Advertisement

ಧಾರ್ಮಿಕ ಕಾರ್ಯದಿಂದ ನೆಮ್ಮದಿ

11:22 AM Aug 28, 2019 | Naveen |

ಸಿರವಾರ: ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ನೆಮ್ಮದಿ ಜೊತೆಗೆ ಸಂತೋಷದ ಜೀವನ ನಡೆಸಲು ಸಾಧ್ಯ ಎಂದು ಕಲ್ಲೂರು ಅಡವೇಶ್ವರ ಮಠದ ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ಸಮೀಪದ ದೇವದುರ್ಗ ತಾಲೂಕಿನ ಯರಮರಸ್‌ ಗ್ರಾಮದ ಗುಡ್ಡದ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಇತ್ತೀಚೆಗೆ ನಡೆದ ಶಿವಾನುಭವಗೋಷ್ಠಿಯಲ್ಲಿ ಅವರು ಮಾತನಾಡಿದರು. ದಿನನಿತ್ಯದ ಜಂಜಾಟದ ಜೀವನದಿಂದ ಮಾನಸಿಕವಾಗಿ ಕುಗ್ಗಿ ಹೋಗಿರುತ್ತೇವೆ. ಈ ರೀತಿಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಅನೇಕ ಸಂತ-ಮಹನೀಯರ ಆಶೀರ್ವಾದ ದೊರೆಯುತ್ತದೆ. ನಶಿಸಿ ಹೋಗುವ ಈ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ಸಜ್ಜನರ ಸಹವಾಸ ಮಾಡಬೇಕು. 12ನೇ ಶತಮಾನದಲ್ಲಿ ವಚನಗಳನ್ನು ರಚಿಸಿದ ಮಹಾತ್ಮರ ಜೀವನವನ್ನು ಅಳವಡಿಸಿಕೊಂಡರೆ ಬದುಕಿಗೆ ಅರ್ಥ ಬರುತ್ತದೆ ಎಂದರು.

ನೀಲಗಲ್ ಬೃಹನ್ಮಠದ ಬಾಲಯೋಗಿ ಶ್ರೀ ರೇಣುಕಾ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಮ್ಮ ನಡತೆಯು ಮತ್ತೂಬ್ಬರಿಗೆ ನೋವು ಉಂಟಾಗುವಂತೆ ಇರಬೇಕು. ದುಡಿಯುವ ಅಲ್ಪ ಹಣದಲ್ಲಿ ದಾನವನ್ನು ಮಾಡಿದರೆ ನೆಮ್ಮದಿ ಜೀವನದ ಜೊತೆಗೆ ಸಾರ್ಥಕತೆಯ ಬದುಕು ನಡೆಸಬಹುದು ಎಂದರು.

ಕಾರ್ಯಕ್ರಮಕ್ಕೂ ಮೊದಲು ಜೋಡು ಉಚ್ಛಾಯ ಮಹೋತ್ಸವ ವಾದ್ಯವೈಭವದೊಂದಿಗೆ ವಿಜೃಂಭಣೆಯಿಂದ ನಡೆಯಿತು.

ಸುಲ್ತಾನಪುರದ ಶ್ರೀ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಯರಮರಸ್‌ ಮಠದ ಚರಬಸವ ತಾತಾ, ಸಿದ್ಧಾರೂಢಸ್ವಾಮಿ, ಗುರುಸ್ವಾಮಿ, ಶ್ರೀಶೈಲಸ್ವಾಮಿ, ಚನ್ನಬಸವತಾತಾ, ತಾಪಂ ಸದಸ್ಯ ಉಮೇಶಗೌಡ, ಮುಖಂಡರಾದ ಆರ್‌.ಎಸ್‌.ಪಾಟೀಲ, ನಾಗನಗೌಡ, ಕೈಲಾಸತಾತಾ, ಅಮರಪ್ಪ ಬಾಡಲ್, ಬಸವರಾಜಪ್ಪಗೌಡ, ಶಿವಶರಣಗೌಡ ಲಕ್ಕಂದಿನ್ನಿ, ಶರಣಗೌಡ ಪೊಲೀಸ್‌ ಪಾಟೀಲ, ನಾಗರಾಜಗೌಡ ಡಿ.ಎನ್‌.ವೈ. ಸೇರಿದಂತೆ ಅನೇಕರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next