ಟ್ರಾಲಿ ಮೂಲಕ ಕೊಂಡೊಯ್ಯಲಾಗುತ್ತಿದೆ. ಬಂಡೆ ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಜು.24ರ ವರೆಗೆ ಮಂಗಳೂರು -ಬೆಂಗಳೂರು ನಡುವಣ ಎಲ್ಲ ಹಗಲು ಸಂಚಾರಿ ರೈಲುಗಳನ್ನು ರದ್ದು ಮಾಡಲಾಗಿದ್ದು, ರಾತ್ರಿ ರೈಲುಗಳು ಬದಲಿ ಮಾರ್ಗದಲ್ಲಿ ಸಂಚರಿಸಲಿವೆ.