Advertisement

ಪೆರಂಪಳ್ಳಿಯಲ್ಲಿ “ಸಿರಿ ತುಪ್ಪೆ – 2018′ 

06:00 AM Apr 11, 2018 | Team Udayavani |

ಉಡುಪಿ: ಇನ್ನೇನು ಮಳೆಗಾಲ ಪ್ರಾರಂಭಗೊಳ್ಳಲು ಕೆಲವೇ ವಾರಗಳು ಉಳಿದಿವೆ. ಇದೀಗ ಮಳೆಯನ್ನೇ ನಂಬಿ ಕೃಷಿ ಕಾಯಕ ಮಾಡುವ ರೈತಾಪಿ ಜನರು ಸಜ್ಜುಗೊಳ್ಳುತ್ತಿದ್ದಾರೆ. ಇಂಥ ರೈತರಿಗೆ ಸ್ಫೂರ್ತಿ ನೀಡಲೋ ಎಂಬಂತೆ ಪೆರಂಪಳ್ಳಿಯಲ್ಲಿ ಎ. 8ರಂದು ಜರಗಿದ “ಸಿರಿ ತುಪ್ಪೆ – 2018′ ಕಾರ್ಯಕ್ರಮ ಅಪಾರ ಜನಮನ ಸೆಳೆಯಲು ಕಾರಣವಾಯಿತು.

Advertisement

ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್‌ ರಾಮಕೃಷ್ಣ ಶರ್ಮ ಕಾರ್ಯಕ್ರಮ ಉದ್ಘಾಟಿಸಿದರು. ಈ ಮೇಳದಲ್ಲಿ ಭಾಗವಹಿಸಿದ  ಉಡುಪಿ ಕೃಷಿ ನಿರ್ದೇಶಕರಾದ ಮೋಹನ್‌ ರಾಜ್‌, ಮೆಸ್ಕಾಂ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ಎಸ್‌. ಗಣರಾಜ ಭಟ್‌, ಮಂಗಳೂರು ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಮುಖ್ಯ ನಿರ್ವಹಣಾಧಿಕಾರಿ ಉದಯ ಜಿ. ಹೆಗ್ಡೆ, ಉಡುಪಿ ಸಿರಿ ತುಳು ಚಾವಡಿಯ ಗುರಿಕಾರ ಈಶ್ವರ ಚಿಟಾ³ಡಿ, ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್‌, ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್‌, ಪಶು ವೈದ್ಯಾಧಿಕಾರಿ ಡಾ. ಸಂದೀಪ್‌ ಶೆಟ್ಟಿ ರೈತರಿಗೆ ಸೂಕ್ತ ಮಾರ್ಗದರ್ಶನವನ್ನು ನೀಡಿದರು.

ಸಮ್ಮಾನ
ಸಮ್ಮೇಳನದಲ್ಲಿ ಹಿರಿಯ ಕೃಷಿಕ ಅಂತಪ್ಪ ಪೂಜಾರಿ ಪೆರಂಪಳ್ಳಿ ಮತ್ತು ಶ್ರೀನಿವಾಸ ಬಲ್ಲಾಳ್‌ ಅವರನ್ನು ಸಮ್ಮಾನಿಸ ಲಾಯಿತು. ಉಡುಪಿ ಜಿಲ್ಲಾ  ಕೃಷಿಕ ಸಂಘ ಹಾಗೂ ವಿಜಯಾ ಗ್ರಾಮೀಣ ಅಭಿವೃದ್ಧಿ   ಪ್ರತಿಷ್ಠಾನ ಮಂಗಳೂರು ಇವರ ಸಹಯೋಗದಲ್ಲಿ ಈ ಕೃಷಿ ಮೇಳವನ್ನು ಪೆರಂಪಳ್ಳಿ  ಕೃಷಿ ಸಂಘದ ಮುಖಂಡರಾದ ಸುಬ್ರಹ್ಮಣ್ಯ ಶ್ರೀಯಾನ್‌, ಶೀಂಬ್ರ ರವೀಂದ್ರ ಪೂಜಾರಿ, ಪೀಟರ್‌ ಡಿ’ಸೋಜಾ, ಜಯ ಸಾಲಿಯಾನ್‌, ಶಂಕರ್‌ ಸುವರ್ಣ, ಜೇಮ್ಸ್‌, ವಿಲಿಯಮ್ಸ್‌, ರಫೇಲ್‌ ಡಿ’ಸೋಜಾ, ಫೆಡ್ರಿಕ್‌ ಡಿ’ಸೋಜಾ ಮೊದಲಾದವರು ಸಂಘಟಿಸಿದ್ದರು. ಪ್ರಶಾಂತ್‌ ಶೆಟ್ಟಿ ಹಾವಂಜೆ ಅವರು ಕಾರ್ಯಕ್ರಮ ನಿರೂಪಿಸಿದರು.

ಪುರಾತನ ಕೃಷಿ ಪರಿಕರ, ಆಧುನಿಕ ಯಂತ್ರಗಳ ಪ್ರದರ್ಶನ
ಪೆರಂಪಳ್ಳಿ ಬೊಬ್ಬರ್ಯ ಕಟ್ಟೆ ವಠಾರದಲ್ಲಿ ಜರಗಿದ ಈ ಕೃಷಿ ಮೇಳದಲ್ಲಿ ಹಸಿರು ಶಾಲುಗಳು ರಾರಾಜಿಸಿದ್ದವು. ರೈತರ ಪುರಾತನ ಕೃಷಿ ಪರಿಕರಗಳ ಸಹಿತ ಆಧುನಿಕ ಉಳುವ ಯಂತ್ರಗಳೂ ಮೇಳದಲ್ಲಿ ಪ್ರದರ್ಶನಗೊಂಡವು. ಸಾವಯವ ಗೊಬ್ಬರ ಬಳಸಿ ಬೆಳೆದ ತರಕಾರಿಗಳು ಭರ್ಜರಿ ಮಾರಾಟಗೊಂಡವು. ಭಾಗವಹಿಸಿದವರೆಲ್ಲರೂ ತುಳುವರ “ಪೆಲಕಾಯಿ ಗಟ್ಟಿ’ಯನ್ನು ಸವಿದರು. ಈಶ್ವರ್‌ ಚಿಟಾ³ಡಿ, ಕುದಿ ವಸಂತ ಶೆಟ್ಟಿ, ಶ್ರೀಕಾಂತ್‌ ಶೆಟ್ಟಿ ಇವರ “ಸಿರಿ ತುಳು ಚಾವಡಿ’ ಹಾಗೂ ಸ್ಥಳೀಯ “ಶೀಂಬ್ರ ಅರುಣಾ ಹೇಮಾ ಪ್ರೇಮಾ’ ತಂಡದಿಂದ “ಅಂಗಣದ ಸಿರಿ’ ಸಾಂಸ್ಕೃತಿಕ ಕಾರ್ಯಕ್ರಮ ಮೆಚ್ಚುಗೆಯನ್ನು ಗಳಿಸಿತು. ಮೂಲ್ಕಿ ದಪ್ಪುಣಿ ಗುತ್ತು ಕಿಶೋರ್‌ ಶೆಟ್ಟಿ ಅವರಿಂದ “ಜುಮಾದಿ ದೈವ’ವನ್ನು ಉಂಟು ಮಾಡುವ ಮದಿಪುಗಾರಿಕೆ ಭರ್ಜರಿ ಕರತಾಡನವನ್ನು  ಗಿಟ್ಟಿಸಿಕೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next